For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗದಲ್ಲಿ ಹೊಸಬರನ್ನು ತುಳಿಯುವವರಿದ್ದಾರೆ: ಜೆಕೆ ಗಂಭೀರ ಆರೋಪ

  |

  ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ವಿರುದ್ಧ ಬಹುದೊಡ್ಡ ಹೋರಾಟ ಆರಂಭವಾಗಿದೆ. ಸ್ವಜನಪಕ್ಷಪಾತದ ಸುತ್ತಲೂ ದೊಡ್ಡ ಮಟ್ಟದ ಚರ್ಚೆ ಚಾಲ್ತಿಯಲ್ಲಿದೆ.

  ಕೊಟ್ಟ ಮಾತನ್ನು ಉಳಿಸಿಕೊಂಡ ಸೋನು ಸೂದ್. | Sonu Sood Gifts Tractor | Filmibeat Kannada

  ಬೇರೆ ಚಿತ್ರರಂಗಗಳಲ್ಲಿಯೂ ಸ್ವಜನಪಕ್ಷಪಾತದ ಚರ್ಚೆ ನಿಧಾನವಾಗಿ ಆರಂಭವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಈ ಚರ್ಚೆಗೆ ವೇಗ ದೊರಕಿಸಿಕೊಟ್ಟಿರುವುದು ನಟರೊಬ್ಬರು ಆಡಿರುವ ಮಾತುಗಳು.

  ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಜಯರಾಂ ಕಾರ್ತಿಕ್ ಅಲಿಯಾಸ್ ಜೆಕೆ ಹೇಳಿರುವಂತೆ, ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳನ್ನು, ಹೊಸಬರನ್ನು ತುಳಿಯುವ ದೊಡ್ಡ ದಂಡೇ ಇದೆಯಂತೆ.

  ಕನ್ನಡ ಚಿತ್ರರಂಗದಲ್ಲಿ ನೆಪೊಟಿಸಮ್ ಇದೆ: ಜಯರಾಂ ಕಾರ್ತಿಕ್

  ಕನ್ನಡ ಚಿತ್ರರಂಗದಲ್ಲಿ ನೆಪೊಟಿಸಮ್ ಇದೆ: ಜಯರಾಂ ಕಾರ್ತಿಕ್

  ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿರುವ ಜೆಕೆ, ಕನ್ನಡ ಚಿತ್ರರಂಗದಲ್ಲಿ ನೆಪೊಟಿಸಮ್ (ಸ್ವಜನಪಕ್ಷಪಾತ) ಖಂಡಿತವಾಗಿಯೂ ಇದೆ. ನಾನು ಇದಕ್ಕೆ ಬಲಿಯಾಗಿದ್ದೇನೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

  ಪ್ರತಿಭಾನ್ವಿತರನ್ನು ತುಳಿಯುವ ಕಾರ್ಯ ಮಾಡುತ್ತಾರೆ: ಜೆಕೆ

  ಪ್ರತಿಭಾನ್ವಿತರನ್ನು ತುಳಿಯುವ ಕಾರ್ಯ ಮಾಡುತ್ತಾರೆ: ಜೆಕೆ

  ಹಲವರು ತಮ್ಮ ಸಾಮ್ರಾಜ್ಯ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬೇರೆಯವರನ್ನು ಅದರಲ್ಲಿಯೂ ಪ್ರತಿಭಾನ್ವಿತ ಹೊಸಬರನ್ನು ತುಳಿಯುವ ಕಾರ್ಯ ಮಾಡುತ್ತಾರೆ. ನನಗೂ ಇದರ ಅನುಭವವಾಗಿದೆ ಎಂದು ಹೇಳಿದ್ದಾರೆ ಜೆಕೆ.

  ದುನಿಯಾ ವಿಜಯ್ ಅಲ್ಲಗಳೆದಿದ್ದಾರೆ

  ದುನಿಯಾ ವಿಜಯ್ ಅಲ್ಲಗಳೆದಿದ್ದಾರೆ

  ಜಯರಾಂ ಕಾರ್ತಿಕ್ ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್, ನಾಯಕ ನಟ ವಿಜಯ್ ಇನ್ನೂ ಕೆಲವರು ಕನ್ನಡ ಚಿತ್ರರಂಗದಲ್ಲಿ ನೆಪೊಟಿಸಮ್ ಇಲ್ಲವೆಂದು ಹೇಳಿದ್ದಾರೆ.

  ಮಹೇಶ್ ಭಟ್ ಹೊಸಬರಿಗೆ ಅವಕಾಶ ನೀಡುವುದು ಏಕೆ ಗೊತ್ತೇ?: ಕಂಗನಾ ನೀಡಿದ ವಿವರಣೆಮಹೇಶ್ ಭಟ್ ಹೊಸಬರಿಗೆ ಅವಕಾಶ ನೀಡುವುದು ಏಕೆ ಗೊತ್ತೇ?: ಕಂಗನಾ ನೀಡಿದ ವಿವರಣೆ

  English summary
  Actor Jayaram Karthik said Kannada movie industry had Nepotism, I faced problems from Nepotism.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X