twitter
    For Quick Alerts
    ALLOW NOTIFICATIONS  
    For Daily Alerts

    'ಗುರುಗಳ ಗುರು' ಕಾಶಿನಾಥ್ ನಿಧನಕ್ಕೆ ಕಣ್ಣೀರಿಟ್ಟ ಕಲಾ ಕುಟುಂಬ

    By Bharath Kumar
    |

    ಅದು 80ರ ದಶಕದ ಕನ್ನಡ ಚಿತ್ರರಂಗ. ವಿಷ್ಣುವರ್ಧನ್, ಅಂಬರೀಶ್, ರಾಜ್ ಕುಮಾರ್, ಶಂಕರ್ ನಾಗ್ ಅಂತಹ ಕಲಾವಿದರು ಅಬ್ಬರಿಸುತ್ತಿದ್ದ ಸಮಯ. ಕಾದಂಬರಿ ಆಧಾರಿತ ಹಾಗೂ ಕಮರ್ಷಿಯಲ್ ಸಿನಿಮಾಗಳ ಕಾಲ. ಅಲ್ಲಿಯವರೆಗೂ ಮಡಿವಂತಿಕೆ, ಸಂಪ್ರದಾಯ, ಶಿಸ್ತು ಎಂಬ ಮೌಲ್ಯಗಳನ್ನಿಟ್ಟು ಸಿನಿಮಾ ಮಾಡುತ್ತಿದ್ದರು ಅಂದಿನ ನಿರ್ದೇಶಕರು.

    ಇಂತಹ ಸಂಪ್ರದಾಯ, ಸಂಸ್ಕ್ರತಿಯನ್ನ ಪಕ್ಕಕ್ಕಿಟ್ಟು ಕನ್ನಡ ಚಿತ್ರರಂಗದಲ್ಲಿ ಹೊಸ ಪದ್ದತಿ, ಹೊರ ಪರಂಪರೆ ಹುಟ್ಟುಹಾಕಿದ ನಟ, ನಿರ್ದೇಶಕ ಕಾಶಿನಾಥ್. ಹೀರೋ ಆಗಲು ಶಾರೀರ ಮತ್ತು ಶರೀರ ಮುಖ್ಯವೆಂಬ ಆಚಾರವನ್ನ ಮುರಿದ ಕಲಾವಿದ. ತಮ್ಮದೇ ಸಿನಿಮಾಗಳ ಮೂಲಕ ಹೊಸ ಅಲೆ ಸೃಷ್ಟಿಸಿದ ಕಲಾ ಚತುರ.

    photo gallery: ಅಪರೂಪದ ಅತಿಥಿಯ ಅಪರೂಪದ ಚಿತ್ರಗಳು

    ಇಂತಹ ಅಪರೂಪದ ಅತಿಥಿ ಈಗ ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ. ಅದೇಷ್ಟೋ ಕಲಾವಿದರ ಪಾಲಿಗೆ ಗುರುಗಳಾಗಿದ್ದ ಕಾಶಿನಾಥ್ ಅವರ ಅಗಲಿಕೆಗೆ ಶಿಷ್ಯವೃಂದ ಕಂಬನಿ ಮಿಡಿದಿದೆ. ಉಪೇಂದ್ರ, ಜಗ್ಗೇಶ್, ವಿ.ಮನೋಹರ್, ಗಿರಿಜಾ ಲೋಕೇಶ್, ಮಾಸ್ಟರ್ ಮಂಜುನಾಥ್ ಸೇರಿದಂತೆ ಹಲವರು ಕಾಶಿನಾಥ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ.....

    ನನ್ನ ಪಾಲಿಗೆ ದೇವರು

    ನನ್ನ ಪಾಲಿಗೆ ದೇವರು

    ''ಅವರು ಇಷ್ಟು ಬೇಗ ನಮ್ಮನ್ನ ಬಿಟ್ಟು ಹೋಗುತ್ತಿರಲಿಲ್ಲ. ಅವರ ಅನಾರೋಗ್ಯದ ವಿಷ್ಯವನ್ನ ಕೂಡ ತಿಳಿಸಿರಲಿಲ್ಲ. ನನ್ನ ಪಾಲಿಗೆ ಮಾತ್ರ ಅವರು ದೇವರು. ಅವರ ಕುಟುಂಬಕ್ಕೆ ಮತ್ತು ಕನ್ನಡ ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ'' - ಉಪೇಂದ್ರ, ನಟ

    ಹೊಸ ಕ್ರಾಂತಿಯ ಸೃಷ್ಟಿಕರ್ತ

    ಹೊಸ ಕ್ರಾಂತಿಯ ಸೃಷ್ಟಿಕರ್ತ

    ''ಕನ್ನಡ ಚಿತ್ರರಂಗದಲ್ಲಿ ಮಡಿವಂತಿಕೆಯನ್ನ ಬ್ರೇಕ್ ಮಾಡಿದ ನಟ, ನಿರ್ದೇಶಕ ಕಾಶಿನಾಥ್. ಹಾಸ್ಯದ ಮೂಲಕ ಹೊಸ ಕ್ರಾಂತಿ ಹುಟ್ಟುಹಾಕಿದ ಕಲಾವಿದ. ಹೀರೋ ಅಂದ್ರೆ ಹೀಗೆ ಇರ್ಬೇಕು ಎಂಬ ಕಲ್ಪನೆಯನ್ನ ದಾಟಿ ಬೆಳೆದ ನಟ.'' - ಜಗ್ಗೇಶ್, ನಟ

    ಅಹಂ ಇಲ್ಲದ ಸೂಪರ್ ಸ್ಟಾರ್

    ಅಹಂ ಇಲ್ಲದ ಸೂಪರ್ ಸ್ಟಾರ್

    ''ನಾನು ಅವರ ಜೊತೆ ಮಾಡಿದ್ದು ಒಂದೇ ಸಿನಿಮಾ. ಮೊದಲ ಸಲ ಅಭಿನಯಿಸುವ ಎಲ್ಲ ಕಲಾವಿದರಿಗೂ ಪ್ರೋತ್ಸಾಹ ನೀಡುತ್ತಿದ್ದರೇ, ಹೊರತು ಅವರೊಬ್ಬ ದೊಡ್ಡ ಕಲಾವಿದರು ಎಂಬ ಅಹಂ ಸ್ವಲ್ಪವೂ ಇರಲಿಲ್ಲ. ನಿಜವಾದ ಅಂಶಗಳನ್ನ ಕನ್ನಡಿಯಂತೆ ತೋರಿಸುತ್ತಿದ್ದ ಅವರ ಗುಣವನ್ನ ಜನ ಮೆಚ್ಚಿಕೊಳ್ಳುತ್ತಿದ್ದರು.'' - ಮಾಸ್ಟರ್ ಮಂಜುನಾಥ್, ನಟ

    ಚಿತ್ರರಂಗದ ದಿಕ್ಕು ಬದಲಿಸಿದ ನಿರ್ದೇಶಕ

    ಚಿತ್ರರಂಗದ ದಿಕ್ಕು ಬದಲಿಸಿದ ನಿರ್ದೇಶಕ

    ''ಒಂದು ದಾರಿಯಲ್ಲಿ ಹೋಗುತ್ತಿದ್ದ ಚಿತ್ರರಂಗವನ್ನ ಇನ್ನೊಂದು ದಿಕ್ಕಿಗೆ ಕರೆದುಕೊಂಡು ಹೋದವರು ಕಾಶಿನಾಥ್. ಹೊಸಬರ ತಂಡವನ್ನ ಕಟ್ಟಿಕೊಂಡು ಬೆಳಸಿದವರು. ಅವರ ಬಹುತೇಕ ಚಿತ್ರಗಳು ಹಿಂದಿಯಲ್ಲಿ ರೀಮೇಡ್ ಆಗುತ್ತಿತ್ತು. ಅದು ಅವರ ಕೆಲಸ ಏನು ಎಂಬುದನ್ನ ತೋರಿಸುತ್ತಿತ್ತು. ಚಿತ್ರರಂಗದ ಪ್ರತಿಯೊಂದು ವಿಭಾಗದಲ್ಲೂ ಕೆಲಸ ಮಾಡಿದ್ದರು. ಸಿನಿಮಾನ ತುಂಬ ಪ್ರೀತಿ ಮಾಡುತ್ತಿದ್ದರು.'' - ಸಂಗೀತ ನಿರ್ದೇಶಕ, ಗುರುಕಿರಣ್

    ಟ್ರೆಂಡ್ ಬದಲಾಯಿಸಿದ ನಿರ್ದೇಶಕ

    ಟ್ರೆಂಡ್ ಬದಲಾಯಿಸಿದ ನಿರ್ದೇಶಕ

    ''ಚಿತ್ರರಂಗಕ್ಕೆ ತುಂಬ ದೊಡ್ಡ ನಷ್ಟ. ಟ್ರೆಂಡ್ ಬದಲಾಯಿಸಿದ ಅದ್ಭುತವಾದ ನಿರ್ದೇಶಕ. ಒಳ್ಳೆಯ ನಟ. ಯಾರಿಗೂ ತೊಂದರೆ ಕೊಟ್ಟಂತಹ ವ್ಯಕ್ತಿಯಲ್ಲ. ಅವರಾಯ್ತು, ಅವರ ಕೆಲಸ ಆಯ್ತು ಎಂಬ ಸ್ವಭಾವ ಅವರದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' ಕೆ ಮಂಜು, ನಿರ್ಮಾಪಕ

    ನನ್ನ ಆದರ್ಶ ವ್ಯಕ್ತಿ ಕಾಶಿನಾಥ್

    ನನ್ನ ಆದರ್ಶ ವ್ಯಕ್ತಿ ಕಾಶಿನಾಥ್

    ''ಕಾಶಿನಾಥ್ ಅವರು ನನ್ನ ಆತ್ಮೀಯ ವ್ಯಕ್ತಿ. ನನ್ನ ಅವರ ಸಂಬಂಧ ಸುಮಾರು 30 ವರ್ಷದ ಸ್ನೇಹ. ನನ್ನ ಸಿನಿಮಾ ಮಾಡುವ ಶೈಲಿಯನ್ನ ಹೇಳಿಕೊಟ್ಟ ವ್ಯಕ್ತಿ. ಅವರೊಬ್ಬ ಗ್ರೇಟ್ ಮ್ಯಾನ್. ನಮಗೆ ಪ್ರತಿಯೊಂದು ಹೇಳಿಕೊಟ್ಟಿದ್ದರು. ಸಿನಿಮಾದ ವ್ಯವಹಾರ ಹೇಗಿರಬೇಕು, ಸಿನಿಮಾ ಕಡಿಮೆ ಬಜೆಟ್ ನಲ್ಲಿ ಸಿನಿಮಾ ಹೇಗೆ ಮಾಡ್ಬೇಕು ಎಂಬುದನ್ನ ಅವರಿಂದ ಕಲಿತೆ. ನನ್ನ ಏಳಿಗಿಗೆ ಕಾಶಿನಾಥ್ ಅವರು ಕಾರಣ. '' - ಕುಮಾರ್ ಗೋವಿಂದ್, ನಟ

    ಹೊಸ ಕಲಾವಿದರ ಉದಯಕ್ಕೆ ಕಾರಣ

    ಹೊಸ ಕಲಾವಿದರ ಉದಯಕ್ಕೆ ಕಾರಣ

    ''ಎಷ್ಟೋ ಕಲಾವಿದರನ್ನ ಬೆಳಸಿದ ಕೀರ್ತಿ ಅವರಿಗೆ ಸಲ್ಲುತ್ತೆ. ಉಮಾಶ್ರೀ, ಉಪೇಂದ್ರ, ನಾನು, ಡಾ ಜನಾರ್ಧನ್ ನಾಯ್ಡು ಸೇರಿದಂತೆ ಹಲವರನ್ನ ಬೆಳಸಿದ್ದರು. ಅವರ ಮನೆಯಲ್ಲೇ ಕೂತು ನಾವು ಕಲಿತಿದ್ದೇವೆ. ಪ್ರತಿಭೆ ಯಾರಲ್ಲಾದ್ರು ಕಂಡರೇ, ಅವರನ್ನ ಗುರುತಿಸಿ ಮೊದಲು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅರ್ಹತೆ ಇದ್ದವರಿಗೆ ಅವಕಾಶ ನೀಡುತ್ತಿದ್ದರು.'' - ವಿ.ಮನೋಹರ್, ಸಂಗೀತ ನಿರ್ದೇಶಕ

    ಹೊಸ ಪರಂಪರೆಯ ಸೃಷ್ಟಿಕರ್ತ

    ಹೊಸ ಪರಂಪರೆಯ ಸೃಷ್ಟಿಕರ್ತ

    ''ಇದು ಆಘಾತದ ವಿಚಾರ. ಅವರಲ್ಲಿ ಇದ್ದ ಒಂದು ವಿಶೇಷ ಮತ್ತು ವಿಶಿಷ್ಟ ಅಂದ್ರೆ, ಅಂದಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ಕಲಾವಿದರಂತೆ ಶರೀರ ಮತ್ತು ಶಾರೀರ ಹೊಂದಿರಲಿಲ್ಲ. ಆದ್ರೆ, ಇದನ್ನೆಲ್ಲಾ ಮೀರಿ, ಸರಳ, ಮಧ್ಯಮ, ಕೆಳವರ್ಗದ ಜನಗಳ ಸಮಸ್ಯೆಗಳನ್ನ ಪ್ರತಿನಿಧಿಸುವ ವ್ಯಕ್ತಿಯಾಗಿ ಬೆಳೆದರು. ಸಾಮಾಜಿಕ ಸಮಸ್ಯೆಗಳು, ಕೌಟಂಬಿಕ ಸಮಸ್ಯೆಗಳನ್ನ ಹಾಸ್ಯದ ಮೂಲಕ ತೋರಿಸಿ ಯಶಸ್ಸು ಕಂಡರು. ಹೊಸ ಪರಂಪರೆ, ಹೊಸ ಪದ್ದತಿ ಪರಿಚಯ ಮಾಡಿದ ಕಲಾವಿದ. '' - ಮುಖ್ಯಮಂತ್ರಿ ಚಂದ್ರು, ನಟ

    ಸಾಮಾಜಿಕ ಕಳಕಳಿಯ ನಿರ್ದೇಶಕ

    ಸಾಮಾಜಿಕ ಕಳಕಳಿಯ ನಿರ್ದೇಶಕ

    ''ತುಂಬ ಬೇಜಾರಗಿದೆ. ಅವರ ಸಿನಿಮಾದಲ್ಲಿ ಸಾಮಾಜಿಕ ಕಳಕಳಿ ಹೆಚ್ಚಿರುತ್ತಿತ್ತು. ಅವರು ಸಿನಿಮಾದಲ್ಲಿ ನಾನು ಅಭಿನಯ ಮಾಡಿದ್ದೇನೆ. ಅಂತಹ ನಿರ್ದೇಶಕರನ್ನ ಕಳೆದುಕೊಂಡಿದ್ದ ಬೇಸರ. ಅವರ ಆತ್ಮಕ್ಕೆ ಶಾಂತಿ ಸಿಗಲಿ. '' - ಗಿರಿಜಾ ಲೋಕೇಶ್, ನಟಿ

    English summary
    Sandalwood mourns death of veteran Kannada actor-director Kashinath. Veteran Kannada actor and director Kashinath passed away in a private hospital in Bengaluru on Thursday (january 18th).
    Thursday, January 18, 2018, 13:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X