'ಬಾಟಲ್ ಕ್ಯಾಪ್ ಚಾಲೆಂಜ್' ಸ್ವೀಕರಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

ಚಿತ್ರರಂಗದಲ್ಲಿ ಬಾರಿ ಸದ್ದು ಮಾಡುತ್ತಿದೆ ಬಾಟಲ್ ಕ್ಯಾಪ್ ಚಾಲೆಂಜ್. ಇದೇನಿದು ಬಾಟಲ್ ಕ್ಯಾಪ್ ಚಾಲೆಂಜ್ ಅಂತ ಅಚ್ಚರಿ ಪಡುತ್ತಿದ್ದೀರಾ. ಈಗಾಗಲೆ ಹಮ್ ಫಿಟ್ ತೊ ಇಂಡಿಯಾ ಫಿಟ್ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೇಶ ವಿದೇಶಗಳಲ್ಲಿ ಈ ಚಾಲೆಂಜ್ ಭಾರಿ ಸದ್ದು ಮಾಡಿತ್ತು. ಅಲ್ಲದೆ ಅನೇಕ ನಟ ನಟಿಯರು ತಮ್ಮ ಫಿಟ್ ನೆಸ್ ನ ಗುಟ್ಟನ್ನು ಈ ಮೂಲಕ ರಿವೀಲ್ ಮಾಡಿದ್ದರು.

ಈಗ ಅಂತಹದೆ ಮತ್ತೊಂದು ಚಾಲೆಂಜ್ ಸದ್ದು ಮಾಡುತ್ತಿದೆ. ಅದೆ ಬಾಟಲ್ ಕ್ಯಾಪ್ ಚಾಲೆಂಜ್. ಹಾಗಂದ್ರೆ ಬಾಟಲ್ ಕ್ಯಾಪ್ ಅನ್ನು ಜಂಪ್ ಮಾಡಿ ಕಾಲಿನ ಬೆರಳಿನಿಂದ ತೆಗೆಯುವುದು. ಈ ಚಾಲೆಂಜ್ ಈಗಾಗಲೆ ಅನೇಕ ಜನ ಮಾಡುತ್ತಿದ್ದಾರೆ.

ಹಾಲಿವುಡ್ ನಿಂದ ಪ್ರಾರಂಭವಾದ ಈ ಚಾಲೆಂಜ್ ಸ್ಯಾಂಡಲ್ ವುಡ್ ವರೆಗೂ ಫೇಮಸ್ ಆಗಿದೆ. ಬಾಟಲ್ ಕ್ಯಾಪ್ ಚಾಲೆಂಜ್ ಅನ್ನು ಸ್ಯಾಂಡಲ್ ವುಡ್ ನ ಅನೇಕ ನಟರು ಸ್ವೀಕರಿಸಿದ್ದಾರೆ. ನಟ-ನಟಿಯರು ಫಿಟ್ ನೆಸ್ ಗೆ ಸಾಕಷ್ಟು ಒತ್ತು ನೀಡುತ್ತಾರೆ. ಗಂಟೆಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡುವ ಸೆಲೆಬ್ರಿಟಿಗಳು ಇಂತಹ ಚಾಲೆಂಜ್ ಗಳನ್ನು ಹಾಕಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ಗಣೇಶ್

ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ಗಣೇಶ್

ಬಾಟಲ್ ಕ್ಯಾಪ್ ಚಾಲೆಂಜ್ ಅನ್ನು ಸ್ಯಾಂಡಲ್ ವುಡ್ ನಟ ಗಣೇಶ್ ಸ್ವೀರಿಸಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ಗಣಿ ಕಾಲಿನ ಮೂಲಕ ಬಾಟಲ್ ಕ್ಯಾಪ್ ಓಪನ್ ಮಾಡಿ ಚಾಲೆಂಜ್ ಗೆದ್ದಿದ್ದಾರೆ. ಈಗಾಗಲೆ ಮುವಾಯ್ ಥಾಯ್ ಸಮರ ಕಲೆಯನ್ನು ಕಲಿತ್ತಿರುವ ಗಣೇಶ್, ಈ ಸಮರಕಲೆಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಜೊತೆ ಸಾಕಷ್ಟು ವರ್ಕೌಟ್ ಮಾಡಿ ಫಿಟ್ ಇರುವ ಗಣಿ ಬಾಟಲ್ ಕ್ಯಾಪ್ ಅನ್ನು ಕಾಲಿನಲ್ಲಿ ಒದ್ದು ತೆಗೆದು ಸೈ ಎನಿಕೊಂಡಿದ್ದಾರೆ.

ಚಾಲೆಂಜ್ ಸ್ವೀಕರಿಸಿದ ಅರ್ಜುನ್ ಸರ್ಜಾ

ಚಾಲೆಂಜ್ ಸ್ವೀಕರಿಸಿದ ಅರ್ಜುನ್ ಸರ್ಜಾ

ನಟ ಅರ್ಜುನ್ ಸರ್ಜಾ ಕೂಡ ಈ ಸ್ಟಂಟ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ನೋಡುವಷ್ಟು ಸುಲಭವೇನು ಅಲ್ಲ ಎನ್ನುವುದು ಸ್ಟಂಟ್ ಮಾಡುವರಿಗೆ ಮಾತ್ರ ಗೊತ್ತಿರುತ್ತೆ. ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡುವ ಅರ್ಜುನ್ ಸರ್ಜಾ ಬಾಟಲ್ ಕ್ಯಾಪ್ ಅನ್ನು ಕಾಲಿನಿಂದ ಒದ್ದು ಓಪನ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕ್ಯಾಪ್ ಓಪನ್ ಮಾಡಿದ ಚಿರಂಜೀವಿ ಸರ್ಜಾ

ಕ್ಯಾಪ್ ಓಪನ್ ಮಾಡಿದ ಚಿರಂಜೀವಿ ಸರ್ಜಾ

ನಟ ಚಿರಂಜೀವಿ ಸರ್ಜಾ ಕೂಡ ಈ ಚಾಲೆಂಜ್ ಅನ್ನು ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಚಿರು ಸರ್ಜಾ ಜಂಪ್ ಮಾಡಿ ಕಾಲಿನಿಂದ ಬಾಟಲ್ ಕ್ಯಾಪ್ ಅನ್ನು ತೆಗೆದಿದ್ದಾರೆ. ಈ ಸಾಹಸವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಸ್ಟಂಟ್

ಅಕ್ಷಯ್ ಕುಮಾರ್ ಸ್ಟಂಟ್

ಬಾಲಿವುಡ್ ನಲ್ಲಿ ಮೊದಲು ಅಕ್ಷಯ್ ಕುಮಾರ್ ಈ ಸ್ಟಂಟ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸಳೆದಿದ್ದರು. ಜಂಪ್ ಮಾಡಿ ಕಾಲಿನಿಂದ ಬಾಟಲ್ ಕ್ಯಾಪ್ ಓಪನ್ ಮಾಡಿ ಅಚ್ಚರಿ ಮೂಡಿಸಿದ್ದರು. ಆನಂತರ ಈ ಸ್ಟಂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೇರೆ ಬೇರೆ ಭಾಷೆಯ ಸ್ಟಾರ್ಸ್ ಈ ಸ್ಟಂಟ್ ಮಾಡುವ ಜೊತೆಗೆ ಅಭಿಮಾನಿಗಳು ಕೂಡ ಈ ಸ್ಟಂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಹಾಲಿವುಡ್ ನಟನಿಂದ ಪ್ರಾರಂಭವಾದ ಚಾಲೆಂಜ್

ಹಾಲಿವುಡ್ ನಟನಿಂದ ಪ್ರಾರಂಭವಾದ ಚಾಲೆಂಜ್

ಬಾಟಲ್ ಕ್ಯಾಪ್ ಓಪನ್ ಚಾಲೆಂಜ್ ಮೊದಲು ಪ್ರಾರಂಭವಾಗಿದ್ದು ಹಾಲಿವುಡ್ ನಿಂದ. ಹಾಲಿವುಡ್ ನ ಖ್ಯಾತ ನಟ ಜಾಸನ್ ಸ್ವತಂ ಅವರಿಂದ ವೈರಲ್ ಆಗಿದೆ ಈ ಸಾಹಸ. ಬಾಟಲ್ ಕ್ಯಾಪ್ ಓಪನ್ ಮಾಡಿ ನಂತರ ಅಕ್ಷಯ್ ಕುಮಾರ್ ಗೆ ಚಾಲೆಂಜ್ ಹಾಕಿದ್ದರು. ಬಾಲಿವುಡ್ ಕಿಲಾಡಿ ಈ ಚಾಲೆಂಜ್ ಸ್ವೀಕರಿಸಿ ಸೈ ಎನಿಸಿಕೊಂಡ ನಂತರ ಸಿಕ್ಕಾಟಪಟ್ಟೆ ವೈರಲ್ ಆಗಿದೆ.

More from Filmibeat

English summary
Kannada actor Ganesh, Actor Arjun sarja, chiranjeevi sarja and many Sandalwood stars are accepted Bottle cap challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X