»   » ಫೇಸ್ ಬುಕ್ ನಲ್ಲಿ ಚರ್ಚೆ ಆಗುತ್ತಿರುವ 'ಪಾನಿ ಪೂರಿ' ಕಿಟ್ಟಿ ಯಾರು?

ಫೇಸ್ ಬುಕ್ ನಲ್ಲಿ ಚರ್ಚೆ ಆಗುತ್ತಿರುವ 'ಪಾನಿ ಪೂರಿ' ಕಿಟ್ಟಿ ಯಾರು?

Posted By:
Subscribe to Filmibeat Kannada

ಒಂದ್ಕಡೆ ದುನಿಯಾ ವಿಜಯ್.! ಮತ್ತೊಂದು ಕಡೆ ಲವ್ಲಿ ಸ್ಟಾರ್ ಪ್ರೇಮ್.! ಇಬ್ಬರೂ ತಮ್ಮ ಫಿಟ್ನೆಸ್ ಟ್ರೇನರ್ ಪಾನಿ ಪೂರಿ ಕಿಟ್ಟಿ ರವರನ್ನ ಹೊಗಳಿದ್ದಾರೆ.

ಸಾಲದ್ದಕ್ಕೆ ಪಾನಿ ಪೂರಿ ಕಿಟ್ಟಿ ನೂತನವಾಗಿ ಶುರು ಮಾಡುತ್ತಿರುವ 'ಮಸಲ್ ಪ್ಲಾನೆಟ್' ಜಿಮ್ ಕುರಿತು ಶುಭ ಹಾರೈಸಿದ್ದಾರೆ. [ಅಂದು ದುಷ್ಮನ್, ಇಂದು ಫ್ರೆಂಡ್; ದುನಿಯಾ ವಿಜಿ ಹೇಳ್ತಿರೋದು ಯಾರ ಬಗ್ಗೆ?]

ದುನಿಯಾ ವಿಜಯ್ ಮತ್ತು ಪ್ರೇಮ್, ಇಬ್ಬರ ಫೇಸ್ ಬುಕ್ ಸ್ಟೇಟಸ್ ವೈರಲ್ ಆಗಿದೆ. ತೆರೆ ಮರೆಯಲ್ಲಿ ಸಕ್ರಿಯರಾಗಿದ್ದ ಪಾನಿ ಪೂರಿ ಕಿಟ್ಟಿ ಬಗ್ಗೆ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಿದೆ.

ಅಷ್ಟಕ್ಕೂ ಈ ಪಾನಿ ಪೂರಿ ಕಿಟ್ಟಿ ಯಾರು? ಅವರ ಹಿನ್ನಲೆ ಏನು? ಅವರ ಬಗ್ಗೆ ಸ್ಟಾರ್ ನಟರು ಕೊಂಡಾಡುತ್ತಿರುವುದು ಯಾಕೆ? ಎಲ್ಲವನ್ನೂ ಸವಿವರವಾಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಫಿಟ್ನೆಸ್ ಟ್ರೇನರ್!

ಎಷ್ಟು ಮಂದಿಗೆ ಗೊತ್ತೋ, ಇಲ್ವೋ...ಸ್ಯಾಂಡಲ್ ವುಡ್ ನ ಸದ್ಯದ ಬಹು ಬೇಡಿಕೆಯ ಫಿಟ್ನೆಸ್ ಗುರು ಅಂದ್ರೆ ಇವರೇ... ಪಾನಿ ಪೂರಿ ಕಿಟ್ಟಿ! [ಯಶ್, ದುನಿಯಾ ವಿಜಯ್, ಪ್ರೇಮ್...ಎಲ್ಲರಿಗೂ 'ಇವರೇ' ಬೇಕು!]

ಕಿಟ್ಟಿ ಓಕೆ, ಪಾನಿ ಪೂರಿ ಯಾಕೆ?

ಕಿಟ್ಟಿ ಕುಟುಂಬದ ಮೂಲ ಕಸುಬು ಪಾನಿ ಪೂರಿ. ಕಿಟ್ಟಿ ತಂದೆ ಹಾಗೂ ತಾತ ಪಾನಿ ಪೂರಿ ವ್ಯಾಪಾರದಲ್ಲೇ ಜೀವನ ಸಾಗಿಸಿದವರು. ಚಿಕ್ಕವಯಸ್ಸಿನಿಂದಲೂ ಕಿಟ್ಟಿ, ಪಾನಿ ಪೂರಿ ಮಾಡುವುದರಲ್ಲಿ ಎಕ್ಸ್ ಪರ್ಟ್. ಇಂದಿಗೂ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಕಿಟ್ಟಿ ಅವರ ಪಾನಿ ಪೂರಿ ಅಂಗಡಿ ಇದೆ. ['ಆಕ್ಷನ್ ಹೀರೋ' ಆಗ್ಬೇಕೆನ್ನೋ ಆಸೆ ನಿಮಗೂ ಇದ್ಯಾ?]

ಪಾನಿ ಪೂರಿಯಿಂದ ಬಾಡಿ ಬಿಲ್ಡಿಂಗ್ ಗೆ ಜಿಗಿದರು!

ಬಡತನದಲ್ಲೇ ಹುಟ್ಟಿ ಬೆಳೆದ ಪಾನಿ ಪೂರಿ ಕಿಟ್ಟಿಗೆ ಇದ್ದ ಏಕೈಕ ಆಸೆ ಅಂದ್ರೆ ಬಾಡಿ ಬಿಲ್ಡಿಂಗ್. ತಮ್ಮ ಪಾನಿ ಪೂರಿ ಅಂಗಡಿಗೆ ಬರುತ್ತಿದ್ದ ಪೊಲೀಸ್ ಆಫೀಸರ್ ಒಬ್ಬರ ಕಟ್ಟುಮಸ್ತಾದ ದೇಹ ಇವರಿಗೆ ಸ್ಫೂರ್ತಿ. ಮಲ್ಲೇಶ್ ಮಾಸ್ಟರ್ ಎಂಬುವರ ಮಾರ್ಗದರ್ಶನದಿಂದ ಬಾಡಿ ಬಿಲ್ಡ್ ಮಾಡಲು ಕಿಟ್ಟಿ ಶುರು ಮಾಡಿದರು. ['ಮಸಲ್ ಪ್ಲಾನೆಟ್'ಗೆ ನೀವೂ ಬನ್ನಿ ನಿಮ್ಮವರನ್ನು ಕರೆತನ್ನಿ: ಪ್ರೇಮ್]

ಪಾನಿ ಪೂರಿ ಕಿಟ್ಟಿ ಮಾಡಿರುವ ಸಾಧನೆ

ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾನಿ ಪೂರಿ ಕಿಟ್ಟಿ ಸಾಧನೆ ಮಾಡಿದ್ದಾರೆ. ಬರೋಬ್ಬರಿ 24 ಬಾರಿ ಮಿಸ್ಟರ್ ಕರ್ನಾಟಕ, 11 ಬಾರಿ ಮಿಸ್ಟರ್ ಇಂಡಿಯಾ ಗೋಲ್ಡ್, 3 ಬಾರಿ ಚಾಂಪಿಯನ್ ಆಫ್ ಚಾಂಪಿಯನ್ ಮತ್ತು ಮಿಸ್ಟರ್ ವರ್ಲ್ಡ್ ಸ್ಪರ್ಧೆಯಲ್ಲಿ 3ನೇ ಹಾಗೂ 4ನೇ ಸ್ಥಾನ ಪಡೆದಿದ್ದಾರೆ.

ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಕಿಟ್ಟಿ!

ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುವಾಗಲೇ ಕಿಟ್ಟಿಗೆ ದುನಿಯಾ ವಿಜಯ್ ಪರಿಚಯ. ಕನ್ನಡ ಚಲನ ಚಿತ್ರರಂಗದಲ್ಲಿ ಕೆಲ ಸ್ನೇಹಿತರು ಇದ್ದ ಕಾರಣ, ಪಾನಿ ಪೂರಿ ಕಿಟ್ಟಿ ಸ್ಯಾಂಡಲ್ ವುಡ್ ಗೆ ಸಲೀಸಾಗಿ ಎಂಟ್ರಿ ಕೊಟ್ಟರು.

ಸ್ಟಾರ್ ನಟರಿಗೆ ಇವರೇ ಬೇಕು!

ದುನಿಯಾ ವಿಜಯ್, ಪ್ರೇಮ್, ಯಶ್, ಚೇತನ್ ಚಂದ್ರ ಸೇರಿದಂತೆ ಸ್ಯಾಂಡಲ್ ವುಡ್ ನ ಬಹುತೇಕ ಟಾಪ್ ನಟರಿಗೆ ಇದೇ ಪಾನಿ ಪೂರಿ ಕಿಟ್ಟಿ ಫಿಟ್ನೆಸ್ ಗುರು. ಎಲ್ಲರೂ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಮಾಡಿದ್ದು ಇವರ ಮಾರ್ಗದರ್ಶನದಲ್ಲೇ.

ಜಿಮ್ ಓಪನ್ ಮಾಡುತ್ತಿದ್ದಾರೆ!

ಕಷ್ಟದಲ್ಲೇ ಬೆಳೆದು ಬಂದು ಇಂದು ಸಾಧನೆ ಮಾಡಿರುವ ಕಿಟ್ಟಿ, ತಮ್ಮ ಸ್ವಂತ ಜಿಮ್ 'ಮಸಲ್ ಪ್ಲಾನೆಟ್' ಇದೇ 24ನೇ ತಾರೀಖು ಓಪನ್ ಮಾಡುತ್ತಿರುವ ಬಗ್ಗೆ ದುನಿಯಾ ವಿಜಯ್ ಮತ್ತು ಪ್ರೇಮ್ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್ ಬುಕ್ ಅಕೌಂಟ್ ಮೂಲಕ ಸ್ನೇಹಿತ ಹಾಗೂ ಫಿಟ್ನೆಸ್ ಗುರುಗೆ ಪ್ರಚಾರ ನೀಡುತ್ತಿದ್ದಾರೆ.

ಅತ್ಯಾಧುನಿಕ ಸೌಲಭ್ಯಗಳಿರುವ ಜಿಮ್

ವಿದ್ಯಾರಣ್ಯಪುರದಲ್ಲಿ ಫೆಬ್ರವರಿ 24 ರಂದು ಉದ್ಘಾಟನೆಗೊಳ್ಳಲಿರುವ 'ಮಸಲ್ ಪ್ಲಾನೆಟ್' ಜಿಮ್ ನಲ್ಲಿ ಬಾಡಿ ಬಿಲ್ಡಿಂಗ್ ಗೆ ಬೇಕಾದ ಎಲ್ಲಾ ತರಬೇತಿ ನೀಡಲಾಗುವುದು. ಅದಕ್ಕಾಗಿ 35 ಮಂದಿ ಟ್ರೇನರ್ಸ್ ಇರಲಿದ್ದಾರೆ. ಅಹಾರ ಪದ್ಧತಿ ಹೇಳಿಕೊಡಲು ವೈದ್ಯರು ಕೂಡ ಜಿಮ್ ನಲ್ಲೇ ಲಭ್ಯವಿರುತ್ತಾರೆ. ಇನ್ನೂ ವಿಶೇಷ ಅಂದ್ರೆ, ಫಿಟ್ನೆಸ್ ಮೇನ್ಟೇನ್ ಮಾಡಲು 'ಮಸಲ್ ಪ್ಲಾನೆಟ್' ಬ್ರ್ಯಾಂಡ್ ನಲ್ಲೇ ಪೌಷ್ಠಿಕಾಂಶ ಆಹಾರ ಕೂಡ ದೊರೆಯಲಿದೆ.

English summary
Pani Puri Kitty's Muscle Planet gym is making news on Social Media Platform. But who is Pani Puri Kitty? Read the article to know about Pani Puri Kitty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada