ಅಪ್ಪು, ಯಶ್, ದರ್ಶನ್, ಸುದೀಪ್: ನಮ್ಮ ಸ್ಟಾರ್‌ಗಳ ಕೊನೆ ಚಿತ್ರಗಳ ರೇಟಿಂಗ್ಸ್; ಯಾರ ಚಿತ್ರಕ್ಕೆ ಕಡಿಮೆ?

ಈ ವರ್ಷದ ಆರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆಯಾಗಿತ್ತು. ಈ ಮೂಲಕ ದರ್ಶನ್ ಎರಡು ವರ್ಷಗಳ ಬಳಿಕ ಬೆಳ್ಳಿತೆರೆ ಮೇಲೆ ನಾಯಕನಾಗಿ ದರ್ಶನ ನೀಡಿದ್ದರು. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರವನ್ನು ದರ್ಶನ್ ಅಭಿಮಾನಿಗಳು ಮೆಚ್ಚಿಕೊಂಡರು. ಇನ್ನು ಕ್ರಾಂತಿ ಬಳಿಕ ದರ್ಶನ್ ಕಾಟೇರ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ದರ್ಶನ್ ಕಥೆ ಇದಾದರೆ ಇನ್ನು ಯಶ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಸಹ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಹೌದು, ಕೆಜಿಎಫ್ ಚಾಪ್ಟರ್ 2 ಮೂಲಕ ಬೃಹತ್ ಇತಿಹಾಸ ಬರೆದಿರುವ ರಾಕಿಂಗ್ ಸ್ಟಾರ್‌ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಸುಳಿವನ್ನು ನೀಡದೇ ಇದ್ದು, ಕಿಚ್ಚ ಸುದೀಪ್ ಮೂರು ಪ್ರಾಜೆಕ್ಟ್‌ಗಳ ಮಾಹಿತಿಗಳನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳಲಿದ್ದೇನೆ ಎಂದಿದ್ದಾರೆ.

Sandalwood star actors last film imdb, google and book my show ratings details

ಇನ್ನು ಶಿವ ರಾಜ್‌ಕುಮಾರ್ ವೇದ ಮೂಲಕ ಕಮ್‌ಬ್ಯಾಕ್ ಮಾಡಿದ್ದು, ಘೋಸ್ಟ್ ಮೂಲಕ ಬೃಹತ್ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಇನ್ನುಳಿದ ಕನ್ನಡದ ಸ್ಟಾರ್ ನಟರು ತಮ್ಮ ಹೊಸ ಚಿತ್ರಗಳಲ್ಲಿ ಬ್ಯುಸಿ ಇದ್ದು ಈ ನಟರ ಕೊನೆಯ ಚಿತ್ರಗಳು ಗೂಗಲ್ ಹಾಗೂ ಐಎಂಡಿಬಿಯಲ್ಲಿ ಎಷ್ಟೆಷ್ಟು ರೇಟಿಂಗ್ ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಪುನೀತ್ ರಾಜ್‌ಕುಮಾರ್: ಪುನೀತ್ ರಾಜ್‌ಕುಮಾರ್ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು ಗಂಧದ ಗುಡಿ ಚಿತ್ರದ ಮೂಲಕ. ಈ ಚಿತ್ರ ಐಎಂಡಿಬಿಯಲ್ಲಿ 10ಕ್ಕೆ 9 ರೇಟಿಂಗ್ ಪಡೆದುಕೊಂಡಿದ್ದು, ಗೂಗಲ್‌ನಲ್ಲಿ 5ಕ್ಕೆ 4.9 ರೇಟಿಂಗ್ ಪಡೆದುಕೊಂಡಿದೆ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 9.8 ರೇಟಿಂಗ್ ಪಡೆದುಕೊಂಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್: ದರ್ಶನ್ ನಟನೆಯ ಕೊನೆಯ ಚಿತ್ರ ಕ್ರಾಂತಿ ಐಎಂಡಿಬಿಯಲ್ಲಿ 10ಕ್ಕೆ 7.4 ರೇಟಿಂಗ್ ಪಡೆದುಕೊಂಡಿದ್ದು, ಗೂಗಲ್‌ನಲ್ಲಿ 5ಕ್ಕೆ 4.4 ರೇಟಿಂಗ್ ಪಡೆದುಕೊಂಡಿದೆ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 9.1 ರೇಟಿಂಗ್ ಪಡೆದುಕೊಂಡಿದೆ.

Sandalwood star actors last film imdb, google and book my show ratings details

ಸುದೀಪ್: ಕಿಚ್ಚ ಸುದೀಪ್ ಲೀಡ್ ರೋಲ್‌ನಲ್ಲಿ ನಟಿಸಿದ ಕೊನೆಯ ಚಿತ್ರ ವಿಕ್ರಾಂತ್ ರೋಣ ಐಎಂಡಿಬಿಯಲ್ಲಿ 10ಕ್ಕೆ 7 ರೇಟಿಂಗ್ ಪಡೆದುಕೊಂಡಿದ್ದು, ಗೂಗಲ್‌ನಲ್ಲಿ 5ಕ್ಕೆ 4.5 ರೇಟಿಂಗ್ ಪಡೆದುಕೊಂಡಿದೆ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 8.5 ರೇಟಿಂಗ್ ಪಡೆದುಕೊಂಡಿದೆ.

ಯಶ್: ರಾಕಿಂಗ್ ಸ್ಟಾರ್ ಯಶ್ ಅವರ ಮಾನ್‌ಸ್ಟರ್ ಕೆಜಿಎಫ್ ಚಾಪ್ಟರ್ 2 ಐಎಂಡಿಬಿಯಲ್ಲಿ 10ಕ್ಕೆ 8.3 ರೇಟಿಂಗ್ ಪಡೆದುಕೊಂಡಿದ್ದು, ಗೂಗಲ್‌ನಲ್ಲಿ 5ಕ್ಕೆ 4.8 ರೇಟಿಂಗ್ ಪಡೆದುಕೊಂಡಿದೆ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 9.3 ರೇಟಿಂಗ್ ಪಡೆದುಕೊಂಡಿದೆ.

ಶಿವ ರಾಜ್‌ಕುಮಾರ್: ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ನಟನೆಯ ವೇದ ಚಿತ್ರ ಐಎಂಡಿಬಿಯಲ್ಲಿ 10ಕ್ಕೆ ಕೇವಲ 6.7 ರೇಟಿಂಗ್ ಪಡೆದುಕೊಂಡಿತ್ತು. ಗೂಗಲ್‌ನಲ್ಲಿ 5ಕ್ಕೆ 4.3 ರೇಟಿಂಗ್ ಪಡೆದುಕೊಂಡಿದೆ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 9.2 ರೇಟಿಂಗ್ ಪಡೆದುಕೊಂಡಿದೆ.

ಗಣೇಶ್: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೊನೆಯ ಚಿತ್ರ ತ್ರಿಬಲ್ ರೈಡಿಂಗ್ ಐಎಂಡಿಬಿಯಲ್ಲಿ ಕಳಪೆ ರೇಟಿಂಗ್ ಪಡೆದುಕೊಂಡಿದೆ. 10ಕ್ಕೆ ಕೇವಲ 4.9 ಪಡೆದುಕೊಂಡಿದ್ದು, ಗೂಗಲ್‌ನಲ್ಲಿ 5ಕ್ಕೆ 3.7 ರೇಟಿಂಗ್ ಪಡೆದುಕೊಂಡಿದೆ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 7.9 ರೇಟಿಂಗ್ ಪಡೆದುಕೊಂಡಿದೆ.

ಉಪೇಂದ್ರ: ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಚಿತ್ರ ಐಎಂಡಿಬಿಯಲ್ಲಿ 10ಕ್ಕೆ 7 ರೇಟಿಂಗ್ ಪಡೆದುಕೊಂಡಿದ್ದು, ಗೂಗಲ್‌ನಲ್ಲಿ 5ಕ್ಕೆ 3 ರೇಟಿಂಗ್ ಪಡೆದುಕೊಂಡಿದೆ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 7.4 ರೇಟಿಂಗ್ ಪಡೆದುಕೊಂಡಿತ್ತು.

More from Filmibeat

English summary
Sandalwood star actor's last film imdb, google and book my show ratings details. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X