2026 Second Half: ಒಬ್ಬೊಬ್ಬರಾಗಿ ಅಲ್ಲ ಒಟ್ಟೊಟ್ಟಿಗೆ ಬರ್ತಿದ್ದಾರೆ; ಆದ್ರೆ ಗೆಲ್ಲೋದ್ಯಾರು?

ಈ ವರ್ಷದ 6 ತಿಂಗಳು ಕನ್ನಡ ಚಿತ್ರರಂಗಕ್ಕೆ ಲಾಭ ತಂದುಕೊಡಲಿಲ್ಲ. ದೊಡ್ಡ ಸಿನಿಮಾಗಳು ಇಲ್ಲದೇ ಇಂಡಸ್ಟ್ರಿ ಬಡವಾಗಿತ್ತು. ಆದರೆ ಮುಂದಿನ 6 ತಿಂಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆ ಆಗಲಿವೆ. ಮೊದಲ 6 ತಿಂಗಳ ಸೋಲನ್ನು ವರ್ಷಾಂತ್ಯದ ವೇಳೆಗೆ ಬ್ಯಾಲೆನ್ಸ್ ಮಾಡಿಕೊಳ್ಳುವ ಸುಳಿವು ಸಿಕ್ತಿದೆ.

ಹೀಗೆ ಮೊದಲ 6 ಸುಮ್ಮನಾಗಿ ಬಳಿಕ ಸಾಲು ಸಾಲಾಗಿ ಕನ್ನಡ ಸಿನಿಮಾಗಳು ತೆರೆಗೆ ಬರುವುದು ಹೊಸದೇನು ಅಲ್ಲ. ಈ ಹಿಂದೆ ಕೂಡ ಇದೇ ರೀತಿ ವಾತಾವರಣ ಕಂಡುಬಂದಿತ್ತು. ಮತ್ತೆ ಅದೇ ಮುಂದುವರೆದಿದೆ. ಅಂದಹಾಗೆ ಮೊದಲ 6 ತಿಂಗಳಲ್ಲಿ 120ಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಗಪ್ಪಳಿಸಿದ್ದವು. ಗೆದ್ದಿದ್ದು 2ನೇ ಸಿನಿಮಾ. ಕೆಲ ಸಿನಿಮಾಗಳನ್ನು ಪ್ರೇಕ್ಷಕರು ಒಪ್ಪಿಕೊಂಡರೂ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ.

Sandalwood Second Half of 2026 6 Kannada Films Fans Can t Wait to Watch

ಮುಂದೆ 'ಟಾಕ್ಸಿಕ್' ಚಿತ್ರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕನ್ನಡ ಮಾತ್ರವಲ್ಲ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ನಾಲ್ಕೂವರೆ ವರ್ಷಗಳ ಬಳಿಕ ಯಶ್ ನಟನೆಯ ಸಿನಿಮಾ ತೆರೆಗೆ ಬಂದಂತಾಗುತ್ತಿದೆ. ಆಗಸ್ಟ್ 26ಕ್ಕೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಚಿತ್ರದ ಟೀಸರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಈ ವರ್ಷದ ಬಹುನಿರೀಕ್ಷಿತ ಕನ್ನಡ ಸಿನಿಮಾಗಳ ಪಟ್ಟಿ ಮುಂದೆ ಓದಿ.

ಜುಲೈನಲ್ಲಿ 3 ಚಿತ್ರ

ಈ ವಾರ 'ಗ್ರಾಮಾಯಣ' ಸಿನಿಮಾ ತೆರೆಗೆ ಬಂದಿದೆ. ಚಿತ್ರಕ್ಕೆ ಪ್ರೇಕ್ಷಕರಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಮುಂದಿನ ವಾರ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್ ಪ್ರಾಮೀಸ್' ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಹಿಟ್ ಆಗಿ ಗಮನ ಸೆಳೆದಿತ್ತು. ಜುಲೈ 24ಕ್ಕೆ ಪ್ರಜ್ವಲ್ ದೇವರಾಜ್ ಹಾಗೂ ರಾಜ್‌ ಬಿ. ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾ ತೆರೆಗಪ್ಪಳಿಸಲಿದೆ.

Sandalwood Second Half of 2026 6 Kannada Films Fans Can t Wait to Watch

ಆಗಸ್ಟ್ 'ಟಾಕ್ಸಿಕ್' ಕಿಕ್

ಮುಂದಿನ ತಿಂಗಳ ಆರಂಭದಲ್ಲೇ 'ಅಯೋಗ್ಯ-2' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸೂಪರ್ ಹಿಟ್ 'ಅಯೋಗ್ಯ' ಚಿತ್ರದ ಮುಂದುವರೆದ ಭಾಗ ಇದು. ಮಹೇಶ್ ನಿರ್ದೇಶನದ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಮತ್ತೆ ಜೊತೆಯಾಗಿದ್ದಾರೆ. ಆಗಸ್ಟ್ ಕೊನೆಗೆ ಯಶ್ ನಟನೆಯ 'ಟಾಕ್ಸಿಕ್' ದರ್ಬಾರ್ ಶುರುವಾಗಲಿದೆ. ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. 'ಕೆಜಿಎಫ್'-2 ಬಳಿಕ ಯಶ್ ನಟಿಸಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ.

ಅಕ್ಟೋಬರ್‌ನಲ್ಲಿ ಗಣಿ ಹವಾ

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಪಿನಾಕ' ಹಾಗೂ 'ಬೃಂದಾವಿಹಾರಿ' ಸಿನಿಮಾಗಳು ಎರಡು ವಾರದ ಅಂತರದಲ್ಲಿ ತೆರೆಗೆ ಬರಲಿದೆ. ಎರಡು ವರ್ಷಗಳಿಂದ ಗಣಿ ನಟಿಸಿದ ಯಾವುದೇ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಇದೀಗ ಎರಡು ಸಿನಿಮಾ ಒಟ್ಟೊಟ್ಟಿಗೆ ಬಿಡುಗಡೆಗೆ ಸಜ್ಜಾಗಿದೆ.

ಡ್ಯಾಡ್, ಬೇಲ್

ಶಿವಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶನದ 'ಬೇಲ್' ಸಿನಿಮಾ ಟೀಸರ್ ಬಂದು ಹಿಟ್ ಆಗಿತ್ತು. ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಇತ್ತೀಚೆಗೆ 'ಡ್ಯಾಡ್' ಸಿನಿಮಾ ಚಿತ್ರೀಕರಣ ಸಹ ಮುಗಿದಿದ್ದು ಈ ವರ್ಷವೇ 2 ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಜೊತೆಗೆ ದಸರಾ ಸಂಭ್ರಮದಲ್ಲಿ ಬರಲಿರುವ 'ಜೈಲರ್- 2' ಚಿತ್ರದಲ್ಲೂ ಶಿವಣ್ಣ ಅಬ್ಬರಿಸಿದ್ದಾರೆ.

ರಾಮಾಯಣ ರಂಗು

ಅಕ್ಟೋಬರ್ ಕೊನೆ ವಾರದಲ್ಲಿ ಯಶ್ ನಟನೆಯ 'ರಾಮಾಯಣ' ಸಿನಿಮಾ ಬಿಡುಗಡೆ ಆಗಲಿದೆ. ಬಾಲಿವುಡ್ ಸಿನಿಮಾ ಆಗಿದ್ದರೂ ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ರಾವಣನಾಗಿ ಯಶ್ ನಟಿಸಿರುವುದು ರಾಜ್ಯದಲ್ಲಿ ಕೂಡ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಇನ್ನುಳಿದಂತೆ ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್', ಆರ್‌. ಚಂದ್ರು ನಿರ್ಮಾಣದ 'ಫಾದರ್' ಹೀಗೆ ಒಂದಷ್ಟು ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. ಶಿವಣ್ಣ, ಧನಂಜಯ್ ನಟನೆಯ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಆದರೆ ಈ ವರ್ಷ ಸಿನಿಮಾ ಬಿಡುಗಡೆ ಅನುಮಾನ.

Read more about: sandalwood toxic ayogya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X