For Quick Alerts
  ALLOW NOTIFICATIONS  
  For Daily Alerts

  Happy Birthday Ramya : ಮೋಹಕತಾರೆ ರಮ್ಯಾಗೆ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

  |

  2003ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಅಭಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಮ್ಯಾ ಮೊದಲ ಚಿತ್ರದ ಮೂಲಕವೇ ಖ್ಯಾತಿ ಹಾಗೂ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಮೊದಲ ಚಿತ್ರದಲ್ಲೇ ಶತಕ ಬಾರಿಸಿದ ರಮ್ಯಾ ಸಾಲು ಸಾಲು ಆಫರ್‌ಗಳನ್ನು ಪಡೆದುಕೊಂಡರು. ನಂತರ ಎಕ್ಸ್‌ಕ್ಯೂಸ್‌ಮಿ ಚಿತ್ರದಲ್ಲೂ ಗೆದ್ದ ರಮ್ಯಾ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.

  ಹೀಗೆ ದಕ್ಷಿಣ ಭಾರತ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ನಟಿ ರಮ್ಯಾ ಇಂದು ( ನವೆಂಬರ್ 29 ) 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಮ್ಯಾ ಹುಟ್ಟುಹಬ್ಬದ ಅಂಗವಾಗಿ ಹಲವಾರು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಇನ್ನು ಸಿನಿಮಾ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲಿಯೂ ಸಹ ತನ್ನನ್ನು ತಾನು ತೊಡಿಗಿಸಿಕೊಂಡಿದ್ದ ರಮ್ಯಾಗೆ ರಾಜಕೀಯ ವ್ಯಕ್ತಿಗಳೂ ಸಹ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

  ನಟಿ ರಮ್ಯಾ 1982ರ ನವೆಂಬರ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ದಿವ್ಯಾ ಸ್ಪಂದನ ರಮ್ಯಾ ಹುಟ್ಟು ಹೆಸರು. ರಮ್ಯಾ ಪೋಷಕರು ಮೂಲತಃ ಮಂಡ್ಯದವರು. ತಾಯಿ ರಂಜಿತಾ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯೆ ಹಾಗೂ ತಂದೆ ಆರ್ ಟಿ ನಾರಾಯನ್ ಓರ್ವ ಉದ್ಯಮಿಯಾಗಿದ್ದರು. ಕನ್ನಡದಲ್ಲಿ ಅಭಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ತಮಿಳಿನ 'ಕುತ್ತು' ಎಂಬ ಚಿತ್ರದ ಮೂಲಕ ಕಾಲಿವುಡ್ ಪ್ರವೇಶಿಸಿದರು. ಈ ಚಿತ್ರ ಭರ್ಜರಿ ಯಶಸ್ಸು ಸಾಧಿಸಿದ ಕಾರಣ ತಮಿಳುನಾಡಿನಲ್ಲಿ ರಮ್ಯಾ 'ಕುತ್ತು ರಮ್ಯಾ' ಎಂದೇ ಖ್ಯಾತಿಯನ್ನು ಪಡೆದಿದ್ದಾರೆ.

  ನಂತರ ಕನ್ನಡ ಚಿತ್ರರಂಗದಲ್ಲಿ ಆಕಾಶ್, ಅರಸು. ಗೌರಮ್ಮ, ಜೊತೆ ಜೊತೆಯಲಿ, ಅಮೃತಧಾರೆ ರೀತಿಯ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ ರಮ್ಯಾ ಎವರ್‌ಗ್ರೀನ್ ಸ್ಟಾರ್ ನಟಿಯಾಗಿ ನೆಲೆಯೂರಿದರು. ಇನ್ನು ರಾಜಕೀಯದಲ್ಲಿ ತೊಡಗಿಕೊಂಡ ರಮ್ಯಾ 2016ರಲ್ಲಿ ತೆರೆಕಂಡಿದ್ದ ನಾಗರಹಾವು ಚಿತ್ರದ ನಂತರ ಚಿತ್ರರಂಗದಿಂದ ದೂರಾದರು. ಸದ್ಯ ಆರು ವರ್ಷಗಳ ಬಳಿಕ ಚಿತ್ರರಂಗದತ್ತ ಮುಖ ಮಾಡಿರುವ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಆಪಲ್ ಬಾಕ್ಸ್ ಸ್ಟುಡಿಯೋ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ರಮ್ಯಾ ಸ್ಥಾಪಿಸಿದ್ದಾರೆ.

  ಅಷ್ಟೇ ಅಲ್ಲದೇ ಮುಂದಿನ ವರ್ಷ ನಟಿಯಾಗಿಯೂ ಸಹ ರಮ್ಯಾ ಕಮ್‌ಬ್ಯಾಕ್ ಮಾಡುವುದು ಖಚಿತವಾಗಿದ್ದು, ಡಾಲಿ ಧನಂಜಯ್ ನಾಯಕನಾಗಿ ನಟಿಸಲಿರುವ 'ಉತ್ತರಕಾಂಡ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಮುಹೂರ್ತ ಕೂಡ ನಡೆದಿದ್ದು ಚಿತ್ರೀಕರಣ ಆರಂಭವಾಗಬೇಕಿದೆ.

  English summary
  Sandalwood Queen Ramya celebrating her 40th birthday. Read on
  Tuesday, November 29, 2022, 10:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X