For Quick Alerts
  ALLOW NOTIFICATIONS  
  For Daily Alerts

  ಚಂದನವನದ ಖ್ಯಾತ ಚಿತ್ರಸಾಹಿತಿ ಶ್ರೀರಂಗ ನಿಧನ

  |

  ಕನ್ನಡ ಸಿನಿಮಾರಂಗದ ಹಿರಿಯ ಚಿತ್ರ ಸಾಹಿತಿ ಶ್ರೀರಂಗ ಅವರು ಇಂದು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

  ಶ್ರೀರಂಗ ಅವರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಬೆಂಗಳೂರಿನ ನಾಗರಬಾವಿಯಲ್ಲಿ ವಾಸಿಸುತ್ತಿದ್ದ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.

  ಕನ್ನಡದ 1000 ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಗೀತ ರಚನೆ ಮಾಡಿದ್ದಾರೆ. 'ನಂಜುಂಡಿ ಕಲ್ಯಾಣ' ಸಿನಿಮಾದ 'ಒಳಗೆ ಸೇರಿದರೆ ಗುಂಡು' ಹಾಡಿನಿಂದ ಖ್ಯಾತಿ ಗಳಿಸಿದ ಶ್ರೀರಂಗ ಹಲವು ಎಂದೂ ಮರೆಯದ ಹಾಡುಗಳನ್ನು ಅವರು ನೀಡಿದ್ದಾರೆ.

  'ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ', ಪುನೀತ್ ಅಭಿನಯದ 'ಅಪ್ಪು' ಸಿನಿಮಾದ 'ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ', ಅಭಿ ಸಿನಿಮಾದ 'ಸುಮ್‌ಸುಮ್ನೇ ಓಡಬೇಡ ಸುಂದರಿ' ಇನ್ನು ಹಲವು ಭಿನ್ನ ರೀತಿಯ ಹಾಡುಗಳನ್ನು ಶ್ರೀರಂಗ ರಚಿಸಿದ್ದರು.

  ಕನ್ನಡ ಚಿತ್ರರಂಗಕ್ಕೆ ಬಹಿರಂಗ ಪತ್ರ ಬರೆದ ಮಾಲಾಶ್ರೀ | Filmibeat Kannada

  'ಭೂ ಲೋಕದಲ್ಲಿ ಯಮರಾಜ' ಸೇರಿದಂತೆ ಹಲವು ಸಿನಿಮಾಗಳಿಗೆ ಅವರು ಚಿತ್ರಕತೆ, ಸಂಭಾಷಣೆಗಳನ್ನು ಸಹ ಬರೆದಿದ್ದಾರೆ.

  English summary
  Sandalwood senior song and script writer Shriranga passed away. He was 87 years age.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X