»   » ಅಬ್ಬಾ...10 ತಿಂಗಳಿನಲ್ಲಿ ಗಾಂಧಿನಗರದಲ್ಲಿ ಏನೆಲ್ಲ ಆಯಿತು ನೋಡಿ !

ಅಬ್ಬಾ...10 ತಿಂಗಳಿನಲ್ಲಿ ಗಾಂಧಿನಗರದಲ್ಲಿ ಏನೆಲ್ಲ ಆಯಿತು ನೋಡಿ !

Posted By:
Subscribe to Filmibeat Kannada

ಸಿನಿಮಾರಂಗ ಒಂದು ಕಲರ್ ಫುಲ್ ಲೋಕ. ಈ ಮಾಯಾ ಜಗತ್ತಿನಲ್ಲಿ ದಿನಕ್ಕೊಂದು ಬೆಳವಣಿಗೆ ಆಗುತ್ತಲೇ ಇರುತ್ತದೆ. ಇನ್ನೂ ಕನ್ನಡ ಚಿತ್ರರಂಗದಲ್ಲಿ ಕಳೆದ 10 ತಿಂಗಳಿನಲ್ಲಿ ಸಾಕಷ್ಟು ಘಟನಾವಳಿಗಳು ನಡೆದಿದೆ.

ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ, ಉಪ್ಪಿ ಪ್ರಜಾಕೀಯ, ಕಿರಿಕ್ ಪಾರ್ಟಿ 100 ದಿನ, ಪೋಷಕ ನಟರ ಸರಣಿ ನಿಧನ, ಸ್ಟಾರ್ ಗಳ ಮದುವೆ ಸಂಭ್ರಮ, ದಂಡುಪಾಳ್ಯ ಬೆತ್ತಲೆ ವಿವಾದ... ಹೀಗೆ ಕನ್ನಡ ಚಿತ್ರರಂಗದ ಏನೇನೋ ನಡೆದು ಬಿಟ್ಟಿದೆ.

ಅಂದಹಾಗೆ, ಈ ಜನವರಿಯಿಂದ ಅಕ್ಟೋಬರ್ ವರೆಗೆ ಕನ್ನಡ ಚಿತ್ರರಂಗದಲ್ಲಿ ಆದ ಕೆಲವು ಪ್ರಮುಖ ಬೆಳವಣಿಗೆಗಳ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ಓದಿ...

ಕಿರಿಕ್ ಪಾರ್ಟಿ 100 ದಿನ

ಕಳೆದ ವರ್ಷ ಡಿಸೆಂಬರ್ 30ಕ್ಕೆ ರಿಲೀಸ್ ಆಗಿದ್ದ 'ಕಿರಿಕ್ ಪಾರ್ಟಿ' ಸಿನಿಮಾ 2017ರಲ್ಲಿ ನೂರು ದಿನ ಪೂರೈಸಿದ ಮೊದಲ ಸಿನಿಮಾ.

ಸದಭಿರುಚಿಯ ಚಿತ್ರಗಳು

ಈ ವರ್ಷ ಕನ್ನಡದಲ್ಲಿ ಅನೇಕ ಸದಭಿರುಚಿಯ ಚಿತ್ರಗಳು ಬಂದವು. ಅವುಗಳಲ್ಲಿ 'ರಾಗ', 'ಒಂದು ಮೊಟ್ಟೆಯ ಕಥೆ', 'ಚೌಕ' ಸಿನಿಮಾಗಳು ಪ್ರಮುಖವಾಗಿದೆ.

ಜಿ.ಎಸ್.ಟಿ

ಕೇಂದ್ರ ಸರ್ಕಾರದ ಜಿ.ಎಸ್.ಟಿ ನೀತಿ ಜಾರಿಗೆ ಬಂದಿದ್ದು, ಇದು ಚಿತ್ರರಂಗದ ಮೇಲೆ ಪರಿಣಾಮ ಬೀರಿತು. ಮುಖ್ಯವಾಗಿ 28% ಸೇವಾ ತೆರಿಗೆಯಿಂದ ಚಿತ್ರಮಂದಿರದ ಟಿಕೆಟ್ ದರ ಹೆಚ್ಚಾಯಿತು.

ಪಾರ್ವತಮ್ಮ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ, ದೊಡ್ಮನೆ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಮೇ 31ರಂದು ನಿಧನ ಹೊಂದಿದ್ದರು.

ಉಪೇಂದ್ರ 'ಪ್ರಜಾಕೀಯ'

ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ರಾಜಕೀಯಕ್ಕೆ ಧುಮುಕಿದರು. ರಾಜಕೀಯದ ಬದಲು ಪ್ರಜಾಕೀಯ ವ್ಯವಸ್ಠೆಗಾಗಿ ಉಪ್ಪಿ ಹೊಸ ಪಕ್ಷ ಕಟ್ಟಿದರು.

'ರಾಜಕುಮಾರ' ಶತಕ ಸಂಭ್ರಮ

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಶತಕ ಬಾರಿಸಿತು. ಮಾತ್ರವಲ್ಲದೆ ಅತಿ ಹೆಚ್ಚು ಹಣ ಗಳಿಸಿದ ಕನ್ನಡ ಸಿನಿಮಾ ಎಂಬ ಹೆಗ್ಗಾಳಿಕೆಗೆ ಪಾತ್ರವಾಯಿತು.

ಮುಗುಳು ನಗೆ

ಯೋಗರಾಜ್ ಭಟ್ ಮತ್ತು ಗಣೇಶ್ 10 ವರ್ಷದ ಬಳಿಕ ಮತ್ತೆ ಒಂದಾಗಿ ಹ್ಯಾಟ್ರಿಕ್ ಸಿನಿಮಾ ಮಾಡಿದರು. ಆದರೆ ನಿರೀಕ್ಷೆ ಹುಟ್ಟಿಸಿದ ಮಟ್ಟಿಗೆ 'ಮುಗುಳುನಗೆ' ಚಿತ್ರ ಹಿಟ್ ಆಗಲಿಲ್ಲ.

ಸುದೀಪ್ ಹುಟ್ಟುಹಬ್ಬ

ಕಿಚ್ಚ ಸುದೀಪ್ ಇನ್ನು ಮುಂದೆ ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಿದರು. ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.

'ಕುರುಕ್ಷೇತ್ರ' ಲಾಂಚ್

ದರ್ಶನ್ 50ನೇ ಚಿತ್ರ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಕುರುಕ್ಷೇತ್ರ' ಸಿನಿಮಾ ಇದೇ ವರ್ಷ ಅದ್ಧೂರಿಯಾಗಿ ಲಾಂಚ್ ಆಯ್ತು.

ಬೆತ್ತಲೆ ವಿವಾದ

'ದಂಡುಪಾಳ್ಯ 2' ಸಿನಿಮಾದ ನಟಿ ಸಂಜನಾ ಬೆತ್ತಲೆ ವಿವಾದ ದೊಡ್ಡ ಸುದ್ದಿ ಮಾಡಿತ್ತು.

ಪೋಷಕ ಕಲಾವಿದರ ನಿಧನ

ಈ ವರ್ಷ ಕನ್ನಡ ಚಿತ್ರರಂಗ ಸಾಕಷ್ಟು ಪೋಷಕ ನಟರನ್ನು ಕಳೆದುಕೊಂಡಿದೆ. ಪೋಷಕ ನಟರಾದ ಸುದರ್ಶನ್, ಲುಂಬು ನಾಗೇಶ್, ಬಿ.ವಿ.ರಾಧಾ, ವೇಣು ಗೋಪಾಲ್, ಜೊತೆಗೆ ಗಾಯಕ ಎಲ್.ಎನ್.ಶಾಸ್ತ್ರಿ ಕೊನೆಯುಸಿರೆಳೆದರು.

ಅಪ್ಪು ಪ್ರೋಡಕ್ಷನ್

ನಟ ಪುನೀತ್ ತಮ್ಮ ಸ್ವತಃ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದರು. ಅಪ್ಪು ತಮ್ಮ ಪಿ.ಆರ್.ಕೆ ಪ್ರೊಡಕ್ಷನ್ ಮೂಲಕ 'ಕವಲುದಾರಿ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ರಾಧಿಕಾ ಪಂಡಿತ್

ಮದುವೆಯ ಬಳಿಕ ಮರೆಯಾಗಿದ್ದ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ಜರ್ನಿ ಮುಂದುವರೆಸಿದರು.

ಕಂಕಣ ಭಾಗ್ಯ

ನಟ ಯೋಗಿ, ನಟಿ ಅಮೂಲ್ಯ, ನಿಧಿ ಸುಬ್ಬಯ್ಯ, ಸಿಂಧು ಲೋಕನಾಥ್, ಪ್ರಿಯಾಮಣಿ, ನಿರ್ದೇಶಕ ಪಿಸಿ ಶೇಖರ್, ಸುನಿ ಸೇರಿದಂತೆ ಚಿತ್ರರಂಗದ ಅನೇಕರಿಗೆ ಈ ವರ್ಷ ಕಂಕಣ ಬಲ ಕೂಡಿ ಬಂತು. ಇನ್ನು ರಕ್ಷಿತ್ ಶೆಟ್ಟಿ - ರಶ್ಮಿಕಾ ಮತ್ತು ಚಿರಂಜೀವಿ ಸರ್ಜಾ - ಮೇಘನಾ ರಾಜ್ ನಿಶ್ಚಿತಾರ್ಥ ಮಾಡಿಕೊಂಡರು.

ನೆಲಕುರುಳಿದ 'ಕಪಾಲಿ'

ಗಾಂಧಿನಗರದ ಮತ್ತೊಂದು ಚಿತ್ರಮಂದಿರ 'ಕಪಾಲಿ' ನೆಲಕುರುಳಿತು.

ಡಬ್ಬಿಂಗ್ ಗಲಾಟೆ

ಈ ಎಲ್ಲ ಸುದ್ದಿಗಳೊಂದಿಗೆ ಡಬ್ಬಿಂಗ್ ಪರ ವಿರುದ್ದ ಗಲಾಟೆಗಳು ಆಗಾಗ ನಡೆಯುತ್ತಿತ್ತು. ಈ ವರ್ಷ 'ವೇಗ ಮತ್ತು ಉದ್ವೇಗ 'ಮತ್ತು 'ಸತ್ಯದೇವ್ ಐಪಿಎಸ್' ಸೇರಿದಂತೆ ಕೆಲ ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಯಿತು.

English summary
Sandalwood highlights from past 10 months.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X