ಕನ್ನಡ, ಮಲಯಾಳಂ ಬಳಿಕ ತೆಲುಗಿನಲ್ಲಿ ಧೂಳೆಬ್ಬಿಸಲು ಸಜ್ಜಾದ ‘ಸು ಫ್ರಂ ಸೋ’

ಹಿಂದೆ ಒಂದು ಕಾಲ ಇತ್ತು. ಕನ್ನಡ ಚಿತ್ರರಂಗ ಅಂದರೆ ಅಸಡ್ಡೆಯಿಂದ ನೋಡುತ್ತಿದ್ದ ಕಾಲ ಅದು. ಯಾಕೆಂದರೆ.. ನಮ್ಮಲ್ಲಿ ಅನೇಕರು ರಿಮೇಕ್ ಸಂಪ್ರದಾಯಕ್ಕೆ ಆಗ ಶರಣಾಗಿದ್ದರು. ಪ್ರೇಕ್ಷಕರು ಕೂಡ ಏಕತಾನತೆಯಿಂದ ಬೇಸತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ಪ್ರಯೋಗಗಳಾಗುತ್ತಿವೆ. ಮೊದಲೆಲ್ಲಾ ಕನ್ನಡ ಚಿತ್ರರಂಗ ಅಂದರೆ ಅಯ್ಯೋ ಎಂದು..

ಕೇವಲವಾಗಿ ನೋಡುತ್ತಿದ್ದವರ ಕಣ್ಣುಗಳಲ್ಲಿಯೇ ಈಗ ಬೆರಗೊಂದು ಪ್ರಜ್ವಲಿಸಲಾರಂಭಿಸಿದೆ. ಗಡಿ ಸೀಮೆಯನ್ನೆಲ್ಲ ದಾಟಿಕೊಂಡು ಕನ್ನಡದ ಚಿತ್ರಗಳು ಸದ್ದು ಮಾಡುತ್ತಿವೆ. ಇದಕ್ಕೆ ''ಸು ಫ್ರಮ್ ಸೋ'' ಚಿತ್ರಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.

Sandalwood Sensation Su from So arrives in Telugu states on August 8th

ಹೌದು, ಸದ್ಯಕ್ಕೆ ಕರುನಾಡಿನೆಲ್ಲೆಡೆ ''ಸು ಫ್ರಮ್ ಸೋ'' ಅಲೆ ಎದ್ದಿದೆ. ಯಾರನ್ನೇ ಕೇಳಿ ಈ ಚಿತ್ರದ ಕುರಿತೇ ಮಾತನಾಡಲು ಶುರು ಮಾಡಿದ್ದಾರೆ. ಇನ್ನು ಬಾಕ್ಸಾಫೀಸ್ ಕಥೆ ಎಲ್ಲರಿಗೆ ಗೊತ್ತು. ಅಕ್ಷರಶಃ ಚಿನ್ನದ ಬೆಳೆಯನ್ನು ಈ ಚಿತ್ರ ಬೆಳೆಯುತ್ತಿದೆ. ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಜೊತೆ ಹಣ ಹೂಡಿದವರಿಗೆ ಕುಬೇರ ವರ ಕೂಡ ಪ್ರಾಪ್ತಿಯಾಗಿದೆ.

ಕೇವಲ ಕನ್ನಡಿಗರು ಮಾತ್ರವಲ್ಲ ಅನ್ಯಭಾಷೆಯವರು ಕೂಡ ಈ ಚಿತ್ರದ ಕುರಿತು ಮಾತನಾಡಲು ಶುರು ಮಾಡಿದ್ದಾರೆ. ಹೀಗಾಗಿಯೇ ಏನೋ ತಮ್ಮ ಚಿತ್ರಕ್ಕಿರುವ ಬೆಲೆಯನ್ನು ಮನಗಂಡು ರಾಜ್ ಬಿ ಶೆಟ್ಟಿ ಮೊನ್ನೆ ತಮ್ಮ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿದ್ದರು. ಮಲಯಾಳಂನಲ್ಲಿ ಬಿಡುಗಡೆಯನ್ನು ಮಾಡಿದ್ದರು. ವಿಶೇ‍ಷ ಅಂದರೆ ಮಲಯಾಳಂನಲ್ಲಿ ಕೂಡ ''ಸು ಫ್ರಮ್ ಸೋ'' ಸೂಪರ್ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಹೀಗಿರುವಾಗ ಇದೀಗ ''ಸು ಫ್ರಮ್ ಸೋ'' ಚಿತ್ರ ಪಕ್ಕದ ಆಂಧ್ರದಲ್ಲಿ ಬಿಡುಗಡೆಯಾಗುತ್ತಿದೆ. ಮಲಯಾಳಂ ನಂತರ ತೆಲುಗಿಗೆ ಕೂಡ ಡಬ್ ಆಗಿದೆ. ಈ ಆಗಸ್ಟ್ 8ರಂದು ಚಿತ್ರ ಅಖಂಡ ಆಂಧ್ರದಲ್ಲಿ ಬಿಡುಗಡೆಯಾಗಲಿದ್ದು, ಈ ಪ್ರಕ್ರಿಯೆಯಲ್ಲಿ ರಾಜ್ ಬಿ ಶೆಟ್ಟಿ ಜೊತೆ ತೆಲುಗಿನ ಪ್ರಖ್ಯಾತ ನಿರ್ಮಾಣ ಸಂಸ್ಥೆಯಲ್ಲಿ ಒಂದಾದ, ''ಪುಷ್ಪ''.. ''ಪುಷ್ಪ 2'' ಸೇರಿ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿರುವ, ಹಲವಾರು ಚಿತ್ರಗಳ ವಿತರಣೆಯನ್ನು ಕುಡ ಮಾಡಿರುವ ''ಮೈತ್ರಿ ಮೂವಿ ಮೇಕರ್ಸ್'' ಕೈ ಜೋಡಿಸಿದೆ. ತೆಲುಗು ರಾಜ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಜವಾಬ್ಧಾರಿಯನ್ನು ವಹಿಸಿಕೊಂಡಿದೆ.

ಈ ಸುದ್ದಿ ಸಹಜವಾಗಿಯೇ ಹಲವರ ಖುಷಿಯನ್ನು ಹೆಚ್ಚಿಸಿದೆ. ಯಾಕೆಂದರೆ ಚಿತ್ರವೊಂದು ಬಿಡುಗಡೆಯಾಗಿ ಒಂದು ವಾರ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡರೆ ಅದೇ ಬಹುದೊಡ್ಡ ಸಾಧನೆ ಎಂದುಕೊಳ್ಳುವಂತವರು ಕನ್ನಡ ಚಿತ್ರರಂಗದಲ್ಲಿದ್ದಾರೆ.

ಹೀಗಿರುವಾಗ ಯಾವ ನಿರೀಕ್ಷೆ - ಅಪೇಕ್ಷೆಗಳಿಲ್ಲದೇ ಮಾಡಲಾದ ಚಿತ್ರ ಸದ್ಯ ಭಾರತದೆಲ್ಲೆಡೆ ಸದ್ದು ಮಾಡುತ್ತಿದೆ. ಹಲವರ ಗಮನ ಸೆಳೆಯುತ್ತಿದೆ. ಯಾರಿಗೆ ಗೊತ್ತು ಮಲಯಾಳಂ ಮತ್ತು ತೆಲುಗುಗೆ ಡಬ್ ಆದ ''ಸು ಫ್ರಮ್ ಸೋ'' ಮುಂಬರುವ ದಿನಗಳಲ್ಲಿ ತಮಿಳು ಮತ್ತು ಹಿಂದಿಗೂ ಕೂಡ ಡಬ್ ಆಗಬಹುದು. ''ಕಾಂತಾರ'' ಚಿತ್ರವನ್ನು ಕಣ್ತುಂಬಿಕೊಂಡು ಹುಚ್ಚೆದ್ದು ಕುಣಿದ ಜನ ''ಸು ಫ್ರಮ್ ಸೋ'' ಚಿತ್ರವನ್ನು ನೋಡಿ ನಕ್ಕು ನಕ್ಕು ಸುಸ್ತಾಗಬಹುದು.

ಇನ್ನುಳಿದಂತೆ ಸದ್ಯ ''ಸು ಫ್ರಮ್ ಸೋ'' ಬಾಕ್ಸಾಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದೆ. ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಬೀಳುತ್ತಿದೆ. ಸತತ ಸೋಲುಗಳಿಂದ ಕಂಗಾಲಾಗಿದ್ದ ಕನ್ನಡ ಚಿತ್ರರಂಗವನ್ನು ಕೂಡ ಈ ಚಿತ್ರ ಬಿಡಿದೆಬ್ಬಿಸಿದೆ. ಮುಂಬರುವ ದಿನಗಳಲ್ಲಿ ಈ ಚಿತ್ರ ಎಷ್ಟು ಹಣ ಗಳಿಸುತ್ತೆ ಇನ್ನು ಯಾವ ಯಾವ ಭಾಷೆಗೆ ಡಬ್ ಆಗುತ್ತೆ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ.

More from Filmibeat

English summary
Mythri Movie Makers presents the highly anticipated movie 'Su from So' on August 8th! Don't miss this cinematic phenomenon in Telugu states.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X