twitter
    For Quick Alerts
    ALLOW NOTIFICATIONS  
    For Daily Alerts

    ಖ್ಯಾತ ನಿರ್ದೇಶಕನಿಂದ ಮಿಸ್ ಆಯ್ತು ಪುನೀತ್ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಅವಕಾಶ!

    |

    ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ 'ಜೇಮ್ಸ್' ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನೇನು 'ಜೇಮ್ಸ್' ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ 'ಜೇಮ್ಸ್' ಕ್ರೇಜ್ ಇದೀಗ ಎಲ್ಲೆಡೆ ಜೋರಾಗ್ತಿದೆ.

    ಇದರ ಬೆನ್ನಲ್ಲೆ 'ಜೇಮ್ಸ್' ಸಿನಿಮಾದ ಬಗ್ಗೆ ಹಾಗೂ, ಅಪ್ಪು ಸರಳತೆ ಬಗ್ಗೆ ಸಾಕಷ್ಟು ಮಂದಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ನಾವು ಕಂಡಂತೆ ಅಪ್ಪು ಹೇಗಿದ್ರು ಎಂಬ ಬಗ್ಗೆ ಹಲವು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಅಪ್ಪು ಬರ್ತ್ ಡೇ ದಿನವೇ 'ಜೇಮ್ಸ್' ರಿಲೀಸ್, ಇದು ಪುನೀತ್‌ ಕನಸು!ಅಪ್ಪು ಬರ್ತ್ ಡೇ ದಿನವೇ 'ಜೇಮ್ಸ್' ರಿಲೀಸ್, ಇದು ಪುನೀತ್‌ ಕನಸು!

    ಅದರಂತೆ ಇದೀಗ ಖ್ಯಾತ ಪ್ರೊಡ್ಯೂಸರ್, ಹಾಗೂ ದೊಡ್ಮನೆಗೆ ಹೆಚ್ಚು ಆಪ್ತರಾಗಿರುವ ಶ್ರೀಕಾಂತ್ ಅವರು ಒಂದಷ್ಟು ಕುತೂಹಲಕಾರಿ ಮಾಹಿತಿಯನ್ನು ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಶ್ರೀಕಾಂತ್ ಏನು ಮಾತನಾಡಿದ್ದಾರೆ ಎಂದು ಮುಂದೆ ಓದಿ.

    ಅಪ್ಪುಗೆ ಎಲ್ಲಿ ಹೋದ್ರು ಶಿವಣ್ಣಂದೆ ಜಪ

    ಅಪ್ಪುಗೆ ಎಲ್ಲಿ ಹೋದ್ರು ಶಿವಣ್ಣಂದೆ ಜಪ

    ಶಿವಣ್ಣ ಮತ್ತು ಅಪ್ಪು ಸಂಬಂಧದ ಬಗ್ಗೆ ಕೆಪಿ ಶ್ರೀಕಾಂತ್ ಹೇಳಿದ್ದು ಹೇಗೆ "ಶೂಟಿಂಗ್ ಬಿಟ್ರೆ ಅದರಾಚೆಗೆ ಅಪ್ಪು ಇನ್ನೂ ಅದ್ಭುತ. ಶಿವಣ್ಣ ಬಗ್ಗೇನೆ ಮಾತಾಡ್ತಾರೆ. ಶಿವಣ್ಣ ಶಿವಣ್ಣ ಅಂತ ಜಪ ಮಾಡ್ತಾ ಇರ್ತಿದ್ರು. ಎಲ್ಲೇ ಹೋದ್ರು ಬಂದ್ರೂ ಶಿವಣ್ಣನ ನೆನಪಿಸಿಕೊಳ್ಳದೆ ಇರುತ್ತಿರಲಿಲ್ಲಾ. ಶಿವಣ್ಣನೂ ಅಷ್ಟೇ ಅಪ್ಪು ಬಗ್ಗೆ ಮಾತಾಡ್ತಾ ಇರ್ತಿದ್ರು. ಹೇಳಬೇಕು ಅಂದರೇ ಶಿವಣ್ಣ, ಅಪ್ಪು ಒಂಥರಾ ರಾಮ ಲಕ್ಷ್ಮಣರಂತೆ ಇದ್ದವ್ರು. ಇನ್ನು ಅಪ್ಪುಗೆ ಟೆಕ್ನಾಲಜಿ ಗಳ ಬಗ್ಗೆ ಹೆಚ್ಚು ಆಸಕ್ತಿ. ನಾವು ಆ ಕ್ಯಾಮರ ತರಬೇಕು, ಉತ್ತಮ ಕ್ಯಾಮರ ಇದ್ರೆ ಇನ್ನೂ ಚನಾಗಿರುತ್ತೆ ಅಂತಿದ್ರು ಅಪ್ಪು. ಅಮೇಲೆ ಕನ್ನಡ ಇಂಡಸ್ಟ್ರಿಯನ್ನು ಮೇಲಕ್ಕೆ ತರಬೇಕು, ಇನ್ನು ಏನಾದ್ರು ಪ್ರಯತ್ನ ಮಾಡಬೇಕು ಅಂತಿದ್ರು. ಅಪ್ಪು ಇಂಡಸ್ಟ್ರಿಗೆ ಬಂದು ಹತ್ತು ವರ್ಷ ಆದಮೇಲೆ ಪಿಆರ್‌ಕೆ ಸ್ಥಾಪಿಸಿದ್ರು. ಆವರಿಗೆ ಪಿಆರ್‌ಕೆ ಸಂಸ್ಥೆ ಕನಸು ಆಗಿನಿಂದಲೂ ಇತ್ತು. 'ಅಪ್ಪು' ಮತ್ತು 'ಅಭಿ' ಸಿನಿಮಾ ಟೈಮ್‌ನಲ್ಲೆ ಏನೇನೊ ಯೋಚನೆ ಮಾಡ್ತಿದ್ರು . ಯಾರಿಗೂ ಗೊತ್ತಿಲ್ಲ ಅಪ್ಪು ಕೈನಲ್ಲಿ ಉತ್ತಮ ಸಿನಿಮಾ ಇದ್ವು. ಇನ್ನೇನು ಕೆಲವೇ ದಿನಗಳಲ್ಲಿ ಅನೌನ್ಸ್ ಆಗೋದ್ರಲ್ಲಿ ಇತ್ತು. ಆ ಸಿನಿಮಾಗಳು ಬಂದಿದ್ರೆ, ಖಂಡಿತಾ ಸ್ಯಾಂಡಲ್‌ವುಡ್‌ ಬಗ್ಗೆ ಎಲ್ಲಾ ಇಂಡಸ್ಟ್ರಿಯವರು ಮಾತನಾಡುವಂತೆ ಆಗುತ್ತಿತ್ತು" ಎಂದಿದ್ದಾರೆ ಶ್ರೀಕಾಂತ್

    'ಜೇಮ್ಸ್' 4 ದಿನದಲ್ಲಿ 100 ಕೋಟಿ ಟಾರ್ಗೆಟ್!'ಜೇಮ್ಸ್' 4 ದಿನದಲ್ಲಿ 100 ಕೋಟಿ ಟಾರ್ಗೆಟ್!

    'ಮಯೂರ' ನಿರ್ದೇಶಕರ ನಿಧನದಿಂದ ಚಿತ್ರ ನಿಂತೋಯ್ತು

    'ಮಯೂರ' ನಿರ್ದೇಶಕರ ನಿಧನದಿಂದ ಚಿತ್ರ ನಿಂತೋಯ್ತು

    ಮಾತು ಮುಂದುವರೆಸಿ "ಅಪ್ಪು ಜೊತೆ 'ಮಯೂರ' ಅಂತ ಸಿನಿಮಾ ಕೂಡ ನಾನು ಮಾಡಬೇಕಿತ್ತು. ಅದಕ್ಕೆ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ವಿ. 'ಮಯೂರ' ಸಿನಿಮಾದ ಮುಹೂರ್ತ ಕೂಡ ನೇರವೇರಿತ್ತು. ಆದರೇ ಆಗಬಾರದ ಒಂದು ದುರ್ಘಟನೆ ನಡೆದು ಹೋಯಿತು. ಮಯೂರ ಸಿನಿಮಾ ಡೈರೆಕ್ಟ್ ಮಾಡಬೇಕಿದ್ದ ತೆಲುಗಿನ 'ವರ್ಷಂ' ಚಿತ್ರ ನಿರ್ದೇಶಕ ಶೋಭನ್ ಮುಹೂರ್ತ ಆಗಿ ಕೆಲದಿನದ ನಂತ್ರ ಸಾವನ್ನಪ್ಪಿದ್ರು. ಅಪ್ಪು ಕೂಡ ಹೋಗಿ ಅಂತಿಮ ದರ್ಶನ ಪಡೆದಿದ್ರು. 'ಮಯೂರ' ಕಥೆ ಕೂಡ ಶೋಭನ್ ಅವರದ್ದೇ ಆಗಿತ್ತು. ಈ ಕಥೆಯನ್ನ ರಾಘಣ್ಣ ತುಂಬಾ ಇಷ್ಟ ಪಟ್ಟಿದ್ರು. 2007ರಲ್ಲಿ ಈ ಸಿನಿಮಾದ ಪ್ಲಾನ್ ನಡೆದಿತ್ತು. ಈಗ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಅಂತಾರೇ, ಆದ್ರೆ ಅಪ್ಪು ಅಭಿನಯಿಸ ಬೇಕಿದ್ದ ಈ 'ಮಯೂರ' ಚಿತ್ರ ತಯಾರಾಗಿದ್ರೆ 2007ರಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಆಗ್ತಿತ್ತು.

    ಶಿವಣ್ಣ ಈ ಕಥೆ ಪುನೀತ್‌ಗೆ ಚನಾಗಿರುತ್ತೆ ಅಂತ ಮಾಡಿಸಿದ್ರು

    ಶಿವಣ್ಣ ಈ ಕಥೆ ಪುನೀತ್‌ಗೆ ಚನಾಗಿರುತ್ತೆ ಅಂತ ಮಾಡಿಸಿದ್ರು

    ಅಪ್ಪು ಸಿನಿಮಾದ ಬಗ್ಗೆ ಮಾತನಾಡಿದ ಶ್ರೀಕಾಂತ್ "'ಅಪ್ಪು' ಸಿನಿಮಾ ಆಗಲು ಕಾರಣ ಶಿವಣ್ಣ. ಪೂರಿ ಜಗನ್ನಾಥ್ ಅವ್ರು ಬಂದು 'ಅಪ್ಪು' ಕಥೆಯನ್ನು ಹೇಳಿದ್ದು ಶಿವಣ್ಣನಿಗೆ. ಆದ್ರೆ ಶಿವಣ್ಣ ಈ ಕಥೆ ಕೇಳಿ ಈ ಸಿನಿಮಾ ಪುನೀತ್‌ ಗೆ ಒಪ್ಪುತ್ತೆ, ಪುನೀತ್ ಈ ಸಿನಿಮಾ ಮಾಡಿದ್ರೆ ಇನ್ನು ಉತ್ತಮವಾಗಿರುತ್ತೆ ಅಂದ್ರು. ಅಮೇಲೆ ಶಿವಣ್ಣನೇ ಅಪ್ಪು ಮತ್ತು ಅಪ್ಪಾಜಿಯನ್ನ ಕರೆದುಕೊಂಡು ಹೋಗಿ ಈ ಸಿನಿಮಾ ಅಪ್ಪುನೇ ಮಾಡ್ಲಿ ಅಂತ ಒಪ್ಪಿಸಿದ್ರು. ಹೀಗಾಗಿ ಶಿವಣ್ಣ ಮಾಡಬೇಕಿದ್ದ ಕಥೆಯನ್ನು ಪುನೀತ್ ಮಾಡಿದ್ರು. 'ಅಪ್ಪು' ಸಿನಿಮಾ ಸೂಪರ್ ಡೂಪರ್ ಹಿಟ್ ಕೂಡ ಆಯ್ತು" ಎಂದಿದ್ದಾರೆ.

    ಶೀಘ್ರದಲ್ಲೇ 'ಶಕ್ತಿಧಾಮ' ಆವರಣದಲ್ಲಿ ಶಾಲೆ ನಿರ್ಮಾಣ: ನನಸಾಗಲಿದೆ ಅಪ್ಪು ಕನಸುಶೀಘ್ರದಲ್ಲೇ 'ಶಕ್ತಿಧಾಮ' ಆವರಣದಲ್ಲಿ ಶಾಲೆ ನಿರ್ಮಾಣ: ನನಸಾಗಲಿದೆ ಅಪ್ಪು ಕನಸು

    ಭಜರಂಗಿ 2 ಸಿನಿಮಾ ನೋಡುವಾಗ ಶಿವಣ್ಣ ಕಾಲ್ ಮಾಡಿದ್ರು

    ಭಜರಂಗಿ 2 ಸಿನಿಮಾ ನೋಡುವಾಗ ಶಿವಣ್ಣ ಕಾಲ್ ಮಾಡಿದ್ರು

    ಅಪ್ಪು ಸಾವನ್ನಪ್ಪಿದ ದಿನವನ್ನು ನೆನಪಿಸಿಕೊಂಡ ಶ್ರೀಕಾಂತ್ ಹೇಳಿದ್ದು ಹೇಗೆ. "ಅಕ್ಟೋಬರ್ 28ನೇ ತಾರೀಖು ನನ್ನ ಬರ್ತ್‌ಡೇ ಇತ್ತು ಹೀಗಾಗಿ ನಾವೆಲ್ಲಾ ಸುಮಾರು ಮೂರು ಘಂಟೆಗಳ ಕಾಲ ಇಲ್ಲೆ ಇದ್ವಿ. ಅಕ್ಟೋಬರ್ 29ಕ್ಕೆ ನಾನು ಶಿವಣ್ಣ ಅವರ 'ಭಜರಂಗಿ 2' ಸಿನಿಮಾ ವೀರೆಶ್ ಥಿಯೇಟರ್‌ನಲ್ಲಿ ನೋಡ್ತಿದ್ದೆ. ಆಗ ನಮ್ಮ ಹುಡುಗ ಪುನೀತ್ ನನ್ನ ಹೊರಗೆ ಕರೆದು ಪುನೀತ್ ಸರ್ ಆಸ್ಪತ್ರೆ ದಾಖಲಾಗಿದ್ದಾರೆ ಎಂದ. ಆಗ ನಾನು ಚಿಕ್ಕದಾಗಿ ಏನಾದ್ರು ಇರಬಹುದು ಅಂದುಕೊಂಡೆ. ಆಗ ನಾನು ಜಯಣ್ಣ ಈ ಬಗ್ಗೆನೆ ಮಾತಾಡ್ತಾ ಇದ್ವಿ. ಆಗ ಗೋವಿಂದು ಕಾಲ್ ಮಾಡಿ ಹಿಂಗೆ ಆಗಿದೆ ಬೇಗ ವಿಕ್ರಂ ಆಸ್ಪತ್ರೆಗೆ ಬನ್ನಿ ಅಂದ್ರು. ಅಮೇಲೆ ಶಿವಣ್ಣ ಕಾಲ್ ಮಾಡಿ ಬನ್ನಿ ಬೇಗ ಅಂದ್ರು. ಅಗಲೇ ಸುದ್ದಿ ಖಚಿತ ವಾಗಿತ್ತು. ಕೇಳಿ ನಂಬಬೇಕಾ ಬೇಡ್ವಾ ಅನ್ನೋದೆ ಗೊತ್ತಾಗಿಲ್ಲಾ" ಎಂದು ಅಪ್ಪು ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    English summary
    Sandalwood Producer K.P.Shrikanth talks about puneeth Rajkumar and his movie journy,
    Friday, March 11, 2022, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X