'ಫಸ್ಟ್ ಹಾಫ್'ನಲ್ಲಿ ಶಿವಣ್ಣ ಕಿಂಗ್: ಸೆಂಚುರಿ ಸ್ಟಾರ್ ನ ಯಾರೂ ಮುಟ್ಟೋಕೆ ಆಗಲಿಲ್ಲ.!

By Harshitha

Recommended Video

ಶಿವಣ್ಣನಿಗೆ ಸರಿಸಾಟಿ ಯಾರು ..? | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್... ಇವರೆಲ್ಲರೂ ಸದ್ಯ ವರ್ಷಕ್ಕೆ ಒಂದು ಸಿನಿಮಾ ಮಾಡ್ತಾಯಿದ್ದಾರೆ.

ಆದ್ರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗಲ್ಲ. ವಯಸ್ಸು 55 ಆಗಿದ್ದರೂ, ಶಿವಣ್ಣ ಈಗಲೂ ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಬಿಜಿಯೆಸ್ಟ್ ಸ್ಟಾರ್. ಸದಾ ಒಂದಲ್ಲಾ ಒಂದು ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಶಿವಣ್ಣ, ವರ್ಷಕ್ಕೆ ಏನಿಲ್ಲ ಅಂದರೂ ಎರಡ್ಮೂರು ಸಿನಿಮಾ ಕೊಡ್ತಾರೆ.

ಶಿವಣ್ಣನ ಸಿನಿಮಾ ಹಿಟ್ ಆದರೂ, ಫ್ಲಾಪ್ ಆದರೂ ನಿರ್ಮಾಪಕರ ಜೇಬಿಗಾಗಲಿ, ಗಾಂಧಿನಗರದ ವಹಿವಾಟಿಗಾಗಲಿ ಯಾವತ್ತೂ ನಷ್ಟ ಆಗಿಲ್ಲ. ಇದೇ ಕಾರಣಕ್ಕೆ ನೋಡಿ ಶಿವಣ್ಣನ ಕಾಲ್ ಶೀಟ್ ಗಾಗಿ ಈಗಲೂ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ.

ಈ ವರ್ಷ ಕೂಡ ಅಷ್ಟೇ, ಬೇರೆ ಯಾವ ಸ್ಟಾರ್ ನಟರು ಇನ್ನೂ ತೆರೆ ಮೇಲೆ ಅಬ್ಬರಿಸಲು ಆರಂಭಿಸಿಲ್ಲ. ಆದ್ರೆ, ವರ್ಷಾರಂಭದಲ್ಲಿಯೇ ಪೊಗರು ತುಂಬಿದ 'ಟಗರು' ಆಗಿ ಬಂದ ಶಿವಣ್ಣ ಸೆಂಚುರಿ ಬಾರಿಸಿದರು. ಹೀಗಾಗಿ, 'ಫಸ್ಟ್ ಹಾಫ್'ನಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಅಕ್ಷರಶಃ 'ಚಕ್ರವರ್ತಿ'.! ಮುಂದೆ ಓದಿರಿ...

ಶಿವಣ್ಣ 'ಕಿಂಗ್'

ಶಿವಣ್ಣ 'ಕಿಂಗ್'

2018 ರಲ್ಲಿ ಬಿಡುಗಡೆ ಆದ 98 ಚಿತ್ರಗಳ ಪೈಕಿ ಶತದಿನೋತ್ಸವ ಬಾರಿಸಿದ ಏಕೈಕ ಸಿನಿಮಾ 'ಟಗರು'. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸೂಪರ್ ಹಿಟ್ ಆಗುವುದರ ಜೊತೆಗೆ ನಿರ್ಮಾಪಕರಿಗೆ ಸಿಕ್ಕಾಪಟ್ಟೆ ಲಾಭ ಮಾಡಿ ಕೊಟ್ಟಿದೆ. 'ಟಗರು' ಯಶಸ್ವಿ ಆದ ರೇಂಜಿಗೆ ಬೇರೆ ಯಾವ ಚಿತ್ರವೂ ಸಕ್ಸಸ್ ಆಗಿಲ್ಲ. ಹೀಗಾಗಿ ಫಸ್ಟ್ ಹಾಫ್ ನಲ್ಲಿ 'ಶಿವಣ್ಣ'ನೇ ಕಿಂಗ್.!

ಈ ವರ್ಷ ತೆರೆ ಮೇಲೆ ಮಿಂಚಿದ ಸ್ಟಾರ್ ಗಳಿವರು...

ಈ ವರ್ಷ ತೆರೆ ಮೇಲೆ ಮಿಂಚಿದ ಸ್ಟಾರ್ ಗಳಿವರು...

ಮನೋರಂಜನ್ ರವಿಚಂದ್ರನ್ (ಬೃಹಸ್ಪತಿ), ಚಂದನ್ ಕುಮಾರ್ (ಪ್ರೇಮ ಬರಹ), ರಮೇಶ್ ಅರವಿಂದ್ (ತುಂತುರು), ಪೂಜಾ ಗಾಂಧಿ (3), ನಿರೂಪ್ ಭಂಡಾರಿ (ರಾಜರಥ), ಯೋಗೀಶ್ (ಯೋಗಿ ದುನಿಯಾ), ಮದರಂಗಿ ಕೃಷ್ಣ (ಹುಚ್ಚ 2), ಸಂಚಾರಿ ವಿಜಯ್ (ವರ್ತಮಾನ), ಲವ್ಲಿ ಸ್ಟಾರ್ ಪ್ರೇಮ್ (ದಳಪತಿ), ತಾರಾ (ಹೆಬ್ಬೆಟ್ ರಾಮಕ್ಕ), ಅನಂತ್ ನಾಗ್ (ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ), ವಿಜಯ್ ರಾಘವೇಂದ್ರ (ರಾಜಾ ಲವ್ಸ್ ರಾಧೆ), ಪ್ರಿಯಾಂಕಾ ಉಪೇಂದ್ರ (ಸೆಕೆಂಡ್ ಹಾಫ್) ಈ ವರ್ಷ ತೆರೆಮೇಲೆ ಮಿನುಗಿದರು. ಆದ್ರೆ, ಸೂಪರ್ ಹಿಟ್ ಸಿನಿಮಾ ಕೊಡುವಲ್ಲಿ ಇವರಾರೂ ಯಶಸ್ವಿ ಆಗಲಿಲ್ಲ.

'ಕರಿಚಿರತೆ'ಯ ಎರಡು ಸಿನಿಮಾ

'ಕರಿಚಿರತೆ'ಯ ಎರಡು ಸಿನಿಮಾ

ದುನಿಯಾ ವಿಜಯ್ ಅಭಿನಯದ ಎರಡು ಸಿನಿಮಾಗಳು ಈ ವರ್ಷ ಬಿಡುಗಡೆ ಆದವು. ಒಂದು 'ಕನಕ', ಇನ್ನೊಂದು 'ಜಾನಿ ಜಾನಿ ಎಸ್ ಪಪ್ಪಾ'.. ಇವೆರಡೂ ಚಿತ್ರಗಳು ಆರಂಭದಲ್ಲಿ ನಿರೀಕ್ಷೆ ಹುಟ್ಟಿಸಿದ್ದವು. ಆದ್ರೆ, ಸಿನಿಮಾ ಬಿಡುಗಡೆ ಆದ್ಮೇಲೆ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ನಿಲ್ಲಲಿಲ್ಲ.

ಮೂರು ಚಿತ್ರಗಳಲ್ಲಿ ಮಿಂಚಿದ ಚಿರಂಜೀವಿ ಸರ್ಜಾ

ಮೂರು ಚಿತ್ರಗಳಲ್ಲಿ ಮಿಂಚಿದ ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ ಪಾಲಿಗೆ 2018 ತುಂಬಾನೇ ಸ್ಪೆಷಲ್. ಈ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರಂಜೀವಿ ಸರ್ಜಾ, ಪ್ರೇಕ್ಷಕರಿಗೆ ಕೊಟ್ಟಿದ್ದು ಮೂರು ಚಿತ್ರಗಳು (ಸಂಹಾರ, ಸೀಜರ್, ಅಮ್ಮ ಐ ಲವ್ ಯು). ಈ ಮೂರು ಚಿತ್ರಗಳ ಪೈಕಿ 'ಅಮ್ಮ ಐ ಲವ್ ಯು' ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ವಿಶೇಷ ಪಾತ್ರಗಳಿಗೆ ರವಿಚಂದ್ರನ್ ಮೀಸಲು.!

ವಿಶೇಷ ಪಾತ್ರಗಳಿಗೆ ರವಿಚಂದ್ರನ್ ಮೀಸಲು.!

'ಬಕಾಸುರ' ಹಾಗೂ 'ಸೀಜರ್' ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದರು. ಆದರೂ, ಈ ಸಿನಿಮಾಗಳು ಯಶಸ್ವಿ ಆಗಲಿಲ್ಲ.

ಲಕ್ಕಿ ಶರಣ್

ಲಕ್ಕಿ ಶರಣ್

ಹಾಗ್ನೋಡಿದ್ರೆ, ಶರಣ್ ಗೆ ಈ ವರ್ಷ ಲಕ್ಕಿ ಅಂತಾನೇ ಹೇಳ್ಬಹುದು. ಯಾಕಂದ್ರೆ, Rambo-2 ಸಿನಿಮಾ ಸಕ್ಸಸ್ ಆಗುವುದರ ಜೊತೆಗೆ ನಿರ್ಮಾಪಕರಿಗೆ ಲಾಭ ಕೂಡ ತಂದುಕೊಟ್ಟಿದೆ.

More from Filmibeat

English summary
Sandalwood First Half Report 2018: Shiva Rajkumar turns out to be Successful King.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X