For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನ ಯುವ ನಿರ್ಮಾಪಕ ರಾಜಶೇಖರ್ ಕೊರೊನಾಗೆ ಬಲಿ

  |

  ಕೊರೊನಾ ಮಹಾಮಾರಿ ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಸ್ಯಾಂಡಲ್ ವುಡ್ ನಲ್ಲೂ ಅನೇಕ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಮತ್ತೋರ್ವ ಯುವ ನಿರ್ಮಾಪಕ ರಾಜಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ.

  ರಾಜಶೇಖರ್ ಸದ್ಯ ನೀನಾಸಂ ಸತೀಶ್ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದರು. ಸಿನಿಮಾದ ಬಗ್ಗೆ ದೊಡ್ಡ ಕನಸಿಕೊಂಡಿದ್ದ ರಾಜಶೇಖರ್ ಪೆಟ್ರೋಮ್ಯಾಕ್ಸ್ ಬಿಡುಗಡೆಗೂ ಮೊದಲೇ ಇಹಲೋಕ ತ್ಯಜಿಸಿದ್ದಾರೆ.

  ಕೊರೊನಾದಿಂದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ ಸಾವುಕೊರೊನಾದಿಂದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ ಸಾವು

  ರಾಜಶೇಖರ್ ನಿಧನಕ್ಕೆ ನಟ ನೀನಾಸಂ ಸತೀಶ್ ಸಂತಾಪ ಸೂಚಿಸಿದ್ದಾರೆ. ಪೆಟ್ರೋಮ್ಯಾಕ್ಸ್ ಆಗಲು ರಾಜಶೇಖರ್ ಪಾತ್ರ ತುಂಬಾ ದೊಡ್ಡದಿದೆ ಎಂದು ಹೇಳಿದ್ದಾರೆ.

  'ರಾಜು ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹಾತ್ವಕಾಂಕ್ಷಿ. ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ. ಜನಗಳ ಪ್ರೀತಿ ಎಲ್ಲವೂ ಇತ್ತು. ನಮ್ಮ ಜೊತೆ ಕಾರ್ಯಕಾರಿ ನಿರ್ಮಾಪಕರಾಗಿ 2 ತಿಂಗಳು ಜೊತೆಗಿದ್ದರು. ಪೆಟ್ರೋಮ್ಯಾಕ್ಸ್ ಗೆದ್ದು ಅದರ ಅದ್ದೂರಿ ಸಮಾರಂಭ ಮಾಡುವ ಆಸೆ ಹೊತ್ತಿದ್ದರು. ಯಾವಾಗಲು ನಗುತ್ತ ಕೂರುತ್ತಿದ್ದ, ನೆನಪುಗಳನ್ನು ನೆನಪಿಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂದೆ ಆಗುತ್ತೆ.'

  'ಮೈಸೂರಿನಲ್ಲಿ ರಾತ್ರಿಯೆಲ್ಲ ಜೊತೆಗಿದ್ದು ಕಾರು ಹತ್ತಿಸಿ ನಾವು ಗೆಲ್ತೀವಿ, ನಡೀರಿ ಸಾರ್ ನೆಮ್ಮದಿಯಾಗಿ ನಿದ್ದೆ ಮಾಡಿ. ಎಂದು ಚಿರನಿದ್ರೆಗೆ ಜಾರಿದ ರಾಜು ಇದು ತಪ್ಪಲ್ಲವೇ. ಅಂತಿಮ ನಮನಸಲ್ಲಿಸಲು ನನಗೆ ಮನಸ್ಸಾಗುತ್ತಿಲ್ಲ. ಕ್ಷಮಿಸಿ' ಎಂದು ಬರೆದುಕೊಂಡಿದ್ದಾರೆ.

  ಅನುಷ್ಕ ಗಾಗಿ ರೊಮ್ಯಾಂಟಿಕ್ ಹಾಡು ಹಾಡಿದ ವಿರಾಟ್ ಕೊಹ್ಲಿ | Filmibeat Kannada

  ಇತ್ತೀಚಿಗಷ್ಟೆ ಸತೀಶ್ ವಿಡಿಯೋ ಮೂಲಕ ಮಾತನಾಡಿ 'ನನ್ನ ದೊಡ್ಡಮ್ಮ ಕೊರೊನಾದಿಂದ ಮುಖಪಟ್ಟಿದ್ದರು. ಆದರೆ ಅವರ ಮುಖ ನೋಡಲು ನನಗೆ ಸಾಧ್ಯವಾಗಿಲ್ಲ. ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರಿ' ಎಂದು ಕೇಳಿಕೊಂಡಿದ್ದರು.

  English summary
  Sandalwood new producer Rajasekhar passes away due to corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X