ಸ್ಯಾಂಡಲ್ ವುಡ್ ನಲ್ಲಿ 105 ಡಿಗ್ರಿ ಹಾರರ್ ಫೀವರ್
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾಗಾಂಧಿ ಅಭಿನಯದ 'ಮುಂಗಾರುಮಳೆ' ಗೆದ್ದಾಗಲೂ ಹಾಗೇ ಆಗಿತ್ತು. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಗೆದ್ದಾಗಲೂ ಹಾಗೇ ಆಗಿತ್ತು. ಒಂದು ಸಿನಿಮಾ ಗೆದ್ದಾಗ ಅಂತಹದ್ದೇ ಶೈಲಿಯ ಸಿನಿಮಾಗಳನ್ನ ಕಾಪಿ ಮಾಡೋಕೆ ಶುರುಮಾಡಿಬಿಡ್ತಾರೆ.
ಇದಕ್ಕೆ ತೀರ ಇತ್ತೀಚೆಗಿನ ಉದಾಹರಣೆ '6-5=2'. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹಾರರ್ ಫೀವರ್. ಜ್ವರದ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಎಂದರೆ 105 ಡಿಗ್ರಿಯಷ್ಟಿದ್ದು ಎಮರ್ಜನ್ಸಿ ಟ್ರೀಟ್ ಮೆಂಟ್ ತೆಗೆದುಕೊಳ್ಳುವಷ್ಟರ ಮಟ್ಟಿಗೆ.
ಸರಿಸುಮಾರು ರು.20 ರಿಂದ 30 ಲಕ್ಷ ಬಜೆಟ್ ನ '6-5=2' ಸಿನಿಮಾ ಕೋಟಿ ಕೋಟಿಗಳನ್ನ ಬಾಚಿದ ಸುದ್ದಿ ಕೇಳಿ ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ 5 ರಿಂದ 6 ಹಾರರ್ ಟೈಟಲ್ ಗಳು ರಿಜಿಸ್ಟರ್ ಆಗಿವೆ.
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸುಮಾರು ರು.66 ಲಕ್ಷ ಬಜೆಟ್ ನಲ್ಲಿ ರೆಡಿಯಾದ ಚಿತ್ರ. ಲಕ್ಷಗಳಲ್ಲಿ ಕೋಟಿ ಕೊಳ್ಳೆ ಹೊಡೆಯೋ ಒಂದು ಟೆಕ್ನಿಕ್ ಗೆ ಕಾಯೋ ಸ್ಯಾಂಡಲ್ ವುಡ್ ಮಂದಿ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಗೆದ್ದ ಕೂಡ್ಲೇ ಅದೇ ಶೇಡ್ ನ ಇವತ್ತಿನ ಹಲವು ಸಿನಿಮಾಗಳಲ್ಲಿ ನೋಡ್ಬಹುದು.
ಒಟ್ಟಾರೆ ಇದೆಲ್ಲವೂ 20ರಿಂದ30 ಲಕ್ಷ ಬಜೆಟ್ ನ '6-5=2' ಸಿನಿಮಾ ಕೋಟಿ ಕೋಟಿಗಳನ್ನ ಬಾಚಿದ ಸುದ್ದಿ ಕೇಳಿ ತಯಾರಾಗೋಕೆ ಹೊರಟಿರೋ ಸಿನಿಮಾಗಳು. 2014ರ ಆರಂಭದಲ್ಲಿ ಸದ್ಯ ಶುರುವಾಗಿರೋ ಹಾರರ್ ಪೀವರ್ ಗೆ ಬರ್ತಿರೋ ಸಿನಿಮಾಗಳು ಯಾವ್ಯಾವು ಗೊತ್ತಾ...

ಇವಿಲ್ ಡೆಡ್
ಇವಿಲ್ ಡೆಡ್ ಅನ್ನೋ ಚಿತ್ರಕ್ಕೆ ಕನ್ನಡದಲ್ಲಿ ಯಾವ ಟೈಟಲ್ ಇಡಬಹುದು ಅಂತ ಚಿತ್ರತಂಡವೊಂದು ಹೊಸ ಪ್ರಯೋಗ ಮಾಡ್ತಿದೆ. ಚಿತ್ರದ ಶೂಟಿಂಗ್ ನ ಕೂಡ ಸದ್ಯದಲ್ಲೇ ಶುರು ಮಾಡಲಿದ್ದು ಸಣ್ಣ ಫಸ್ಟ್ ಲುಕ್ ಒಂದನ್ನ ತೇಲಿಬಿಟ್ಟಿದೆ.

ಪ್ರೊಡಕ್ಷನ್ ನಂಬರ್-2
ಈ ಹೆಸರಲ್ಲಿ ಚೌಡರೆಡ್ಡಿ ಅನ್ನೋರು ಹೊಸ ಹಾರರ್ ಸಿನಿಮಾ ಒಂದನ್ನ ನಿರ್ಮಿಸೋಕೆ ರೆಡಿಯಾಗಿದ್ದಾರೆ. ಇದರ ಜಾಹೀರಾತು ಕೂಡ ಪ್ರಕಟವಾಗಿದೆ.

ಚಂದ್ರಲೇಖ
ವಿಜಯ್ ಸುರಾನಾ ನಿರ್ಮಾಣ ನಿರ್ದೇಶನದಲ್ಲಿ ಹಾರರ್ ಪಿಕ್ಚರ್ ಒಂದು ನಿರ್ಮಾಣವಾಗಲಿದೆ. ಇದಕ್ಕೆ ಕೂಡ ಒಂದು ಥ್ರಿಲ್ಲಿಂಗ್ ಕಥೆಯಿದೆಯಂತೆ.

ಇನ್ನೂ ಮೂರು ಹಾರರ್ ಸಿನಿಮಾಗಳು
ಇನ್ನು ಮೂರು ಹಾರರ್ ಸಿನಿಮಾಗಳು ಚಿಕ್ಕಮಗಳೂರು, ಸಕಲೇಶಪುರದ ಕಾಡುಗಳಲ್ಲಿ ಈಗಾಗಲೇ ಶೂಟಿಂಗ್ ನಡೆಸ್ತಿರೋ ಸುದ್ದಿ ಗಾಂಧಿನಗರದಲ್ಲಿ ಸುಳಿದಾಡ್ತಿದೆ.

ಡರ್ಟಿ ಪಿಕ್ಚರ್ ತರಹ ಹಾರರ್ ಪಿಕ್ಚರ್
ವಿಜಯ್ ಸುರಾನಾ ನಿರ್ಮಾಣ ನಿರ್ದೇಶನದಲ್ಲಿ ಹಾರರ್ ಪಿಕ್ಚರ್ ಒಂದು ನಿರ್ಮಾಣವಾಗಲಿದೆ. ಇದಕ್ಕೆ ಕೂಡ ಒಂದು ಥ್ರಿಲ್ಲಿಂಗ್ ಕಥೆಯಿದೆಯಂತೆ.


Click it and Unblock the Notifications











