ಬಿಡುಗಡೆಗೂ ಮುನ್ನವೇ ಭರ್ಜರಿ ಮೊತ್ತಕ್ಕೆ 'ಆಟಗಾರ' ಮಾರಾಟ
ಚಂದನವನದಲ್ಲಿ 'ಕುಳ್ಳ' ಅಂತಾನೇ ಖ್ಯಾತಿ ಗಳಿಸಿರುವ ದ್ವಾರಕೀಶ್ ಅವರ ಹೋಮ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ 49ನೇ ಚಿತ್ರ ಆಟಗಾರ ತಂಡದಿಂದ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದೆ.
ಅದೇನಪ್ಪಾ ಅಂದ್ರೆ ಇನ್ನೇನು ಇದೇ ಶುಕ್ರವಾರ (ಆಗಸ್ಟ್ 28) ವರಮಹಾಲಕ್ಷ್ಮಿ ಹಬ್ಬದಂದು ಚಿತ್ರ ತೆರೆಯ ಮೇಲೆ ಅಪ್ಪಳಿಸಲಿದೆ ಅನ್ನೋದು ಎಲ್ಲರಿಗೂ ತಿಳಿದೇ ಇದೆ. ಇದೀಗ ಚಿತ್ರದ ಖಾಸ್ ಖಬರ್ ಏನಪ್ಪಾ ಅಂದ್ರೆ 'ಆಟಗಾರ' ಚಿತ್ರ ಬಿಡುಗಡೆಗೂ ಮುಂಚೆ ಖಾಸಗಿ ಟಿವಿ ಚಾನಲ್ ಒಂದಕ್ಕೆ ಹೆಚ್ಚಿನ ರೇಟಿಗೆ ಮಾರಾಟಗೊಂಡಿದೆಯಂತೆ.
ಇದು ಸದ್ಯಕ್ಕೆ ಸ್ಯಾಂಡಲ್ ವುಡ್ ನ ಮತ್ತೊಂದು ಅದ್ಭುತ ಅಂತ ಅಂದ್ರು ತಪ್ಪಾಗ್ಲಿಕ್ಕಿಲ್ಲ. ಯಾಕಂದ್ರೆ ದ್ವಾರಕೀಶ್ ಹಾಗೂ ನಿರ್ಮಾಪಕ ಯೋಗೀಶ್ ದ್ವಾರಕೀಶ್ ಅವರ ಈ ವರ್ಷದ ಬಹುನಿರೀಕ್ಷೆಯ ಚಿತ್ರ ಇದಾಗಿದೆ. [ವರಮಹಾಲಕ್ಷ್ಮಿ ಹಬ್ಬದಂದು ಸಂತೋಷ್ ನಲ್ಲಿ 'ಆಟಗಾರ'ನ ಅಸಲಿ ಆಟ]
ಇದೀಗ ಟಿವಿ ಚಾನಲ್ ಒಂದು ಭಾರಿ ಮೊತ್ತಕ್ಕೆ ಚಿತ್ರದ ಪ್ರಸಾರದ ಹಕ್ಕು ಖರೀದಿಸಿದ್ದು, ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೆ ಖುಷಿ ತಂದಿದೆ. ಜೊತೆಗೆ ಯುಕೆ ಯಲ್ಲೂ ಸೆಪ್ಪೆಂಬರ್ 5ರಿಂದ ಬಿಡುಗಡೆಯಾಗಿ 'ಆಟಗಾರ' ಕಮಾಲ್ ಮಾಡಲಿದ್ದಾನಂತೆ
ಅಂದಹಾಗೆ ಈ ಡೀಲ್ ಪಕ್ಕಾ ಆಗಿದ್ದು, 2 ದಿನಗಳ ಹಿಂದೆ. ಇನ್ನೂ ಕೆಲವು ಖಾಸಗಿ ಟಿವಿ ಚಾನಲ್ ಗಳು ದ್ವಾರಕೀಶ್ ಅವರ 'ಆಟಗಾರ' ಹಿಟ್ ಆಗುತ್ತೆ ಅಂತ ಬೆಟ್ಟಿಂಗ್ ಮಾಡಿದ್ದು, ಟಿವಿ ಸ್ಯಾಟಲೈಟ್ ಹಕ್ಕನ್ನು ಒಳ್ಳೆ ರೇಟಿಗೆ ಖರೀದಿಸಿದೆ ಎಂದು ಗಾಂಧಿನಗರದಲ್ಲಿ ಸುದ್ದಿಯಾಗಿದೆ.['ಆಟಗಾರ' ನ ಆಟಕ್ಕೆ ಬೋಲ್ಡ್ ಆದ ಸೆನ್ಸಾರ್ ಬೋರ್ಡ್]
'ಆ ದಿನಗಳು' ಖ್ಯಾತಿಯ ನಿರ್ದೇಶಕ ಕೆ.ಎಂ ಚೈತನ್ಯ ಆಕ್ಷನ್-ಕಟ್ ಹೇಳಿರುವ 'ಆಟಗಾರ' ಚಿತ್ರದ ಟ್ರೈಲರ್ ಭಾರಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಇನ್ನುಳಿದಂತೆ ಚಿತ್ರದಲ್ಲಿ ಚಂದನವನದ ಸ್ಟಾರ್ ಗಳ ದಂಡೇ ಇರುವುದರಿಂದ ಸಾಮಾನ್ಯವಾಗಿ ಪ್ರೇಕ್ಷಕರಲ್ಲಿ 'ಆಟಗಾರ' ನಿರೀಕ್ಷೆ ಹೆಚ್ಚಿಸಿದ್ದಾನೆ.[ವರಮಹಾಲಕ್ಷ್ಮಿ ಕೃಪೆಗಾಗಿ ಕಾದಿರುವ 'ಆಟಗಾರ' ದ್ವಾರಕೀಶ್!]
ಇನ್ನೂ ಇದೇ ಶುಕ್ರವಾರ (ಆಗಸ್ಟ್ 28) ವರಮಹಾಲಕ್ಷ್ಮಿ ಹಬ್ಬದಂದು 'ಆಟಗಾರ' ನ ಅಸಲಿ ಆಟ ಮುಖ್ಯ ಚಿತ್ರಮಂದಿರ ಸಂತೋಷ್ ನಲ್ಲಿ ಆರಂಭವಾಗಲಿದೆ. ಇನ್ನೂ ಚಿತ್ರ ಅದ್ಯಾವ ರೀತಿ ಪ್ರೇಕ್ಷಕರನ್ನು ರಂಜಿಸಬಹುದು ಅನ್ನೋದನ್ನ ನೋಡಲು ಚಿತ್ರ ಬಿಡುಗಡೆ ತನಕ ಕಾಯಬೇಕಿದೆ.


Click it and Unblock the Notifications













