ಗಾಂಧಿನಗರದ ಗಲ್ಲಿಗಳಿಂದ ಬಂದ ಬಿಸಿ ಬಿಸಿ ಸುದ್ದಿಗಳಿವು.!

Recommended Video

Yajamana Movie: ಇಲ್ಲಿದೆ ನೋಡಿ ಹೊಸ, ಹೊಸ ಸುದ್ದಿ

ಸದಾ ಗಿಜಿಗುಡುವ ಗಾಂಧಿನಗರದಲ್ಲಿ ಸಿನಿಮಾ ಸುದ್ದಿಗಳಿಗಂತೂ ಬರವಿಲ್ಲ. ನವ ಪ್ರತಿಭೆಗಳು ತುಂಬಿ ತುಳುಕುತ್ತಿರುವ ಗಾಂಧಿನಗರದಲ್ಲಿ ಪ್ರತಿ ದಿನ ಒಂದಲ್ಲಾ ಒಂದು ಚಿತ್ರದ ಕೆಲಸ-ಕಾರ್ಯಗಳು ನಡೆಯುತ್ತಲೇ ಇರುತ್ತವೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಲು ಒಪ್ಪಿಕೊಂಡಿರುವ ಹೊಸ ಚಿತ್ರ 'ವೇರ್ ಈಸ್ ಮೈ ಕನ್ನಡಕ' ಸಿನಿಮಾದ ಮುಹೂರ್ತ ನೆರವೇರಿದೆ. ಹಿರಿಯ ನಟ ಅನಂತ್ ನಾಗ್ ನಟನೆಯ 'ವೀಕ್ ಎಂಡ್' ಚಿತ್ರದ ಫಸ್ಟ್ ಕಾಪಿ ರೆಡಿ ಆಗ್ತಾಯಿದೆ.

'ಯಜಮಾನ' ಚಿತ್ರದ ಟ್ರೈಲರ್ ಟ್ರೆಂಡಿಂಗ್ ನಲ್ಲಿ ಇರುವಾಗಲೇ, 'ಪಡ್ಡೆಹುಲಿ' ಚಿತ್ರದ ಹಾಡು ಸದ್ದು ಮಾಡುತ್ತಿದೆ. ಇವೆಲ್ಲದರ ನಡುವೆ ಈ ವಾರ ತೆರೆ ಕಾಣುವ ಸಿನಿಮಾ ಯಾವುದು ಎಂಬ ಸಿನಿ ಪ್ರಿಯರ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಈ ಎಲ್ಲಾ ಸುದ್ದಿಗಳ ಚೌಚೌ ಬಾತ್ ಇಲ್ಲಿದೆ.

'ಬೆಲ್ ಬಾಟಂ' ರಿಲೀಸ್

'ಬೆಲ್ ಬಾಟಂ' ರಿಲೀಸ್

ಸಂತೋಷ್ ಕುಮಾರ್.ಕೆ.ಸಿ ನಿರ್ಮಿಸಿರುವ 'ಬೆಲ್ ಬಾಟಂ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ದಯಾನಂದ್.ಟಿ.ಕೆ ಕಥೆ ಬರೆದಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯ, ಯೋಗರಾಜ್ ಭಟ್, ಅಚ್ಯುತಕುಮಾರ್, ಶಿವಮಣಿ, ಸುಜಯ್ ಶಾಸ್ತ್ರಿ, ದಿನೇಶ್ ಮಂಗಳೂರು, ಪಿ.ಡಿ.ಸತೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

'ವೀಕ್ ಎಂಡ್’ ಚಿತ್ರಕ್ಕೆ ಡಿ.ಟಿ.ಎಸ್

'ವೀಕ್ ಎಂಡ್’ ಚಿತ್ರಕ್ಕೆ ಡಿ.ಟಿ.ಎಸ್

ಮಂಜುನಾಥ್.ಡಿ ನಿರ್ಮಿಸಿರುವ 'ವೀಕ್ ಎಂಡ್' ಚಿತ್ರದ ರೀ-ರೆಕಾರ್ಡಿಂಗ್ ಪೂರ್ಣಗೊಂಡಿದ್ದು, ಸದ್ಯ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಲಿದೆ. ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಮನೋಜ್ ಸಂಗೀತ ನಿರ್ದೇಶನವಿದೆ. ಮಿಲಿಂದ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಹಿರಿಯ ನಟ ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಐ ಲವ್ ದಿ ವೇ ಯು ಹೇಟ್ ಮೀ...

ಐ ಲವ್ ದಿ ವೇ ಯು ಹೇಟ್ ಮೀ...

ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದ ಹಾಗೆ, ಎಲ್ಲಾ ಪ್ರೇಮಿಗಳಿಗೂ ಇಷ್ಟ ಆಗುವ 'ಪಡ್ಡೆಹುಲಿ' ಚಿತ್ರದ ''ಐ ಲವ್ ದಿ ವೇ ಯು ಹೇಟ್ ಮೀ...'' ಹಾಡು ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಸಂಜಿತ್ ಹೆಗ್ಡೆ ದನಿಯಾಗಿದ್ದಾರೆ. 'ಪಡ್ಡೆಹುಲಿ' ಚಿತ್ರದಲ್ಲಿ ಶ್ರೇಯಸ್.ಕೆ.ಮಂಜು ನಾಯಕನಾಗಿದ್ದರೆ, ನಿಶ್ವಿಕಾ ನಾಯ್ಡು ಹೀರೋಯಿನ್. ಚಿತ್ರಕ್ಕೆ ಗುರು ದೇಶಪಾಂಡೆ ಆಕ್ಷನ್ ಕಟ್ ಹೇಳಿದ್ದಾರೆ.

'ವೇರ್ ಈಸ್ ಮೈ ಕನ್ನಡಕ' ಮುಹೂರ್ತ

'ವೇರ್ ಈಸ್ ಮೈ ಕನ್ನಡಕ' ಮುಹೂರ್ತ

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸುತ್ತಿರುವ 'ವೇರ್ ಈಸ್ ಮೈ ಕನ್ನಡಕ' ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಪಂಚಮುಖಿ ದೇವಸ್ಠಾನದಲ್ಲಿ ನೆರವೇರಿದೆ. ಹಿಂದಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಪ್ರಸಿದ್ದಿ ಪಡೆದಿರುವ ರಾಜ್ ಹಾಗೂ ಧಾಮಿನಿ ಈ ಚಿತ್ರದ ನಿರ್ದೇಶಕರು. ಗಣೇಶ್ ಅವರೊಂದಿಗೆ ಪತ್ರಲೇಖ, ಅರ್ಬಾಜ್ ಖಾನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಇದೇ ತಿಂಗಳು 'ಪ್ರೀಮಿಯರ್ ಪದ್ಮಿನಿ' ಚಿತ್ರದ ಆಡಿಯೋ ರಿಲೀಸ್

ಇದೇ ತಿಂಗಳು 'ಪ್ರೀಮಿಯರ್ ಪದ್ಮಿನಿ' ಚಿತ್ರದ ಆಡಿಯೋ ರಿಲೀಸ್

ಶ್ರುತಿ ನಾಯ್ಡು ನಿರ್ಮಿಸಿರುವ, ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸಿರುವ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಆಡಿಯೋ ರಿಲೀಸ್ ಫೆಬ್ರವರಿ 25 ರಂದು ನಡೆಯಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳ ಸಿ.ಡಿ ಬಿಡುಗಡೆ ಮಾಡಲಿದ್ದಾರೆ. ರಮೇಶ್ ಇಂದಿರಾ ನಿರ್ದೇಶನದ ಈ ಚಿತ್ರದಲ್ಲಿ ನವರಸ ನಾಯಕ, ಜಗ್ಗೇಶ್, ಮಧುಬಾಲ, ಸುಧಾರಾಣಿ, ಪ್ರಮೋದ್, ಹಿತ ಚಂದ್ರಶೇಖರ್, ವಿವೇಕ್ ಸಿಂಹ, ಮುಂತಾದವರು ಅಭಿನಯಿಸಿದ್ದಾರೆ.

More from Filmibeat

English summary
Sandalwood Round Up: Rishab Shetty, Haripriya starrer 'Bell Bottom' movie to release this week. 'Padde Huli' song is out'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X