»   » ಸ್ಯಾಂಡಲ್ ವುಡ್ ನಿರ್ಮಾಪಕನನ್ನು ಬಂಧಿಸಿದ ಬಸವೇಶ್ವರನಗರ ಪೊಲೀಸರು!

ಸ್ಯಾಂಡಲ್ ವುಡ್ ನಿರ್ಮಾಪಕನನ್ನು ಬಂಧಿಸಿದ ಬಸವೇಶ್ವರನಗರ ಪೊಲೀಸರು!

Posted By:
Subscribe to Filmibeat Kannada

ಸರಗಳ್ಳತನ ಮಾಡುತ್ತಿದ್ದ ಸ್ಯಾಂಡಲ್ ವುಡ್ ಚಿತ್ರರಂಗದ ನವ ನಿರ್ಮಾಪಕ ಪ್ರತಾಪ್ ರಂಗು ಎನ್ನುವವನನ್ನು ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಹಲವು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನನ್ನು ಪೊಲೀಸ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಾಪ್ ರಂಗು ಮಹಾಲಕ್ಷ್ಮಿ ಲೇ ಔಟ್ ಸುತ್ತಮುತ್ತ ಸರಗಳ್ಳತನ ಮಾಡುತ್ತಿದ್ದ. 15 ದಿನಗಳ ಹಿಂದೆ ಈತ ನಗರದ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿ ಅನಂತಪುರ ಜಿಲ್ಲೆಯ ಮಡಕಸೀರಾದಲ್ಲಿ ತಲೆ ಮರಿಸಿಕೊಂಡಿದ್ದ. ಆದರೆ ನಿನ್ನೆ ಸಂಜೆ ಎಂ.ಎಸ್ ಬಿಲ್ಡಿಂಗ್ ಬಳಿ ಆರೋಪಿ ಪ್ರತಾಪ್ ರಂಗು ಪೊಲೀಸರ ಕೈಗೆ ಸಿಕ್ಕಿದ್ದಾನೆ.

Sandalwood producer arrest in the case of chain snatching

ಬಂಧಿತ ಆರೋಪಿ ಪ್ರತಾಪ್ ರಂಗು 'ಡಬಲ್ ಮೀನಿಂಗ್' ಎನ್ನುವ ಸಿನಿಮಾದ ನಿರ್ಮಾಪಕನಾಗಿದ್ದು, ಸದ್ಯ ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

English summary
Sandalwood producer Prathap Rangu arrest in the case of chain snatching. ಸ್ಯಾಂಡಲ್ ವುಡ್ ನಿರ್ಮಾಪಕ ಪ್ರತಾಪ್ ರಂಗು ಎನ್ನುವವನನ್ನು ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada