ಜೆಟ್‌ಲ್ಯಾಗ್ ಪಬ್ ಮಾಲೀಕ, ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಶರಣು

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಸಿನಿಮಾ ನಿರ್ಮಾಪಕ, ಬಿಲ್ಡರ್ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಕುಟುಂಬಸ್ಥರು ಮಾತ್ರ ಅವರು ಹೃದಯಾಘಾತದಿಂದ ನಿಧನರಾಗಿರುವುದಾಗಿ ಹೇಳುತ್ತಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಸುಗುಣ ಆಸ್ಪತ್ರೆಯಲ್ಲಿ ಅವರ ಪಾರ್ಥೀವ ಶರೀರವನ್ನು ಇಡಲಾಗಿದೆ. ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಒಂದಷ್ಟು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ.

Sandalwood producer Soundarya Jagadish Dies Of Suicide

'ಅಪ್ಪು ಪಪ್ಪು', 'ರಾಮ್ ಲೀಲಾ', 'ಸ್ನೇಹಿತರು', 'ರಾಮ್ ಲೀಲಾ' ಹೀಗೆ ಕೆಲ ಸಿನಿಮಾಗಳನ್ನು ಸೌಂದರ್ಯ ಜಗದೀಶ್ ನಿರ್ಮಿಸಿದ್ದರು. ಸೌಂದರ್ಯ ಜಗದೀಶ್ ರಾರಾಜಿನಗರದ ಜೆಟ್‌ಲ್ಯಾಗ್ ಪಬ್ ಮಾಲೀಕರು ಆಗಿದ್ದರು. ಇತ್ತೀಚೆಗೆ 'ಕಾಟೇರ' ಸಿನಿಮಾ ಸಕ್ಸಸ್ ಪಾರ್ಟಿ ವಿಚಾರಕ್ಕೆ ಆ ಪಬ್ ಭಾರೀ ಸುದ್ದಿ ಆಗಿತ್ತು. ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಅವರ ಆತ್ಮಹತ್ಯೆಗೆ ನಿಖರ ಕಾರಣು ಏನು ಎನ್ನುವುದು ತಿಳಿದು ಬಂದಿಲ್ಲ. ಸೌಂದರ್ಯ ಜಗದೀಶ್ ಸಾವಿನ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡದ ಕುಟುಂಬಸ್ಥರು ಎಂದು ಹೇಳಲಾಗುತ್ತಿದೆ.

ಮೇಲ್ನೋಟಕ್ಕೆ ಹಣಕಾಸಿನ ಸಮಸ್ಯೆಯಿಂದ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. ಸಾಲ ಮರುಪಾವತಿ ಆಗದ ಹಿನ್ನೆಲೆಯಲ್ಲಿ ಬ್ಯಾಂಕ್‌ನವರು ಕ್ರಮ ತೆಗೆದುಕೊಂಡಿದ್ದರು. ಇದರಿಂದ ಮನೆ ಸೀಜ್ ಕೂಡ ಮಾಡಿದ್ದರು, ಇದೇ ಕಾರಣಕ್ಕೆ ಖಿನ್ನತೆಗೆ ಗುರಿಯಾಗಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೆ ಖಚಿತ ಮಾಹಿತಿ ಲಭ್ಯವಾಗಬೇಕಿದೆ.

ಪತ್ನಿ ರೇಖಾ, ಪುತ್ರ ಸ್ನೇಹಿತ್ ಹಾಗೂ ಮಗಳನ್ನು ನಿರ್ಮಾಪಕ ಸೌಂದರ್ಯ ಜಗದೀಶ್ ಅಗಲಿದ್ದಾರೆ. ಚಿತ್ರರಂಗದಲ್ಲಿ ಸ್ಟಾರ್ ನಟರೊಟ್ಟಿಗೆ ಅವರಿಗೆ ಆತ್ಮೀಯ ಒಡನಾಟವಿತ್ತು. ಇತ್ತೀಚೆಗೆ ಹೆಚ್ಚು ಸಿನಿಮಾಗಳನ್ನು ನಿರ್ಮಿಸದೇ ಇದ್ದರೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತಿಂಗಳ ಹಿಂದೆಯಷ್ಟೆ ಸೌಂದರ್ಯ ಜಗದೀಶ್ ಮಗಳ ಮದುವೆ ನೆರವೇರಿಸಿದ್ದರು. ಆರ್‌. ಆರ್‌ ನಗರದ ಕಲ್ಯಾಣ ಮಂಟಪದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ದರ್ಶನ್, ಅಭಿಷೇಕ್ ಅಂಬರೀಶ್, ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಭಾಗಿ ಆಗಿದ್ದರು.

2 ತಿಂಗಳ ಹಿಂದೆ ಸೌಂದರ್ಯ ಜಗದೀಶ್ ಒಡೆತನದ ಜೆಟ್‌ಲ್ಯಾಗ್ ಪಬ್ ಭಾರೀ ಸುದ್ದಿ ಆಗಿತ್ತು. ಅಲ್ಲಿ 'ಕಾಟೇರ' ಚಿತ್ರದ ಸಕ್ಸಸ್ ಪಾರ್ಟಿ ಮಾಡಲಾಗಿತ್ತು. ಆದರೆ ನಿಮಯ ಮೀರಿ ಬೆಳಗಿನ ಜಾವ 3 ಗಂಟೆವರೆಗೆ ಪಾರ್ಟಿ ಮುಂದುವರೆದಿತ್ತು ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಪಬ್ ಸಂಸ್ಥಾಪಕರಾದ ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಅವರ ಮೇಲೂ ಪ್ರಕರಣ ದಾಖಲಾಗಿತ್ತು. ವಿವಾದದ ಬಳಿಕ 25 ದಿನಗಳ ಕಾಲ ಪಬ್ ಲೈಸೆನ್ಸ್ ರದ್ದಾಗಿತ್ತು.

More from Filmibeat

English summary
Kannada film producer Soundarya Jagadish found dead
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X