»   » ಈ ವರ್ಷ ನೀವು ನೋಡಲೇಬೇಕಾದ ಬಹುನಿರೀಕ್ಷಿತ ಚಿತ್ರಗಳು

ಈ ವರ್ಷ ನೀವು ನೋಡಲೇಬೇಕಾದ ಬಹುನಿರೀಕ್ಷಿತ ಚಿತ್ರಗಳು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಪಾಲಿಗಂತೂ 2015 ರ ಜನವರಿ ಲಕ್ಕಿ ತಿಂಗಳು. ಸಾಲು ಸಾಲು ಬಿಗ್ ಸಿನಿಮಾಗಳು ಇದೇ ತಿಂಗಳು ತೆರೆಗೆ ಬಂತು. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಶಿವಂ', ವಿನಯ್ ರಾಜ್ ಕುಮಾರ್ ಚೊಚ್ಚಲ ಚಿತ್ರ 'ಸಿದ್ದಾರ್ಥ' ಸೇರಿದಂತೆ ಬಿಗ್ ಸಿನಿಮಾಗಳು ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ.

ಜನವರಿಯಲ್ಲಿ ಸಿನಿಮಾ ಸಂತೆ ನಡೆದ ಹಾಗೆ, ಈ ವರ್ಷ ತೆರೆಗೆ ಬರುವುದಕ್ಕೆ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ಕ್ಯೂ ನಲ್ಲಿವೆ. ಆ ಚಿತ್ರಗಳಿಗೋಸ್ಕರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದ್ರೆ, ಆ ಚಿತ್ರಗಳು ಯಾವ್ಯಾವುವು ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....


'ಉಪ್ಪಿ-2'

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಚಿತ್ರವನ್ನ ಬೆಳ್ಳಿತೆರೆ ಮೇಲೆ ನೋಡಿ ಆನಂದಿಸುವುದಕ್ಕೆ 'ರಿಯಲ್' ಅಭಿಮಾನಿಗಳು ವರ್ಷಗಳಿಂದಲೂ ಕಾಯುತ್ತಿದ್ದಾರೆ. ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿರುವ ಉಪ್ಪಿ-2 ಈ ವರ್ಷ ರಿಲೀಸ್ ಆಗಲಿದೆ. ಅಲ್ಲಿಗೆ, ಈ ವರ್ಷ 'ಉಪ್ಪಿಗಿಂತ ರುಚಿ ಬೇರೆ ಇಲ್ಲ' ಅಂತ ಮತ್ತೊಮ್ಮೆ ಸಾಬೀತಾಗಲಿದೆ. [ಪರುಲ್ ಯಾದವ್ ಜೊತೆ ಹಿಮಾಲಯದಲ್ಲಿ 'ಉಪ್ಪಿ 2']


'ಧೀರ ರಣವಿಕ್ರಮ'

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಧೀರ ರಣವಿಕ್ರಮ' ಚಿತ್ರ ಸೆಟ್ಟೇರಿದ್ದು ಕಳೆದ ವರ್ಷ. ಒಂದು ವರ್ಷದಿಂದಲೂ 'ಧೀರ ರಣವಿಕ್ರಮ' ಶೂಟಿಂಗ್ ಭರದಿಂದ ಸಾಗುತ್ತಿದೆ. ಟಾಲಿವುಡ್ ನಾಯಕಿ ಅಂಜಲಿ, ಬಾಲಿವುಡ್ ನಟಿ ಅದಾ ಶರ್ಮಾ, ಬಾಲಿವುಡ್ ಖೇಡಿ ವಿಕ್ರಮ್ ಸಿಂಗ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದೆ. ಖಡಕ್ ಪೊಲೀಸ್ ಆಫೀಸರ್ ಲುಕ್ ನಲ್ಲಿ ಅಪ್ಪು ಮಿಂಚುತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶಿಸುತ್ತಿರುವ 'ಧೀರ ರಣವಿಕ್ರಮ' ಸದ್ಯ ಇಟಲಿಯಲ್ಲಿ ಚಿತ್ರೀಕರಣದಲ್ಲಿ ಬಿಜಿಯಾಗಿದೆ. ಇದೇ ವರ್ಷ ತೆರೆಗೆ ಬರಲಿರುವ 'ಧೀರ ರಣವಿಕ್ರಮ'ನ ಮೇಲೆ ಎಲ್ಲರ ಕಣ್ಣಿದೆ. [ಇಟಲಿ ವಿಮಾನ ಹತ್ತಿದ ಪುನೀತ್ ರಾಜ್ ಕುಮಾರ್]


'ಡಿ.ಕೆ' ಬಾಸ್ ಸದ್ಯದಲ್ಲೇ ಬರ್ತಿದ್ದಾರೆ

ಕಾಂಟ್ರವರ್ಸಿಗಳಿಂದಲೇ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಸದ್ದು ಮಾಡಿರುವ ಸಿನಿಮಾ 'ಡಿ.ಕೆ'. ಜೋಗಿ 'ಪ್ರೇಮ್' ನಟಿಸಿರುವ ಈ ಚಿತ್ರದ 'ರಾ' ಲವ್ ಸ್ಟೋರಿಯ ರಹಸ್ಯ ತಿಳಿದುಕೊಳ್ಳುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೂ, ಸನ್ನಿ ಲಿಯೋನ್ ಮೈ ಚಳಿ ಬಿಟ್ಟು ಕುಣಿದಿರುವ ಹಾಡನ್ನ ಕಣ್ತುಂಬಿಕೊಳ್ಳುವುದಕ್ಕೆ ಪಡ್ಡೆ ಹುಡುಗರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ['ಡಿ.ಕೆ' ಅಡ್ಡಾದಲ್ಲಿ ಜಯಾ, ಕರುಣಾನಿಧಿ ಟಪಾಂಗುಚಿ]


'ಮಾಸ್ಟರ್ ಪೀಸ್'

ಯಶ್ ಅಭಿಮಾನಿಗಳು ಎದುರು ನೋಡುತ್ತಿರುವ ಸಿನಿಮಾ 'ಮಾಸ್ಟರ್ ಪೀಸ್'. ದೇಶಭಕ್ತನಾಗಿ 'ಭಗತ್ ಸಿಂಗ್' ಅವತಾರದಲ್ಲಿ ಯಶ್ ರೋಷಾವೇಶ ಮೆರೆದಿರುವುದರಿಂದ 'ಮಾಸ್ಟರ್ ಪೀಸ್' ಬಗ್ಗೆ ಕುತೂಹಲ ತುಸು ಹೆಚ್ಚಿದೆ. ಮಂಜು ಮಾಂಡವ್ಯ ಮೊದಲ ಬಾರಿ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಯಶ್ ಖಾತೆಯಿಂದ ಈ ವರ್ಷ ತೆರೆಗೆ ಬರುವುದು ಪಕ್ಕಾ. [ಯಶ್ ಹುಟ್ಟುಹಬ್ಬಕ್ಕೆ 'ಮಾಸ್ಟರ್ ಪೀಸ್' ಗಿಫ್ಟ್]


ಸುದೀಪ್ 'ರನ್ನ'ನಾವತಾರ

ಟಾಲಿವುಡ್ ನ ಹಿಟ್ ಚಿತ್ರ 'ಅತ್ತಾರಿಂಟಿಕಿ ದಾರೇದಿ' ರೀಮೇಕ್ ಈ ರನ್ನ. ಸಖತ್ ರಿಚ್ ಆಗಿ ರೆಡಿಯಾಗುತ್ತಿರುವ 'ರನ್ನ' ಸಿನಿಮಾ ಇನ್ನೆರಡು ತಿಂಗಳೊಳಗೆ ರಿಲೀಸ್ ಆಗಲಿದೆ. 'ಮಾಣಿಕ್ಯ' ನಂತ್ರ ಕಿಚ್ಚ ಸುದೀಪ್ 'ರನ್ನ'ನಾಗಿರುವುದರಿಂದ ಕಿಚ್ಚನ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. [ಫೆಬ್ರವರಿಯಲ್ಲೇ 'ರನ್ನ' ಬಿಡುಗಡೆಯಾಗುತ್ತಿದೆ ಚಿನ್ನಾ]


'ಐರಾವತ' ಏರಿ ಬರಲಿದ್ದಾರೆ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 'ಐರಾವತ' ಚಿತ್ರ ಈ ವರ್ಷ ಯಾವುದಾದರು ಒಂದು ಹಬ್ಬದ ಪ್ರಯುಕ್ತ ತೆರೆಗೆ ಬರುವುದು ಕನ್ಫರ್ಮ್. 'ಅಂಬರೀಶ' ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ವಿಯಾಗದ ಕಾರಣ, 'ಐರಾವತ' ಚಿತ್ರದ ಬಗ್ಗೆ ದರ್ಶನ್ ತುಂಬಾ ಜಾಗ್ರತೆ ವಹಿಸುತ್ತಿದ್ದಾರೆ. ಪ್ರಕಾಶ್ ರೈ ಇಲ್ಲಿ ಮೊದಲ ಬಾರಿಗೆ ದರ್ಶನ್ ಎದುರು ವಿಲನ್ ಆಗಿರುವುದರಿಂದ ಇಬ್ಬರ ಜುಗಲ್ಬಂದಿಗಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೇಸು ದಾಖಲು]


ಶಿವಣ್ಣನ 'ವಜ್ರಕಾಯ'

'ಭಜರಂಗಿ' ಚಿತ್ರದ ನಂತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನೃತ್ಯ ಸಂಯೋಜಕ ಹರ್ಷ ಒಂದಾಗಿ ಮಾಡುತ್ತಿರುವ ಸಿನಿಮಾ 'ವಜ್ರಕಾಯ'. ಸೂಪರ್ ಹಿಟ್ ಜೋಡಿ ಮತ್ತೊಮ್ಮೆ ಒಂದಾಗಿರುವುದು ಒಂದು ಕಡೆಯಾದರೆ, ಚಿತ್ರದಲ್ಲಿ ಶಿವಣ್ಣನ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್, ತಮಿಳು ನಟ ಧನುಷ್ ಸ್ಟೆಪ್ ಹಾಕುತ್ತಿರುವುದು ಮತ್ತೊಂದು ವಿಶೇಷ. ಇದನ್ನೆಲ್ಲಾ ಈ ವರ್ಷ ನೀವು ತೆರೆಮೇಲೆ ನೋಡಬಹುದು. [ಶಿವಣ್ಣ-ಕ್ರೇಜಿಸ್ಟಾರ್ ಮತ್ತೆ ಒಂದಾಗೋ ಸಿನಿಮಾ ಬರ್ತಿದೆ]


ಶ್ರೀಮುರುಳಿಯ 'ರಥಾವರ'

'ಉಗ್ರಂ' ಯಶಸ್ಸಿನ ನಂತ್ರ ನಟ ಶ್ರೀಮುರುಳಿಯ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗೇ, 'ರಥಾವರ' ಚಿತ್ರದ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಸಿನಿಮಾದ ಬಗ್ಗೆ ಇಲ್ಲಿವರೆಗೂ ಒಂದು ಪ್ರೆಸ್ ಮೀಟ್ ಆಗಲಿ, ಅಥವಾ ಮುಹೂರ್ತ ಸಮಾರಂಭವನ್ನ ಹಮ್ಮಿಕೊಳ್ಳದೇ ಇದ್ದರೂ 'ರಥಾವರ' ಚಿತ್ರದ ಎಲ್ಲಾ ಅಪ್ ಡೇಟ್ ಗಳು ಅಭಿಮಾನಿಗಳಿಗೆ ಗೊತ್ತಿದೆ. ಅದಕ್ಕೆ ಕಾರಣ, ಎಲ್ಲರ ಕಾತರ. [ಶ್ರೀಮುರುಳಿಯ 'ರಥಾವರ' ಖಡಕ್ ಗೆಟಪ್ ಔಟ್]


ಸೂಪರ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ'

ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಬಾರಿ ಒಟ್ಟಾಗಿರುವ 'ಮೈತ್ರಿ' ಚಿತ್ರ ಮಾರ್ಚ್ ವೇಳೆಯಲ್ಲಿ ತೆರೆಗೆ ಬರಲಿದೆ. ಆ ಮೂಲಕ 'ರಿಯಲ್' ಪವರ್ ಸ್ಟಾರ್ ನ 'ರೀಲ್'ನಲ್ಲಿ ನೋಡುವ ಭಾಗ್ಯ ನಿಮ್ಮಲ್ಲರಿಗೂ ಲಭಿಸುತ್ತದೆ. [ಸೂಪರ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ' ಟೀಸರ್ ಸೂಪರ್]


'ವಾಸ್ತುಪ್ರಕಾರ'ವಾಗಿ 'ರಿಂಗ್ ರೋಡ್ ಸುಮಾ'

'ಲಾಯರ್ ಶುಭ' ಪ್ರಕರಣದ ನೈಜ ಚಿತ್ರಣ 'ರಿಂಗ್ ರೋಡ್ ಸುಮಾ' ಆಗಿ ಬೆಳ್ಳಿಪರದೆ ಮೇಲೆ ಬರುತ್ತಿರುವುದು ಈ ವರ್ಷವೇ. ಇನ್ನು ಭಟ್ರ ಪ್ರಕಾರ 'ವಾಸ್ತು ಪ್ರಕಾರ' ಈ ವರ್ಷ ತೆರೆಗೆ ಬರಲಿದೆ.


ನಾಳೆ ಬಹಿರಂಗ 'ಅಭಿನೇತ್ರಿ' ಅಂತರಂಗ

ಒಂದು ವರ್ಷದಿಂದ ಗಾಂಧಿನಗರದ ಅಂಗಳದಲ್ಲಿ ವಾದ-ವಿವಾದಗಳನ್ನ ಹುಟ್ಟಿಹಾಕಿದ 'ಅಭಿನೇತ್ರಿ' ಸಿನಿಮಾ ನಾಳೆ ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಮಿನುಗುತಾರೆ ಕಲ್ಪನಾ ಜೀವನಾಧಾರಿತ ಈ ಚಿತ್ರದಲ್ಲಿ ಪುಟ್ಟಣ್ಣ-ಕಲ್ಪನಾ ಬಗ್ಗೆ ಅವಹೇಳನಕಾರಿ ಸಂಗತಿ ಇವೆ ಅನ್ನುವ ಲೆಕ್ಕಾಚಾರ ಗಾಂಧಿನಗರದ ಮಂದಿಗಿದೆ. ಅದು ನಾಳೆ ಬಹಿರಂಗವಾಗಲಿದೆ. [ಕಲ್ಪನಾ-ಪುಟ್ಟಣ್ಣ ಬಗ್ಗೆ 'ಅಭಿನೇತ್ರಿ' ಚಿತ್ರದಲ್ಲೇನಿದೆ..?]


English summary
Real Star Upendra's Uppi-2, Puneeth Rajkumar's Dheera Rana Vikrama, Shivarajkumar's Vajrakaya tops Sandalwood's Most Expected Movies list of 2015. Here is the list of Movies which you can't miss this year.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada