Sandalwood: ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕನ್ನಡ ಚಿತ್ರಗಳ ಪಟ್ಟಿ

ಈ ವರ್ಷದ ಮೊದಲಾರ್ಧ ಮುಕ್ತಾಯವಾಗಿದ್ದು, ಈ ಅವಧಿಯಲ್ಲಿ ಭಾರತದ ಬಹುತೇಕ ಎಲ್ಲಾ ಚಿತ್ರರಂಗಗಳೂ ಸಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿವೆ. ಆದರೆ ಕನ್ನಡ ಚಿತ್ರರಂಗ ಮಾತ್ರ ದೊಡ್ಡ ಹಿಟ್ ನೀಡುವಲ್ಲಿ ವಿಫಲವಾಗಿತ್ತು. ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದ ಯಾವ ಚಿತ್ರಗಳೂ ಸಹ ಹಿಟ್ ಆಗಲಿಲ್ಲ. ಹೀಗೆ ಮೊದಲಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದ ಸ್ಯಾಂಡಲ್‌ವುಡ್ ದ್ವಿತೀಯಾರ್ಧದ ಮೊದಲ ತಿಂಗಳಿನಲ್ಲಿಯೇ ಪುಟಿದೆದ್ದಿದೆ.

ಜುಲೈ ತಿಂಗಳ 21ರಂದು ಬಿಡುಗಡೆಗೊಂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮುತ್ತಿದ್ದು, ಕೊನೆಯ ವಾರದಲ್ಲಿ ಬಿಡುಗಡೆಗೊಂಡ ಕೌಸಲ್ಯಾ ಸುಪ್ರಜಾ ರಾಮ ಹಾಗೂ ಆಚಾರ್ ಅಂಡ್ ಕೋ ಚಿತ್ರಗಳೂ ಸಹ ಹಿಟ್ ಲಿಸ್ಟ್ ಸೇರಿವೆ. ಹೀಗೆ ಕಳೆದ ಎರಡು ವಾರಗಳಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಪೈಕಿ ಈ ಮೂರು ಚಿತ್ರಗಳು ಭರ್ಜರಿ ಯಶಸ್ಸು ಸಾಧಿಸಿ ಸ್ಯಾಂಡಲ್‌ವುಡ್ ಕಮ್‌ಬ್ಯಾಕ್ ಮಾಡಿದ್ದು, ಆಗಸ್ಟ್ ತಿಂಗಳಿನಲ್ಲಿಯೂ ಸಹ ಈ ಯಶಸ್ಸಿನ ಹಾದಿಯನ್ನು ಮುಂದುವರೆಸುವ ಎಲ್ಲಾ ಲಕ್ಷಣಗಳೂ ಸಹ ಇವೆ. ಹಾಗಿದ್ದರೆ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಅಂತಹ ದೊಡ್ಡ ಕನ್ನಡ ಚಿತ್ರಗಳು ಯಾವುವು ಎಂಬ ಪಟ್ಟಿ ಈ ಕೆಳಕಂಡಂತಿದೆ..

major-kannada-movies

ಕ್ಷೇತ್ರಪತಿ:

ಗುಲ್ಟೂ, ಹೊಂದಿಸಿ ಬರೆಯಿರಿ ಹಾಗೂ ಹೊಯ್ಸಳ ರೀತಿಯ ಒಳ್ಳೆಯ ಕಥೆಗಳನ್ನು ಆರಿಸಿಕೊಂಡು ನಟಿಸಿ ಸದ್ದು ಮಾಡಿರುವ ಯುವ ನಟ ನವೀನ್ ಶಂಕರ್ ನಟನೆಯ ಮುಂದಿನ ಚಿತ್ರ ಕ್ಷೇತ್ರಪತಿ. ಈ ಚಿತ್ರದಲ್ಲಿ ನವೀನ್ ಶಂಕರ್‌ಗೆ ನಾಯಕಿಯಾಗಿ ಅರ್ಚನಾ ಜೋಯಿಸ್ ನಟಿಸಿದ್ದು, ಶ್ರೀಕಾಂತ್ ಕಟಗಿ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ತನ್ನ ತಂದೆಯ ಆತ್ಮಹತ್ಯೆಗೆ ಹಾಗೂ ತನ್ನ ಊರಿನ ಇತರೆ ರೈತರ ಆತ್ಮಹತ್ಯೆಯ ವಿರುದ್ಧ ನಡೆಸುವ ಕ್ರಾಂತಿಯನ್ನು ನಡೆಸುವ ಕಥೆಯನ್ನು ಚಿತ್ರ ಹೊಂದಿದ್ದು, ಈ ಚಿತ್ರದ ಕಂಟೆಂಟ್ ಗೆಲ್ಲಲಿದೆ ಎಂಬ ನಿರೀಕ್ಷೆ ಇದೆ. ಚಿತ್ರ ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ.

ಬ್ಯಾಂಗ್:

ಶಾನ್ವಿ ಶ್ರೀವಾಸ್ತವ ಬಹು ದಿನಗಳ ಬಳಿಕ ಮತ್ತೆ ತೆರೆ ಮೇಲೆ ಬ್ಯಾಂಗ್ ಚಿತ್ರದ ಮೂಲಕ ಕಾಣಿಸಿಕೊಳ್ಳಲಿದ್ದು, ಈ ಚಿತ್ರ ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕಾರ್ಯಗಳಿಂದ ತುಸು ಗಮನ ಸೆಳೆದಿದೆ. ಈ ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಆಕ್ಷನ್ ಕಟ್ ಹೇಳಿದ್ದು, ಚಿತ್ರ ಇದೇ 18ರಂದು ತೆರೆಗೆ ಬರಲಿದೆ.

ಟೋಬಿ:

ರಾಜ್ ಬಿ ಶೆಟ್ಟಿ ನಟನೆ ಜತೆಗೆ ಕಥೆಯನ್ನೂ ಸಹ ಬರೆದಿರುವ ಚಿತ್ರ ಟೋಬಿ ಸಹ ಇದೇ ತಿಂಗಳು ಬಿಡುಗಡೆಯಾಗಲಿದೆ. ಈ ಚಿತ್ರ ಸೇಡಿನ ಕಥೆಯನ್ನು ಹೊಂದಿರಲಿದ್ದು, ಈ ಹಿಂದೆ ಇಂತಹದ್ದೇ ಮಾಸ್ ಚಿತ್ರ ಗರುಡ ಗಮನ ವೃಷಭ ವಾಹನ ಮೂಲಕ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ರಾಜ್ ಬಿ ಶೆಟ್ಟಿ ಈ ಬಾರಿ ಯಾವ ರೀತಿಯ ಕಥೆ ಬರೆದಿದ್ದಾರೆ ಎಂಬ ಕುತೂಹಲ ಮೂಡಿದೆ. ಈ ಚಿತ್ರ ಆಗಸ್ಟ್ 25ರಂದು ತೆರೆಗೆ ಬರಲಿದೆ.

More from Filmibeat

English summary
Sandalwood: List of Major Kannada movies releasing on August 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X