twitter
    For Quick Alerts
    ALLOW NOTIFICATIONS  
    For Daily Alerts

    ಶಂಕರ್ ನಾಗ್ ಹುಟ್ಟುಹಬ್ಬ: ಕರಾಟೆ ಕಿಂಗ್ ನನ್ನು ಸ್ಮರಿಸಿದ ಗಣ್ಯರು

    |

    ಕನ್ನಡ ಸಿನಿಮಾರಂಗದ ಮರೆಯಲಾಗದ ಮಾಣಿಕ್ಯ, ಜೀವನೋತ್ಸಾಹಿ, ಕರಾಟೆ ಕಿಂಗ್ ಶಂಕರ್ ನಾಗ್ ಗೆ ಇಂದು (ನ.09) ಹುಟ್ಟುಹಬ್ಬದ ಸಂಭ್ರಮ. ಪ್ರತಿಭಾವಂತ ನಟ, ನಿರ್ದೇಶಕ, ತಂತ್ರಜ್ಞ ಮತ್ತು ಹೊಸ ಚಿಂತನೆಗಳ ಹರಿಕಾರ ಆಟೋರಾಜ ಶಂಕರ್ ನಾಗ್ ಅವರ 66ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.

    ಶಂಕರ್ ನಾಗ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಸಿನಿಮಾಗಳ ಮೂಲಕ ಕನ್ನಡ ಚಿತ್ರಪ್ರಿಯರ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಶಂಕರ್ ನಾಗ್ ಕಣ್ಮರೆಯಾಗಿ 3 ದಶಕಗಳೇ ಕಳೆದಿವೆ. ಆದರೆ ಕನ್ನಡಿಗರಲ್ಲಿ ಹೆಮ್ಮೆಯ ಶಂಕ್ರಣ್ಣನ ನೆನಪು ಹಸಿರಾಗೆ ಇದೆ. ಅದ್ಭುತ ಸಿನಿಮಾಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿ ಜೀವನವನ್ನು ಅರ್ಧಕ್ಕೆ ಬಿಟ್ಟು ಬಾರದ ಲೋಕಕ್ಕೆ ತೆರಳಿದ ಶಂಕರ್ ನನ್ನು ಸಿನಿಮಾ ಮತ್ತು ರಾಜಕೀಯ ಗಣ್ಯರು ಸ್ಮರಿಸಿದ್ದಾರೆ. 66ನೇ ಜನ್ಮದಿನದ ಸಮಯದಲ್ಲಿ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ಮುಂದೆ ಓದಿ...

    ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್

    ನಟ ಸುದೀಪ್

    ನಟ ಸುದೀಪ್

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕರಾಟೆ ಕಿಂಗ್ ಶಂಕರ್ ನಾಗ್ ಜನ್ಮದಿನವನ್ನು ಸ್ಮರಿಸಿದ್ದಾರೆ. ಶಂಕ್ರಣ್ಣನ ಜನ್ಮದಿನದ ಸವಿ ನೆನಪು ಎಂದು ಬರೆದು, ಆಟೋರಾಜನ ಫೋಟೋವನ್ನು ಶೇರ್ ಮಾಡಿದ್ದಾರೆ. 'ಎಲ್ಲರಿಗೂ ಹೀರೋ' ಕ್ಯಾಪ್ಷನ್ ಹಾಕಿದ್ದಾರೆ. ಸುದೀಪ್ ವಿಶ್ ಮಾಡುತ್ತಿದ್ದಾರೆ ಅಭಿಮಾನಿಗಳು ಸಹ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.

    ನಟ ಧನಂಜಯ್

    ನಟ ಧನಂಜಯ್

    ಸ್ಯಾಂಡಲ್ ವುಡ್ ನ ಡಾಲಿ ಖ್ಯಾತಿಯ ಧನಂಜಯ್ ಸಹ ಶಂಕರ್ ನಾಗ್ ನನ್ನು ಸ್ಮರಿಸಿದ್ದಾರೆ. ಶಂಕರ್ ನಾಗ್ ಫೋಟೋ ಶೇರ್ ಮಾಡಿ, ಲೆಜೆಂಡ್ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹಾರ್ಟ್ ಇಮೋಜಿಯನ್ನು ಹಾಕಿ ಶಂಕರ್ ನಾಗ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    ಬಿ ಸಿ ಪಾಟೀಲ್

    ಬಿ ಸಿ ಪಾಟೀಲ್

    ಸ್ಯಾಂಡಲ್ ವುಡ್ ನ ಕೌರವ ಎಂದೇ ಖ್ಯಾತಿ ಗಳಿಸಿರುವ ನಟ ಮತ್ತು ರಾಜಕಾರಣಿ ಬಿ ಸಿ ಪಾಟೀಲ್ ಶಂಕರ್ ನನ್ನು ಸ್ಮರಿಸಿದ್ದಾರೆ. 'ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ಬರಹಗಾರ, ರಂಗಕರ್ಮಿ ಹಾಗೂ ಕೋಟ್ಯಂತರ ಸಿನಿರಸಿಕರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದ ದಿವಂಗತ ಶ್ರೀ ಶಂಕರನಾಗ್ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ನಮನಗಳು.' ಎಂದು ಟ್ವೀಟ್ ಮಾಡಿದ್ದಾರೆ.

    ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡಲು ಒತ್ತಾಯ

    ಸಚಿವ ಜಗದೀಶ್ ಶೆಟ್ಟರ್

    ಸಚಿವ ಜಗದೀಶ್ ಶೆಟ್ಟರ್

    ಸಿನಿ ಗಣ್ಯರು ಮಾತ್ರವಲ್ಲ ರಾಜಕೀಯ ವ್ಯಕ್ತಿಗಳು ಸಹ ಶಂಕರ್ ನಾಗ್ ಜನ್ಮದಿನವನ್ನು ಸ್ಮರಿಸಿದ್ದಾರೆ. ಜಗದೀಶ್ ಶೆಟ್ಟರ್, 'ಕನ್ನಡ ಚಲನಚಿತ್ರರಂಗದ ಮೇರುನಟ, ನಿರ್ದೇಶಕ ದಿವಂಗತ ಶ್ರೀ ಶಂಕರ್ ನಾಗ್ ಅವರ ಜನ್ಮದಿನದಂದು ಗೌರವ ನಮನಗಳು.' ಎಂದು ಟ್ವೀಟ್ ಮಾಡಿದ್ದಾರೆ.

    ಉಪಮುಖ್ಯ ಮಂತ್ರಿ ಡಾ.ಸಿ ಅಶ್ವತ್ಥನಾರಾಯಣ

    ಉಪಮುಖ್ಯ ಮಂತ್ರಿ ಡಾ.ಸಿ ಅಶ್ವತ್ಥನಾರಾಯಣ

    'ಮಾಲ್ಗುಡಿ ಡೇಸ್ ನ 'ವೆಂಕಟೇಶ್', ಅಭಿಮಾನಿಗಳ ಪಾಲಿನ ನೆಚ್ಚಿನ 'ಆಟೋರಾಜ' ಕನ್ನಡ ಚಿತ್ರರಂಗದ ದಂತಕಥೆ ಶಂಕರ್ ನಾಗ್ ಅವರ ಜನ್ಮದಿನವಾದ ಇಂದು ಅವರ ಅಮೋಘ ಕೊಡುಗೆಗಳನ್ನು ಸ್ಮರಿಸೋಣ.' ಎಂದಿದ್ದಾರೆ. ಅವರು ಮಾಡಿದ ಆದಷ್ಟೂ ಪಾತ್ರಗಳಲ್ಲಿ ಹಾಗೂ ನಿರ್ದೇಶಿಸಿದ ಸಿನಿಮಾಗಳಲ್ಲಿ ನಿಮ್ಮ ನೆಚ್ಚಿನ ಪ್ರದರ್ಶನ ಯಾವುದು? ಎಂದು ಪ್ರಶ್ನೆ ಮಾಡಿದ್ದಾರೆ.

    Recommended Video

    ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada
    ಸಿ ಟಿ ರವಿ

    ಸಿ ಟಿ ರವಿ

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, 'ತನ್ನ ವಿನೂತನ ಚಿಂತನೆಗಳಿಂದ, ಅದ್ಭುತ ನಟನೆಯಿಂದ, ಕ್ರಿಯಾಶೀಲತೆಯಿಂದ ಚಿತ್ರರಂಗಕ್ಕೆ ಹೊಸ ರೂಪ ನೀಡಿ ಇಂದು ನಮ್ಮೊಂದಿಗೆ ನೆನಪಾಗಿ ಉಳಿದಿರುವ ಮೇರು ನಟ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಅವರ ಸಾಧನೆಗಳನ್ನು ನೆನೆಯೋಣ.' ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.

    English summary
    Shankar Nag Birth Anniversary: Film stars And Politicians remember the legendary actor Shankar nag.
    Monday, November 9, 2020, 11:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X