ಸಿನಿಮಾ ಚುರುಮುರಿ: 'ಹ್ಯಾಪಿಲಿ ಮ್ಯಾರಿಡ್‌'ನಲ್ಲಿ ರಕ್ತದ ಕಲೆ, ಹೈದರಾಬಾದ್‌ನಲ್ಲಿ 'ಮಾರ್ಟಿನ್'

By ಫಿಲ್ಮೀಬೀಟ್ ಡೆಸ್ಕ್‌

'ಟಗರು' ಪುಟ್ಟಿ ಮಾನ್ವಿತಾ, ಪೃಥ್ವಿ ಅಂಬರ್ ಒಟ್ಟಾಗಿ ನಟಿಸುತ್ತಿರುವ 'ಹ್ಯಾಪಿಲಿ ಮ್ಯಾರಿಡ್' ಸಿನಿಮಾದ ಪೋಸ್ಟರ್ ಅನ್ನು ಇಂದು ನಟ, ನಿರ್ದೇಶಕ ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ.

ಕ್ರಿಶ್ಚಿಯನ್ ಜೋಡಿಯಂತೆ ವೇಷ ಧರಿಸಿ 'ಹ್ಯಾಪಿಲಿ ಮ್ಯಾರಿಡ್' ಎಂದು ಬೋರ್ಡ್ ಅನ್ನು ಪೃಥ್ವಿ ಅಂಬರ್, ಮಾನ್ವಿತಾ ಹಿಡಿರುವ ಚಿತ್ರವನ್ನು ಪೋಸ್ಟರ್ ಒಳಗೊಂಡಿದೆ. ಪೋಸ್ಟರ್‌ನಲ್ಲಿ ರಕ್ತ ಮೆತ್ತಿದ ಚಾಕುವಿನ ಚಿತ್ರವೂ ಇದ್ದು, 'ಹ್ಯಾಪಿಲಿ ಮ್ಯಾರಿಡ್' ಸಿನಿಮಾ ಕೇವಲ ಪ್ರೇಮಕತೆಯನ್ನು ಒಳಗೊಂಡಿಲ್ಲ ಬದಲಿಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎಂಬುದನ್ನು ಹೇಳುತ್ತಿದೆ.

ಸಿನಿಮಾದ ವಿಶೇಷವೆಂದರೆ ಪೋಸ್ಟರ್ ಬಿಡುಗಡೆ ಆಗುವ ಮುನ್ನವೇ ಚಿತ್ರೀಕರಣವನ್ನೇ ಮುಗಿಸಿ ಆಗಿದೆ. ಕೆಲವೇ ಲೊಕೇಶನ್‌ನಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದ್ದ ಕಾರಣದಿಂದ ಚಿತ್ರೀಕರಣವನ್ನು ಕೆಲವೇ ದಿನಗಳಲ್ಲಿ ಚಿತ್ರತಂಡ ಮುಗಿಸಿದೆ.

Sandalwood Movie News: Vikrant Rona Audio Rights Sold, Happily Married Movie Poster Release

ಸಿನಿಮಾದಲ್ಲಿ ಪೃಥ್ವಿ ಅಂಬರ್, ಮಾನ್ವಿತಾ ಜೊತೆಗೆ ಪೋಷಕ ನಟ ಧರ್ಮಣ್ಣ ಕಡೂರು ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪೃಥ್ವಿ ಅಂಬರ್ ಜೊತೆಗೆ 'ಶುಗರ್ ಲೆಸ್' ಸಿನಿಮಾದಲ್ಲಿಯೂ ಧರ್ಮಣ್ಣ ಕಡೂರು ನಟಿಸಿದ್ದಾರೆ.

ಮಮ್ಮಿ ನಿರ್ದೇಶಕ ಲೋಹಿತ್ ಅವರ ಫ್ರೈಡೇ ಫಿಲ್ಮ್ಸ್‌ ಮತ್ತು ಸಿಲ್ವರ್ ಟ್ರೈನ್ ಇಂಟರ್‌ನ್ಯಾಷನಲ್ & ಟಿನಿ ಹ್ಯಾಂಡ್ಸ್ ಪ್ರೊಡಕ್ಷನ್ಸ್‌ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಬಿಜಿ ಅರುಣ್, ಜೋಸ್‌ಕುಟ್ಟಿ ಮಧಥಿಲ್, ರಂಜಿತ್ ಬಂಡವಾಳ ಹೂಡಿದ್ದಾರೆ. ಈ ಹಿಂದೆ ಪೃಥ್ವಿ ಜೊತೆಗೆ 'ಲೈಫ್‌ ಈಸ್ ಬ್ಯೂಟಿಫುಲ್' ಸಿನಿಮಾ ಮಾಡಿದ್ದ ಅರುಣ್ಕುಮಾರ್ ಎಮ್. ಮತ್ತು ಸಬು ಅಲೋಯ್ಸಿಸ್‌ 'ಹ್ಯಾಪಿಲಿ ಮ್ಯಾರೀಡ್'ಗೆ ನಿರ್ದೇಶನ ಮಾಡುತ್ತಿದ್ದಾರೆ.

ಹೈದರಾಬಾದ್‌ನಲ್ಲಿ ಧೃವ ಸರ್ಜಾ
ನಟ ಧೃವ ಸರ್ಜಾ ಹೈದರಾಬಾದ್‌ನಲ್ಲಿ ಫೈಟಿಂಗ್ ಮಾಡುತ್ತಿದ್ದಾರೆ. ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿರುವ ಭರ್ಜರಿ ಆಕ್ಷನ್ ಸಿನಿಮಾ 'ಮಾರ್ಟಿನ್' ಚಿತ್ರೀಕರಣ ಹೈದರಾಬಾದ್‌ನಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದು, ಇದೀಗ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ. ಫೈಟ್‌ ದೃಶ್ಯಗಳನ್ನು ಖ್ಯಾತ ಸಾಹಸ ನಿರ್ದೇಶಕರಾದ ರಾಮ್-ಲಕ್ಷ್ಮಣ್ ಸಂಯೋಜಿಸಿದ್ದಾರೆ. ಹೈದರಾಬಾದ್‌ ಚಿತ್ರೀಕರಣದ ಬಳಿಕ ಬಂಗಾರಪೇಟೆಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.

'ವಿಕ್ರಾಂತ್ ರೋಣ' ಆಡಿಯೋ ಹಕ್ಕುಗಳು
ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ'ದ ಆಡಿಯೋ ಹಕ್ಕುಗಳು ಲಹರಿ ಸಂಸ್ಥೆ ಪಾಲಾಗಿವೆ. ಆಡಿಯೋ ಹಕ್ಕಿಗೆ ಲಹರಿ ಸಂಸ್ಥೆಯು 3 ಕೋಟಿ ನೀಡಿದೆ ಎನ್ನಲಾಗುತ್ತಿದೆ. ಇದು ಕಡಿಮೆ ಮೊತ್ತವೇನಲ್ಲ. 'ಕೆಜಿಎಫ್ 2' ಸಿನಿಮಾ ಹೊರತುಪಡಿಸಿದರೆ ಇನ್ನಾವ ಕನ್ನಡ ಸಿನಿಮಾದ ಆಡಿಯೋ ಹಕ್ಕುಗಳು ಸಹ ಎರಡು ಕೋಟಿ ದಾಟಿರಲಿಲ್ಲ. ಅಂಥಹುದರಲ್ಲಿ 'ವಿಕ್ರಾಂತ್ ರೋಣ' ಸಿನಿಮಾದ ಆಡಿಯೋ ಹಕ್ಕಿಗೆ ಮೂರು ಕೋಟಿ ಬೆಲೆ ಸಿಕ್ಕಿರುವುದು ಸಾಮಾನ್ಯ ಸಂಗತಿಯಲ್ಲ. 'ವಿಕ್ರಾಂತ್ ರೋಣ' ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Sandalwood Movie News: Vikrant Rona Audio Rights Sold, Happily Married Movie Poster Release, Dhruva Sarja shooting in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X