Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್‌ದೀಪ್ ರಾಯ್ ನಿಧನ

Sandalwoods senior actor Mandeep Roy passed away due to heart attack

ಕನ್ನಡ ಚಲನಚಿತ್ರರಂಗ ಕಂಡ ಅತ್ಯುತ್ತಮ ಹಾಸ್ಯನಟರಲ್ಲಿ ಓರ್ವರಾದ ಮಂದೀಪ್ ಸಿಂಗ್ ಅವರು ಇಂದು ( ಜನವರಿ 29 ) ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಭೈರಸಂದ್ರದಲ್ಲಿನ ತಮ್ಮ ನಿವಾಸದಲ್ಲಿ ಮಂದೀಪ್ ರಾಯ್ ಅವರು ತಡರಾತ್ರಿ 1.45ರ ವೇಳೆಗೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ನಟ ಮಂದೀಪ್ ರಾಯ್ ಅವರಿಗೆ 73 ವರ್ಷ ವಯಸ್ಸಾಗಿತ್ತು.

ಮಂದೀಪ್ ರಾಯ್ ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 1980ರಲ್ಲಿ ಬಿಡುಗಡೆಗೊಂಡ ಶಂಕರ್ ನಾಗ್ ಹಾಗೂ ಅನಂತ್ ನಾಗ್ ನಟನೆಯ ಮಿಂಚಿನ ಓಟ ಚಿತ್ರದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ ನಟ ಮಂದೀಪ್ ರಾಯ್ ಒಟ್ಟಾರೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದ ಮಂದೀಪ್ ರಾಯ್ ಇದೀಗ ಬಾರದ ಊರಿಗೆ ಪಯಣ ಬೆಳೆಸಿದ್ದಾರೆ.

ಮುಂಬೈ ಮೂಲದ ಪ್ರತಿಭೆ ಮಿಂಚಿದ್ದು ಕನ್ನಡ ಚಿತ್ರರಂಗದಲ್ಲಿ

ಮುಂಬೈ ಮೂಲದ ಪ್ರತಿಭೆ ಮಿಂಚಿದ್ದು ಕನ್ನಡ ಚಿತ್ರರಂಗದಲ್ಲಿ


1949ರ ಏಪ್ರಿಲ್ 4ರಂದು ಮುಂಬೈ ನಗರದಲ್ಲಿ ಜನಿಸಿದ ಮನ್‌ ದೀಪ್ ರಾಯ್ ಮಿಂಚಿದ್ದು ಕನ್ನಡ ಚಿತ್ರರಂಗದಲ್ಲಿ. ಮಿಂಚಿನ ಓಟ ಚಿತ್ರದ ಮೂಲಕ ತನ್ನ ಸಿನಿಮಾ ಓಟವನ್ನು ಆರಂಭಿಸಿದ ಮನ್‌ ದೀಪ್ ರಾಯ್ ಕನ್ನಡದ 500 ಚಿತ್ರಗಳಲ್ಲಿ ನಟಿಸಿ, ಪ್ರೇಕ್ಷಕರನ್ನು ನಗಿಸಿ, ಕನ್ನಡ ಸಿನಿ ರಸಿಕರ ಮನದಲ್ಲಿ ಜಾಗ ಪಡೆದುಕೊಂಡಿದ್ದಾರೆ. ಇಂದಿಗೂ ಇವರ ನಟನೆಯ ಹಾಸ್ಯ ದೃಶ್ಯಗಳನ್ನು ನೋಡಿ ನಕ್ಕು ಮನರಂಜನೆ ಪಡೆವ ಪ್ರೇಕ್ಷಕರಿದ್ದಾರೆ.

ಎಲ್ಲಾ ತಲೆಮಾರಿನ ನಟರ ಚಿತ್ರಗಳಲ್ಲೂ ನಟನೆ

ಎಲ್ಲಾ ತಲೆಮಾರಿನ ನಟರ ಚಿತ್ರಗಳಲ್ಲೂ ನಟನೆ


ರಾಜ್‌ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅನಂತ್ ನಾಗ್ ರೀತಿಯ ಹಿರಿಯ ನಟರ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮನ್‌ದೀಪ್ ರಾಯ್ ಈಗಿನ ಕಾಲದ ನಟರ ಚಿತ್ರಗಳಲ್ಲೂ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್, ಸುದೀಪ್ ಹಾಗೂ ದರ್ಶನ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲೂ ಮನ್‌ ದೀಪ್ ರಾಯ್ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಮನ್‌ ದೀಪ್ ರಾಯ್ ನಟಿಸಿದ ಪ್ರಮುಖ ಚಿತ್ರಗಳು

ಮನ್‌ ದೀಪ್ ರಾಯ್ ನಟಿಸಿದ ಪ್ರಮುಖ ಚಿತ್ರಗಳು


ಕನ್ನಡದ ಒಟ್ಟು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮನ್ ದೀಪ್ ರಾಯ್ ಅಭಿನಯಿಸಿರುವ ಪ್ರಮುಖ ಚಿತ್ರಗಳೆಂದರೆ: ಮಿಂಚಿನ ಓಟ, ದೇವರ ಆಟ, ಬಾಡದ ಹೂ, ಬೆಂಕಿಯ ಬಲೆ, ಮಕ್ಕಳಿರಲವ್ವ ಮನೆ ತುಂಬಾ, ಬಿಡುಗಡೆಯ ಬೇಡಿ, ನನ್ನವರು, ಅಂತಿಮ ಘಟ್ಟ, ಏಳು ಸುತ್ತಿನ ಕೋಟೆ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಭೈರವಿ, ಅಗ್ನಿ ಪಂಜರ, ಆತಂಕ, ಆಕಸ್ಮಿಕ, ಅಪೂರ್ವ ಸಂಸಾರ, ಬಲ್ ನನ್ ಮಗ, ಆಯುಧ, ಅಗ್ನಿ ಐಪಿಎಸ್, ಅರ್ಜುನ್ ಅಭಿಮನ್ಯು, ಕಿಂಗ್, ಚಂದ್ರಮುಖಿ ಪ್ರಾಣಸಖಿ, ದೀಪಾವಳಿ, ಆಂಟಿ ಪ್ರೀತ್ಸೆ, ನಾಗರಹಾವು, ಕುರಿಗಳು ಸಾರ್ ಕುರಿಗಳು, ಆತ್ಮ, ಪ್ರೀತ್ಸೋದ್ ತಪ್ಪಾ, ಖುಷಿ, ಅವಳೇ ನನ್ನ ಗೆಳತಿ, ಅಯ್ಯ, ಹಠವಾದಿ, ಸಿಕ್ಸರ್, ಬೆಳದಿಂಗಳಾಗಿ ಬಾ, ಟ್ಯಾಕ್ಸಿ ನಂಬರ್ ಒನ್, ಆಪ್ತ ರಕ್ಷಕ, ರಂಗಪ್ಪ ಹೋಗ್ಬಿಟ್ನಾ, ಅಲೆಮಾರಿ, ಪರಾರಿ, ಅಮಾನುಷ, ಒಂದ್ ಚಾನ್ಸ್ ಕೊಡಿ, ಮದುವೆಯ ಮಮತೆಯ ಕರೆಯೋಲೆ, ಪುಷ್ಪಕ ವಿಮಾನ ಹಾಗೂ ರಾಜಕುಮಾರ.

More from Filmibeat

English summary
Sandalwood's senior actor Mandeep Roy passed away due to heart attack
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X