'ವಿಶ್ವ ತಂದೆಯರ ದಿನ'ದಂದು ಅಗಲಿದ ತಂದೆಯನ್ನು ನೆನೆದ ಕನ್ನಡ ತಾರೆಯರು

By Harshitha

Recommended Video

'ವಿಶ್ವ ತಂದೆಯರ ದಿನ'ದಂದು ತಮ್ಮ ಪ್ರೀತಿಯ ತಂದೆಯನ್ನು ನೆನೆದ ನಟ-ನಟಿಯರು..! | Filmibeat Kannada

'ಅಪ್ಪ' ಎನ್ನುವ ಪದದಲ್ಲಿ ಅತೀವ ಒಲವಿದೆ... ಸಾವಿರ ಆನೆಗಳ ಬಲವಿದೆ. ಭಯ ಆದಾಗ ಮುಗ್ಧ ಮಕ್ಕಳಿಗೆ ಧೈರ್ಯ ತುಂಬಿ, ಮಾರ್ಗದರ್ಶನ ನೀಡುವ ತಂದೆಗೆ ಒಂದು ಸಲಾಂ ಸಲ್ಲಿಸುವುದಕ್ಕೆ 'ವಿಶ್ವ ತಂದೆಯರ ದಿನ' ಬಂದೇ ಬಿಟ್ಟಿದೆ.

ಈ ದಿನವನ್ನ ಅದೆಷ್ಟು ಮಂದಿ ಆಚರಿಸುತ್ತಾರೋ, ಇಲ್ವೋ ಗೊತ್ತಿಲ್ಲ. ಇಂದು ತಮ್ಮ ತಂದೆಗೆ ಅದೆಷ್ಟು ಮಕ್ಕಳು ಒಂದು ಥ್ಯಾಂಕ್ಸ್ ಹೇಳುತ್ತಾರೋ, ಇಲ್ವೋ ಅದೂ ಗೊತ್ತಿಲ್ಲ. ಆದ್ರೆ, ಈ ದಿನ ಮೋಡದ ಮರೆಗೆ ಸರಿದ ತಮ್ಮ ತಂದೆಯನ್ನು ನೆನೆಯುತ್ತ ಲೆಕ್ಕವಿಲ್ಲದಷ್ಟು ಮಕ್ಕಳು ದುಃಖಿಸುತ್ತಿದ್ದಾರೆ. ಅದರಲ್ಲಿ ನಮ್ಮ ಕನ್ನಡ ತಾರೆಯರೂ ಕೂಡ ಹೊರತಾಗಿಲ್ಲ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ದೇಶಕ ದಿನಕರ್ ತೂಗುದೀಪ, ನಟಿ ಹರಿಪ್ರಿಯಾ, ನಿರ್ದೇಶಕ ನಂದ ಕಿಶೋರ್ ಹಾಗೂ ತರುಣ್ ಸುಧೀರ್... ಇವರೆಲ್ಲರಿಗೂ ತಂದೆ ಅಂದ್ರೆ ಈಗ ಕೇವಲ ನೆನಪು ಮಾತ್ರ. ಅಪ್ಪಂದಿರ ದಿನಾಚರಣೆಯಂದು ತಮ್ಮ ತಂದೆಯನ್ನು ನೆನೆಯುತ್ತಾ, ಇವರೆಲ್ಲ ಮಾಡಿರುವ ಟ್ವೀಟ್ ಗಳನ್ನ ಒಮ್ಮೆ ನೋಡಿಕೊಂಡು ಬನ್ನಿ...

ದರ್ಶನ್ ಮಾಡಿರುವ ಟ್ವೀಟ್ ಇದು

''ಅಪ್ಪ ಅಂದ್ರೆ ಸಾವಿರ ಆನೆಗಳ ಬಲ. ಮಕ್ಕಳ ಮೊದಲ ಹೀರೋ. ಎಲ್ಲರಿಗೂ ಅವರ ಋಣ ತೀರಿಸುವ ಅದೃಷ್ಟ ಸಿಗುವುದಿಲ್ಲ. ಅವರ ಮುಪ್ಪಿನಲ್ಲಿ ನೀವು ತಂದೆಯಾಗಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ಎಲ್ಲರಿಗೂ ಅಪ್ಪಂದಿರ ದಿನಾಚರಣೆಯ ಹಾರ್ದಿಕ ಶುಭಾಶಯಗಳು'' ಎಂದ ತಮ್ಮ ತಂದೆಯೊಂದಿಗೆ ಹಾಗೂ ತಮ್ಮ ಮಗನೊಂದಿಗೆ ಇರುವ ಫೋಟೋಗಳನ್ನು ದರ್ಶನ್ ಶೇರ್ ಮಾಡಿದ್ದಾರೆ.

ನಟಿ ಹರಿಪ್ರಿಯಾ ಮಾಡಿರುವ ಟ್ವೀಟ್ ನೋಡಿ...

''ಪ್ರತಿ ದಿನ ನಾನು ನಿಮ್ಮನ್ನ ಮಿಸ್ ಮಾಡಿಕೊಳ್ಳುವೆ ಅಪ್ಪ. ಆದ್ರೆ, ಇಂದು ಎಲ್ಲರೂ ತಮ್ಮ ತಂದೆ ಜೊತೆಗಿನ ಹೊಸ ಫೋಟೋಗಳನ್ನು ಶೇರ್ ಮಾಡುತ್ತಿರುವುದನ್ನ ನೋಡಿ ಹಿಂದೆಂದಿಗಿಂತಲೂ ನಾನು ನಿಮ್ಮನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿರುವೆ. ನಿಮ್ಮೊಂದಿಗೆ ನಾನು ಕಳೆದ ಪ್ರತಿ ಕ್ಷಣವೂ ಅಮೂಲ್ಯವಾದದ್ದು. ಎಲ್ಲ ತಂದೆಯರಿಗೂ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು'' - ಹರಿಪ್ರಿಯಾ

ಅಪ್ಪನನ್ನ ನೆನೆದ ದಿನಕರ್

''ಅಪ್ಪಂದಿರ ದಿನಾಚರಣೆಯ ಶುಭಾಶಯಗಳು'' ಎಂದು ಎಲ್ಲರಿಗೂ ಶುಭಾಶಯಗಳನ್ನು ಕೋರಿ ತಮ್ಮ ತಂದೆ ತೂಗುದೀಪ ಶ್ರೀನಿವಾಸ್ ರವರ ಫೋಟೋ ಹಾಗೂ ತಮ್ಮ ಮಕ್ಕಳೊಂದಿಗೆ ತಾವಿರುವ ಇರುವ ಫೋಟೋವನ್ನ ದಿನಕರ್ ತೂಗುದೀಪ ಶೇರ್ ಮಾಡಿದ್ದಾರೆ.

ತಂದೆಯ ನೆನಪಲ್ಲಿ ಮಕ್ಕಳು

ತಂದೆಯ ನೆನಪಲ್ಲಿ ಮಕ್ಕಳು

ಅಪ್ಪನ ಆಶೀರ್ವಾದದಿಂದ, ಅಪ್ಪ ನಡೆದ ಹಾದಿಯಲ್ಲೇ ನಡೆಯುತ್ತಿರುವ ತರುಣ್ ಸುಧೀರ್ ಹಾಗೂ ನಂದಕಿಶೋರ್ ಇಂದು ಅಪ್ಪಂದಿರ ದಿನಾಚರಣೆಯಂದು ತಂದೆಯನ್ನ ನೆನೆಸಿಕೊಳ್ಳದೇ ಇರಲಾರರು.

More from Filmibeat

English summary
Check out the Tweets of Challenging Star Darshan, Dinakar Thoogudeepa and Haripriya on the occasion of Father's Day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X