For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್ ನಿಂತಿರುವುದೇ ಡ್ರಗ್ಸ್ ಮತ್ತು ಜೂಜಿನ ಹಣದ ಮೇಲೆ: ಪ್ರಶಾಂತ್ ಸಂಬರ್ಗಿ

  |

  ನಟಿ ರಾಗಿಣಿ, ಸಂಜನಾ ಗಲ್ರಾನಿ, ಶಾಸಕ ಜಮೀರ್ ವಿರುದ್ಧ ಮಾದಕ ವಸ್ತು ಪ್ರಕರಣದಲ್ಲಿ ಆರೋಪಗಳನ್ನು ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಇದೀಗ ಇಡೀಯ ಸಿನಿಮಾ ರಂಗದ ವಿರುದ್ಧವೇ ಆರೋಪ ಮಾಡಿದ್ದಾರೆ.

  ಕನ್ನಡ ಸಿನಿಮಾ ರಂಗ ಪಾಪದ ಹಣದ ಮೇಲೆ ತೇಲುತ್ತಿದೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಒಬ್ಬ ನಿರ್ಮಾಪಕನ ಮೇಲೆ ತೀವ್ರ ಆರೋಪಗಳನ್ನು ಪ್ರಶಾಂತ್ ಮಾಡಿದ್ದಾರೆ.

  ಕನ್ನಡದ ಸಿನಿಮಾದ ರಂಗದ ಮೇಲೆ ಡ್ರಗ್ಸ್, ಜೂಜಿನ ಹಣ ಹೂಡಿಕೆಯಾಗಿದೆ. ಇದಕ್ಕೆಲ್ಲಾ ಒಬ್ಬ ನಿರ್ಮಾಪಕ, ಒಬ್ಬ ಶಾಸಕ ಕಾರಣ ಎಂದು ಆರೋಪ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಆದರೆ ಆ ನಿರ್ಮಾಪಕನ ಹೆಸರು ಹೇಳಿಲ್ಲ ಸಂಬರ್ಗಿ.

  ನಿರ್ಮಾಪಕನೋರ್ವನ ಮೇಲೆ ಆರೋಪ

  ನಿರ್ಮಾಪಕನೋರ್ವನ ಮೇಲೆ ಆರೋಪ

  ಕನ್ನಡ ಸಿನಿಮಾರಂಗದ ಪ್ರತಿಷ್ಠಿತ ನಿರ್ಮಾಪಕನೋರ್ವ ಪ್ರತಿ ವಾರಾಂತ್ಯಕ್ಕೆ ಶ್ರೀಲಂಕಾದ ಕ್ಯಾಸಿನೋಕ್ಕೆ ಹೋಗುತ್ತಾನೆ. ಚಿತ್ರನಟರನ್ನೂ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅನೇಕ ಚಿತ್ರನಟ-ನಟಿಯರು ಹಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ ಪ್ರಶಾಂತ್.

  'ನಿರ್ಮಾಪಕನಿಂದಲೇ ಡ್ರಗ್ಸ್, ಜೂಜಿನ ಹಣ ಹರಿದು ಬರುತ್ತಿದೆ'

  'ನಿರ್ಮಾಪಕನಿಂದಲೇ ಡ್ರಗ್ಸ್, ಜೂಜಿನ ಹಣ ಹರಿದು ಬರುತ್ತಿದೆ'

  ಆತನಿಂದಲೇ ಡ್ರಗ್ಸ್, ಜೂಜಿನ ಹಣ ಕನ್ನಡ ಸಿನಿಮಾರಂಗದಲ್ಲಿ ಹೂಡಿಕೆ ಆಗುತ್ತಿದೆ. ಶಾಸಕ ಜಮೀರ್ ಅಹ್ಮದ್‌ಗೆ ಸಹ ಆತನೊಂದಿಗೆ ನಂಟಿದೆ. ಜಮೀರ್ ಅಹ್ಮದ್ ಹಾಗೂ ನಟಿ ಸಂಜನಾ ಜುಲೈ ನಲ್ಲಿ ಶ್ರೀಲಂಕಾದ ಆ ಕಸಿನೋಗೆ ಹೋಗಿದ್ದರು ಎಂದು ಆರೋಪಿಸಿದ್ದಾರೆ ಪ್ರಶಾಂತ್ ಸಂಬರ್ಗಿ.

  'ಬಾಲಿವುಡ್-ಸ್ಯಾಂಡಲ್‌ವುಡ್ ಎರಡರಲ್ಲೂ ಡ್ರಗ್ಸ್ ಜಾಲವಿದೆ'

  'ಬಾಲಿವುಡ್-ಸ್ಯಾಂಡಲ್‌ವುಡ್ ಎರಡರಲ್ಲೂ ಡ್ರಗ್ಸ್ ಜಾಲವಿದೆ'

  ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಎರಡರಲ್ಲೂ ಡ್ರಗ್ಸ್ ಜಾಲ ಇದೆ. ಎರಡೂ ಸಹ 'ಪರಸ್ಪರ ಸಹಕಾರ'ದೊಂದಿಗೆ ಮಾದಕ ಮಾಫಿಯಾದಲ್ಲಿ ತೊಡಗಿವೆ. ಬಾಲಿವುಡ್‌ ಸ್ಟಾರ್ ನಟನ ಹೆಂಡತಿಯ ತಮ್ಮ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ನಡೆಸುತ್ತಾನೆ ಎಂದು ಆರೋಪಿಸಿದ್ದಾರೆ ಪ್ರಶಾಂತ್.

  ಇಮ್ತಿಯಾಜ್ ಖತ್ರಿ ನಿರ್ಮಾಪಕನೊಂದಿಗೆ ಜಮೀರ್ ನಂಟು

  ಇಮ್ತಿಯಾಜ್ ಖತ್ರಿ ನಿರ್ಮಾಪಕನೊಂದಿಗೆ ಜಮೀರ್ ನಂಟು

  ಇಮ್ತಿಯಾಜ್ ಖತ್ರಿ ಎಂಬ ಬಾಲಿವುಡ್‌ನ ನಿರ್ಮಾಪಕ ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆತನನ್ನು ಸ್ಯಾಂಡಲ್‌ವುಡ್‌ನ ಹಲವಾರು ಕಾರ್ಯಕ್ರಮಗಳಿಗೆ ಕರೆಯಲಾಗುತ್ತದೆ. ಆತನೇ ಜಮೀರ್ ಹುಟ್ಟುಹಬ್ಬಕ್ಕೆ ಬಾಲಿವುಡ್‌ ಸ್ಟಾರ್‌ಗಳನ್ನು ಮುಂಬೈನಿಂದ ಕರೆಸುತ್ತಾನೆ ಎಂದಿದ್ದಾರೆ ಪ್ರಶಾಂತ್.

  Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada
  ಜಮೀರ್‌ಗೂ ಶ್ರೀಲಂಕಾ ಕ್ಯಸಿನೋ ಮಾಲೀಕನಿಗೆ ನಂಟೇನು?

  ಜಮೀರ್‌ಗೂ ಶ್ರೀಲಂಕಾ ಕ್ಯಸಿನೋ ಮಾಲೀಕನಿಗೆ ನಂಟೇನು?

  ಕನಿಷ್ಟ 50 ಸಿನಿಮಾಗಳಲ್ಲಿ 'ಜಮೀರ್ ಅಹ್ಮದ್ ಅರ್ಪಿಸುವ' ಎಂದು ಟೈಟಲ್‌ ಕಾರ್ಡ್‌ನಲ್ಲಿರುತ್ತದೆ. ಹಾಗಿದ್ದ ಮೇಲೆ ಜಮೀರ್ ಎಷ್ಟು ಸಿನಿಮಾಗಳಿಗೆ ಹಣ ಹೂಡಿದ್ದಾರೆ ಹೇಳಲಿ. ಹೂಡಿರುವ ಹಣ ಎಲ್ಲಿಂದ ಬಂದಿದ್ದು, ಶ್ರೀಲಂಕಾದ ಕ್ಯಸಿನೋ ಮಾಲೀಕನೊಂದಿಗೆ ಜಮೀರ್‌ಗೆ ಇರುವ ನಂಟೇನು ಎಂದು ಪ್ರಶ್ನಿಸಿದ್ದಾರೆ ಪ್ರಶಾಂತ್.

  English summary
  Social worker Prashanth Sambargi accused that Sandalwood floating on sin money. Drugs and casino money pumped into movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X