ಪ್ರಜ್ವಲ್ ದೇವರಾಜ್ 'ಗಣ' ಚಿತ್ರಕ್ಕಾಗಿ ಕೈಜೋಡಿಸಿದ್ರು ಸ್ಯಾಂಡಲ್‌ವುಡ್‌ನ 17 ಸೆಲೆಬ್ರಿಟಿಗಳು

ಚಂದನವನದ ಎವರ್‌ಗ್ರೀನ್ ಸ್ಟಾರ್ ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಸದ್ಯ ಮಾಫಿಯಾ ಹಾಗೂ ಗಣ ಎಂಬ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಗಣ ಚಿತ್ರತಂಡ ಇತ್ತೀಚೆಗಷ್ಟೆ ಚಿತ್ರದ ಟೈಟಲ್ ಅನ್ನು ಅನಾವರಣಗೊಳಿಸಿತ್ತು.

ಇದು ಪ್ರಜ್ವಲ್ ದೇವರಾಜ್ ನಟನೆಯ 36ನೇ ಚಿತ್ರವಾಗಿದ್ದು, ಚಿತ್ರಕ್ಕೆ ಹರಿಪ್ರಸಾದ್ ಜಕ್ಕ ಆಕ್ಷನ್ ಕಟ್ ಹೇಳುತ್ತಿದ್ದು, ಪಾರ್ಥು ಎಂಬುವವರು ಬಂಡವಾಳ ಹೂಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದ್ದು, ಹರೀಶ್ ಕೊಮ್ಮೆ ಸಂಕಲನ ಮಾಡುತ್ತಿದ್ದಾರೆ.

Sandalwoods celebrities released the firstlook poster of Prajwal Devarajs Gana

ಇನ್ನು ಈ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ( ಜೂನ್ 10 ) ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ನಟ - ನಟಿಯರು, ನಿರ್ದೇಶಕರು ಹಾಗೂ ಹಾಸ್ಯ ಕಲಾವಿದರು ಸೇರಿದಂತೆ ಒಟ್ಟು 17 ಸೆಲೆಬ್ರಿಟಿಗಳು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯಲ್ಲಿ ಬಿಡುಗಡೆಗೊಳಿಸಿದ್ದಾರೆ.

ನಟ ವಿಜಯ್ ರಾಘವೇಂದ್ರ, ಡಾರ್ಲಿಂಗ್ ಕೃಷ್ಣ, ಪ್ರಣಮ್ ದೇವರಾಜ್, ಶರಣ್, ನಟಿಯರಾದ ಶೃತಿ ಹರಿಹರನ್, ರಾಗಿಣಿ ಪ್ರಜ್ವಲ್, ರಾಗಿಣಿ ದ್ವಿವೇದಿ, ರಚನಾ ಇಂದಿರ್, ಮಿಲನ ನಾಗರಾಜ್, ಮೇಘನಾ ರಾಜ್, ಮೇಘಾ ಶೆಟ್ಟಿ, ಹಾಸ್ಯ ಕಲಾವಿದ ಗಿರೀಶ್ ಶಿವಣ್ಣ, ನಿರ್ದೇಶಕರಾದ ಲೋಹಿತ್ ಎಚ್, ಪನ್ನಗಾ ಭರಣ, ಸಿಂಪಲ್ ಸುನಿ ಹಾಗೂ ತರುಣ್ ಸುಧೀರ್‌ ಮತ್ತು ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಚಿತ್ರದ ಫಸ್ಟ್ ಲುಕ್ ಅನ್ನು ಅವಾವರಣಗೊಳಿಸಿದ್ದಾರೆ.

ಈ ಪೋಸ್ಟರ್‌ನಲ್ಲಿ ಪ್ರಜ್ವಲ್ ದೇವರಾಜ್ ಫೈಟ್ ದೃಶ್ಯದಲ್ಲಿ ತೊಡಗಿಕೊಂಡಿದ್ದರ ಫೋಟೊವನ್ನು ಬಳಸಲಾಗಿದ್ದು, ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕೈನಲ್ಲಿ ಫೋಟೊ ಆಲ್ಬಮ್ ಹಿಡಿದಿರುವ ಪ್ರಜ್ವಲ್ ದೇವರಾಜ್ ಮತ್ತೊಂದು ಕೈಗೆ ಟವೆಲ್ ಸುತ್ತಿಕೊಂಡು ಖಳರಿಗೆ ಖಡಕ್ ಲುಕ್ ಕೊಡ್ತಿದ್ದಾರೆ. ಈ ಮಾಸ್ ಪೋಸ್ಟರ್ ಅನ್ನು ಫಿಲ್ಮಿ ಕಲ್ಟ್ ಎಂಬ ಪೋಸ್ಟರ್ ಡಿಸೈನಿಂಗ್, ಫಿಲ್ಮ್ ಮಾರ್ಕೆಟಿಂಗ್ ಕಂಪೆನಿ ಎಡಿಟ್ ಮಾಡಿದೆ.

More from Filmibeat

English summary
Sandalwood's celebrities released the firstlook poster of Prajwal Devaraj's Gana. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X