twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್ ನಟರ ಚಿತ್ರಗಳ ರಿಲೀಸ್ ಬಗ್ಗೆ ನಿರ್ಮಾಪಕರ ಸಭೆ: ಯಾರೆಲ್ಲ ಸೇರಿದ್ದರು? ಏನು ಚರ್ಚಿಸಿದರು?

    |

    ಕೊರೊನಾದಿಂದ ಚಿತ್ರರಂಗಕ್ಕೆ ಬಹಳ ದೊಡ್ಡ ಸಮಸ್ಯೆ ಎದುರಾಗಿತ್ತು. ತಿಂಗಳುಗಳ ಕಾಲ ಚಿತ್ರಮಂದಿರ ಮುಚ್ಚಿದ್ದವು. ಶೇಕಡಾ 50 ರಷ್ಟು ಆಸನ ಭರ್ತಿಯೊಂದಿಗೆ ಸಿನಿಮಾ ಥಿಯೇಟರ್‌ ತೆರೆಯಲು ಅನುಮತಿ ಸಿಕ್ಕಿದ್ದರೂ ಚಿತ್ರಮಂದಿರಕ್ಕೆ ಜನ ಬರ್ತಿಲ್ಲ. ಇಂತಹ ಸಂದರ್ಭದಲ್ಲಿ ದೊಡ್ಡ ಚಿತ್ರಗಳು ರಿಲೀಸ್ ಮಾಡಿದ್ರೆ ಹಾಕಿದ ಬಂಡವಾಳ ಹೇಗೆ ವಾಪಸ್ ಪಡೆಯುವುದು ಎಂಬ ಗೊಂದಲದಲ್ಲಿ ನಿರ್ಮಾಪಕರಿದ್ದಾರೆ.

    Recommended Video

    ಥಿಯೇಟರ್ ಮಾಲೀಕರಿಗೆ ಬುದ್ದಿ ಕಲಿಸಲು ಮುಂದಾದ ನಿರ್ಮಾಪಕರು | Filmibeat Kannada

    ಈ ನಡುವೆ ಥಿಯೇಟರ್‌ಗಿಂತ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವೇ ಎಂಬ ಅಭಿಪ್ರಾಯವೂ ಇದೆ. ತಮಿಳುನಾಡಿನಲ್ಲಿ ಶೇಕಡಾ 100ರಷ್ಟು ಆಸನ ಭರ್ತಿ ಮಾಡಿ ಪ್ರದರ್ಶನ ಆರಂಭಿಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಬಹುಶಃ ಕರ್ನಾಟಕದಲ್ಲೂ ಈ ಆದೇಶ ಜಾರಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ನಿರ್ಮಾಪಕರಿಗೆ ಕೇಂದ್ರ ಸರ್ಕಾರ ನಿರಾಸೆ ಮಾಡಿದೆ. ಹಾಗಾದ್ರೆ, ಈ ಸಭೆಯಲ್ಲಿ ಯಾವೆಲ್ಲ ವಿಷಯಗಳು ಚರ್ಚೆಯಾದವು? ಯಾರೆಲ್ಲಾ ನಿರ್ಮಾಪಕರು ಸೇರಿದ್ದರು? ಮುಂದೆ ಓದಿ....

    2021ರಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ ಬಹುನಿರೀಕ್ಷೆಯ ಚಿತ್ರಗಳು2021ರಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ ಬಹುನಿರೀಕ್ಷೆಯ ಚಿತ್ರಗಳು

    ಸಿನಿಮಾಗಳು ಕ್ಲಾಶ್ ಆಗಬಾರದು!

    ಸಿನಿಮಾಗಳು ಕ್ಲಾಶ್ ಆಗಬಾರದು!

    ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ಯಶ್, ಶಿವರಾಜ್ ಕುಮಾರ್, ಧ್ರುವ ಸರ್ಜಾ ಹೀಗೆ ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಕೆಲವು ಚಿತ್ರಗಳು ರಿಲೀಸ್‌ಗೆ ದಿನಾಂಕವನ್ನು ಲಾಕ್ ಮಾಡಿಕೊಂಡಿದೆ. ಹಿಂದೆಂದೆಯೇ ಸಿನಿಮಾ ಬಿಡುಗಡೆ ಮಾಡಿದ್ರೆ ಥಿಯೇಟರ್ ಸಮಸ್ಯೆ, ಕಲೆಕ್ಷನ್ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಇದೆ. ಹಾಗಾಗಿ, ಚಿತ್ರಗಳ ನಡುವೆ ಕ್ಲಾಶ್ ಆಗಬಾರದು ಎಂಬ ಚರ್ಚೆ ಈ ಸಭೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

    ಏಪ್ರಿಲ್‌ನಲ್ಲಿ ಯುವರತ್ನ, ಅದೇ ತಿಂಗಳು ಮತ್ತೊಂದು ಬಿಗ್ ಸಿನಿಮಾ ತೆರೆಗೆ?ಏಪ್ರಿಲ್‌ನಲ್ಲಿ ಯುವರತ್ನ, ಅದೇ ತಿಂಗಳು ಮತ್ತೊಂದು ಬಿಗ್ ಸಿನಿಮಾ ತೆರೆಗೆ?

    ಒಟಿಟಿಗೆ ಹೋದ್ರೆ ಏನಾಗುತ್ತದೆ?

    ಒಟಿಟಿಗೆ ಹೋದ್ರೆ ಏನಾಗುತ್ತದೆ?

    ಚಿತ್ರಮಂದಿರಕ್ಕೆ ಜನ ಬರ್ತಿಲ್ಲ ಎಂಬ ಕಾರಣಕ್ಕೆ ಒಟಿಟಿಗೆ ಹೋದ್ರೆ ಅಲ್ಲಿ ಹಾಕಿದ ಬಂಡವಾಳ ಪಾಪಸ್ ಬರುತ್ತಾ? ಇದರಿಂದ ಸ್ಟಾರ್ ನಟರ ಚಿತ್ರಗಳನ್ನೇ ನಂಬಿಕೊಂಡಿರುವ ಥಿಯೇಟರ್‌ ಮಾಲೀಕರ ಪರಿಸ್ಥಿತಿ ಏನು? ಕೊರೊನಾದಿಂದ ಸಂಕಷ್ಟದಲ್ಲಿರುವ ಎಲ್ಲರ ಹಿತಾದೃಷ್ಟಿ ಕಾಯುವುದು ಹೇಗೆ ಎಂಬ ಪ್ರಮುಖ ವಿಚಾರಗಳು ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಥಿಯೇಟರ್ ಪೂರ್ಣ ಪ್ರಮಾಣದಲ್ಲಿ ಓಪನ್ ಆಗೋದು ಕಷ್ಟ!

    ಥಿಯೇಟರ್ ಪೂರ್ಣ ಪ್ರಮಾಣದಲ್ಲಿ ಓಪನ್ ಆಗೋದು ಕಷ್ಟ!

    ತಮಿಳು ನಟ ವಿಜಯ್ ಮನವಿ ನಂತರ ತಮಿಳು ಸರ್ಕಾರ ಥಿಯೇಟರ್‌ಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಆದ್ರೆ, ತಮಿಳುನಾಡಿನ ಆದೇಶ ಹಿಂಪಡೆಯುವಂತೆ ಕೇಂದ್ರ ಗೃಹ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗುತ್ತಿದೆ, ಕೂಡಲೇ ಆದೇಶ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಪತ್ರ ಬರೆದಿದೆ. ಈ ಬೆಳವಣಿಗೆ ಗಮನಿಸಿದರೆ ಸದ್ಯಕ್ಕೆ ಥಿಯೇಟರ್‌ಗಳ ಪರಿಸ್ಥಿತಿ ಸುಧಾರಿಸುವುದು ಬಹಳ ಕಷ್ಟ. ಇದು ಸಹ ನಿರ್ಮಾಪಕರಿಗೆ ತಲೆ ಬಿಸಿ ಉಂಟು ಮಾಡಿದೆ.

    ಏಪ್ರಿಲ್ ಮೇಲೆ ಕನ್ನಡ ನಿರ್ಮಾಪಕರ ಕಣ್ಣು; ಯುವರತ್ನ, ರಾಬರ್ಟ್ ಆಯ್ತು ಮತ್ತೊಂದು ಸಿನಿಮಾ ತೆರೆಗೆಏಪ್ರಿಲ್ ಮೇಲೆ ಕನ್ನಡ ನಿರ್ಮಾಪಕರ ಕಣ್ಣು; ಯುವರತ್ನ, ರಾಬರ್ಟ್ ಆಯ್ತು ಮತ್ತೊಂದು ಸಿನಿಮಾ ತೆರೆಗೆ

    ಯಾರೆಲ್ಲ ಸಭೆಯಲ್ಲಿ ಹಾಜರಿದ್ದರು?

    ಯಾರೆಲ್ಲ ಸಭೆಯಲ್ಲಿ ಹಾಜರಿದ್ದರು?

    ನಿರ್ಮಾಪಕರ ಸಭೆಯಲ್ಲಿ ಕನ್ನಡದ ಪ್ರಮುಖ ಪ್ರೊಡ್ಯೂಸರ್‌ಗಳು ಭಾಗಿಯಾಗಿದ್ದರು. ಕೆಜಿಎಫ್, ಯುವರತ್ನ ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಫ್ಯಾಂಟಮ್ ನಿರ್ಮಾಪಕ ಜಾಕ್ ಮಂಜು, ನಿರ್ಮಾಪಕ ಜಯಣ್ಣ, ಪೊಗರು ನಿರ್ಮಾಪಕ ಪಾಲ್ಗೊಂಡಿದ್ದರು.

    English summary
    Kannada Film Producers Holds Meeting to Discuss About Big Stars Movie Release.
    Thursday, January 7, 2021, 10:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X