For Quick Alerts
  ALLOW NOTIFICATIONS  
  For Daily Alerts

  ಚುರುಮುರಿ: ಬಾಲಿವುಡ್‌ ನಟನೊಂದಿಗೆ ಜಮೀರ್ ಭೋಜನ, ಖುಷಿಯಾದ ರಚಿತಾ ರಾಮ್ ಇತ್ಯಾದಿ

  |

  ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹ್ಮದ್ ಅವರು ಬಾಲಿವುಡ್‌ನ ಖ್ಯಾತ ಹಾಸ್ಯ ನಟ ಜಾನಿ ಲಿವರ್ ಅವರನ್ನು ಭೇಟಿ ಮಾಡಿದ್ದಾರೆ.

  ಮುಂಬೈಗೆ ಹೋಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಹಾಸ್ಯ ನಟ ಜಾನಿ ಲಿವರ್ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರ ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈನ ಜೆಡಬ್ಲು ಮ್ಯಾರಿಯೇಟ್ ಹೋಟೆಲ್‌ನಲ್ಲಿ ಜಾನಿ ಲಿವರ್ ಅವರನ್ನು ಭೇಟಿಯಾಗಿದ್ದು ಒಟ್ಟಿಗೆ ಭೋಜನ ಸವಿದಿದ್ದಾರೆ.

  ಜಮೀರ್‌ಗೆ ಬಾಲಿವುಡ್‌ನ ಕೆಲವು ನಟರೊಂದಿಗೆ ನಂಟಿದೆ. ಈ ಹಿಂದೆ ಜಮೀರ್ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟರಾದ ಸಂಜಯ್ ದತ್, ಸುನಿಲ್ ಶೆಟ್ಟಿ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಹಾಗೂ ಇತರರು ಆಗಮಿಸಿದ್ದರು.

  ಜಮೀರ್ ಅಹ್ಮದ್ ಪುತ್ರ ಜಾಯೇದ್ ಖಾನ್‌ ಕನ್ನಡ ಸಿನಿಮಾ 'ಬನಾರಸ್‌'ನಲ್ಲಿ ನಟಿಸಿದ್ದಾರೆ. ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ.

  ಚಂದನವನಕ್ಕೆ ಬಂದ ಅರ್ಗಸ್

  ಚಲನಚಿತ್ರ ನಿರ್ಮಾಣಕ್ಕೆ ಸೌಲಭ್ಯಗಳನ್ನು ಒದಗಿಸುವ ಅರ್ಗಸ್ ಸಂಸ್ಥೆ ಇದೀಗ ತನ್ನ ಸೇವೆಯನ್ನು ಕರ್ನಾಟಕದಲ್ಲಿ ಆರಂಭಿಸಿದೆ. ಕನ್ನಡ ಚಲನಚಿತ್ರ ನಿರ್ಮಾಣ ಮಾಡುವವರಿಗೆ ಅಗತ್ಯ ಸೌಲಭ್ಯಗಳನ್ನು, ಸಲಕರಣೆಗಳನ್ನು ಅರ್ಗಸ್ ಸಂಸ್ಥೆ ಒದಗಿಸಲಿದೆ. ಅರ್ಗಸ್ ಸಂಸ್ಥೆಯು ಇತ್ತೀಚೆಗೆ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಸದಸ್ಯರು ಭಾಗವಹಿಸಿ, ಅರ್ಗಸ್ ಸಂಸ್ಥೆ ಚಂದನವನದಲ್ಲಿ ಸೇವೆ ವಿಸ್ತರಿಸಿರುವುದರಿಂದ ಚಿತ್ರರಂಗಕ್ಕೆ ಒಳಿತಾಗಲಿದೆ ಎಂದಿದ್ದಾರೆ.

  Sandalwood News: Zameer Ahmed Meets Johnny Lever, Meghana Gaonkar New Photo Shoot

  ಖುಷಿಯಾದ ರಚಿತಾ ರಾಮ್

  ನಟಿ ರಚಿತಾ ರಾಮ್ ಬಹಳ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ ರಚಿತಾ ರಾಮ್ ಸಹೋದರಿ ಮನೆಗೆ ಬಂದಿರುವುದು. ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ವಿದೇಶದಿಂದ ತವರಿಗೆ ವಾಪಸ್ಸಾಗಿದ್ದಾರೆ. ಕಳೆದ ವರ್ಷ ವಿವಾಹವಾದ ನಿತ್ಯಾ ರಾಮ್ ಆ ನಂತರ ಪತಿಯೊಂದಿಗೆ ವಿದೇಶಕ್ಕೆ ತೆರಳಿದ್ದರು. ಬಳಿಕ ಕೊರೊನಾ ಕಾರಣಕ್ಕೆ ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ಇದೀಗ ಭಾರತಕ್ಕೆ ವಾಪಸ್ಸಾಗಿದ್ದು, ಅಕ್ಕನೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಚಿತಾ ರಾಮ್, ''ನಾನು ಎಷ್ಟು ಖುಷಿಯಾಗಿದ್ದೇನೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಮತ್ತೆ ನಾವಿಬ್ಬರು ಒಟ್ಟಾಗಿದ್ದೇವೆ'' ಎಂದಿದ್ದಾರೆ. ಇಬ್ಬರು ಒಟ್ಟಿಗಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ನಿತ್ಯಾ ರಾಮ್ ಸಹ ನಟಿಯಾಗಿ ಗುರುತಿಸಿಕೊಂಡಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದಿನಿ' ಧಾರಾವಾಹಿ ಮೂಲಕ ಅವರು ಮನೆಮಾತಾಗಿದ್ದರು.

  ಫೊಟೊಶೂಟ್ ಮಾಡಿಸಿಕೊಂಡ ಮೇಘನಾ ಗಾಂವ್ಕರ್

  ನಟಿ ಮೇಘನಾ ಗಾಂವ್ಕರ್ ಫೊಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಹೊಸ ಫೊಟೊಗಳನ್ನು ಕ್ಯೂಟ್-ಹಾಟ್‌ ಆಗಿ ಕಾಣುತ್ತಿದ್ದಾರೆ ನಟಿ. ಹೊಸ ಸಿನಿಮಾಕ್ಕಾಗಿ ಫೋಟೊಶೂಟ್ ಮಾಡಿಸಿಲ್ಲ ಬದಲಿಗೆ ಹಾಗೆ ಸುಮ್ಮನೆ ಫೋಟೊ ಶೂಟ್ ಮಾಡಿಸಿದ್ದಾರೆ. ಆಗಾಗ್ಗೆ ಹೀಗೆ ಹೊಸ ಫೊಟೊ ಶೂಟ್ ಮಾಡಿಸಿಕೊಳ್ಳುವುದು ನಟಿಯರಿಗೆ ಅಭ್ಯಾಸ. 'ಶುಭ ಮಂಗಳ' ಸಿನಿಮಾದಲ್ಲಿ ನಟಿಸಿರುವ ಮೇಘನಾ 'ಕರ್ವ 3' ಹಾಗೂ ಹೆಸರಿಡದ ಇನ್ನೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. 'ಕರ್ವ 3' ಸಿನಿಮಾದ ಚಿತ್ರೀಕರಣ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದೆ.

  ಪ್ರಜ್ವಲ್ ದೇವರಾಜ್ ಸಿನಿಮಾದಲ್ಲಿ ನಟ ಗೋವಿಂದ

  ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತ ನಟ ಗೋವಿಂದ ನಟಿಸುತ್ತಿದ್ದಾರೆ. ಡಾ.ರಾಜ್‌ಕುಮಾರ್ ಅಭಿಮಾನಿಯಾಗಿರುವ ಗೋವಿಂದ ಈ ಹಿಂದೆ ಹಿಂದಿ ರಿಯಾಲಿಟಿ ಶೋನಲ್ಲಿ ಅಣ್ಣಾವ್ರ ಹಾಡು ಹಾಡಿ ಕನ್ನಡಿಗರ ಮನ ಗೆದ್ದಿದ್ದರು. ಇದೇ ಮೊದಲ ಬಾರಿಗೆ ಗೋವಿಂದ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಕಿರಣ್ ವಿಶ್ವನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ನಾಯಕ ನಟರಾಗಿ ನಟಿಸುತ್ತಿರುವ ಈ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.

  ಸಿನಿಮಾ ಆರಂಭಿಸಿದ ಕಿರಿಕ್ ಕೀರ್ತಿ

  ಮಾಜಿ ಬಿಗ್‌ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಸಿನಿಮಾಕ್ಕೆ 'ಲವ್ವು ಮದುವೆ ಇತ್ಯಾದಿ' ಎಂಬ ಹೆಸರಿಟ್ಟಿದ್ದು ಚಿತ್ರೀಕರಣ ಆರಂಭವಾದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಕಿರಿಕ್ ಕೀರ್ತಿ ನಟಿಸಿದ್ದಾರೆ.

  English summary
  Sandalwood news: Zameer Ahmed meets Johnny Lever, Meghana Gaonkar new photo shoot. Kirik Keerthy starts new movie shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X