ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗಣೇಶ್ ಗೆ ಚಂದನವನದ ತಾರೆಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?
ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ಗಣಿ ನಟ ಗಣೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 42ನೇ ವಸಂತಕ್ಕೆ ಕಾಲಿಟ್ಟ ನಟ ಗಣೇಶ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಪರಿಣಾಮ ಅದ್ದೂರಿ ಜನ್ಮದಿನಾಚರಣೆಗೆ ಬ್ರೇಕ್ ಹಾಕಿದ್ದಾರೆ.
Recommended Video
ಪ್ರತೀವರ್ಷ ಹುಟ್ಟುಹಬ್ಬದಂದು ಗಣೇಶ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿರುತ್ತಿದ್ದರು. ನೆಚ್ಚಿನ ನಟನಿಗಾಗಿ ಕೇಕ್ ಕತ್ತರಿಸಿ ಹಾರ ಹಾಕಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಎಲ್ಲಾ ಆಚರಣೆಗೂ ಬ್ರೇಕ್ ಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿಯೆ ಹುಟ್ಟುಹಬ್ಬದ ಶುಭಹಾರೈಸಿ ಸಂತಸ ಪಡುತ್ತಿದ್ದಾರೆ. ಇನ್ನೂ ಗಣೇಶ್ ಹುಟ್ಟುಹಬ್ಬಕ್ಕೆ ಚಂದನವನದ ತಾರೆಯರು ಶುಭಹಾರೈಸುತ್ತಿದ್ದಾರೆ. ಯಾರೆಲ್ಲ ವಿಶ್ ಮಾಡಿದ್ದಾರೆ? ಮುಂದೆ ಓದಿ..

ನಾವಿಬ್ಬರು ನಾಣ್ಯದ ಎರಡುಮುಖ- ಜಗ್ಗೇಶ್
"ನಾವಿಬ್ಬರು ನಾಣ್ಯದ ಎರಡುಮುಖ. ಇವನು ಅಡಕಮಾರನಹಳ್ಳಿ ನಾನು ಜಡೆಮಾಯಸಂದ್ರ. ಇಬ್ಬರಿಗು ಪ್ರತಿಭೆಯೇ godfather. ನನ್ನಂತೆ ಇವನಿಗೂ ಜೋತಿಷ್ಯ ಶಾಸ್ತ್ರ ಇಷ್ಟದವಿಷಯ. ನನ್ನಂತೆ ಅಳೆದುತೂಗಿ ಜನಸೇರುತ್ತಾನೆ. ನನ್ನಂತೆ ಮೇಲೆ ನಗು ಒಳಗೆ ಒಬ್ಬನೆ ಜೀವಿಸುತ್ತಾನೆ. ನಮ್ಮಿಬ್ಬರನ್ನು ಅನ್ಯರು ಯಾಮಾರಿಸಲು ಸ್ವಲ್ಪಕಷ್ಟ. ಕಾರಣ ರಸ್ತೆಯಿಂದ ಬಂದವರು. ಹುಟ್ಟುಹಬ್ಬದ ಶುಭಾಶಯಗಳು" ಎಂದು ನವರಸ ನಾಯಕ ಜಗ್ಗೇಶ್ ವಿಶ್ ಮಾಡಿದ್ದಾರೆ.

ಯೋಗರಾಜ್ ಭಟ್
ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಕಾಂಬಿನೇಶನ್ ನಲ್ಲಿ ನಿರ್ದೇಶಕ ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯು ಒಂದು. ಮುಂಗಾರು ಮಳೆ, ಗಾಳಿಪಟ, ಮುಗುಳುನಗೆ ಸಿನಿಮಾಗಳನ್ನು ನೀಡಿದ ಈ ಜೋಡಿ ಈಗ ಮತ್ತೆ ಗಾಳಿಪಟಿ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಪ್ರೀತಿಯ ಗಣಿಗೆ ಯೋಗರಾಜ್ ಭಟ್ ವಿಶ್ ಮಾಡಿ ಗಾಳಿಪಟ-2 ಸಿನಿಮಾದ ಪೋಸ್ಟರ್ ಶೇರ್ ಮಾಡಿದ್ದಾರೆ. "ಪ್ರೀತಿಯ ಗಣಪನಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದಿದ್ದಾರೆ.

ಕಳೆ ಕುಗ್ಗದ ಚಿನ್ನ ಗೋಲ್ಡನ್ ಸ್ಟಾರ್ - ಸಂತೋಷ್ ಆನಂದ್ ರಾಮ್
ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಹ ಗಣೇಶ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಗಣೇಶ್ ಮತ್ತು ಸಂತೋಷ್ ಆನಂದ್ ರಾಮ್ ಇಬ್ಬರು ಒಟ್ಟಿಗೆ ಸಿನಿಮಾ ಮಾಡದಿದ್ದರು ಇಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. "ಕಳೆ ಕುಗ್ಗದ ಚಿನ್ನ ಗೋಲ್ಡನ್ ಸ್ಟಾರ್ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಹೇಳಿದ್ದಾರೆ.

ನಟ ಧನಂಜಯ್
"ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ ನಟ ಧನಂಜಯ್ ಸಹ ಶುಭಹಾರೈಸಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಗೋಲ್ಡನ್ ಸ್ಟಾರ್, ರಾಕ್ ಆನ್" ಎಂದು ಹೇಳಿದ್ದಾರೆ.

24 ಕ್ಯಾರೋಟ್ ಚಿನ್ನ- ಸಿಂಪಲ್ ಸುನಿ
"24 ಕ್ಯಾರೋಟ್ ಚಿನ್ನ, ಪಳ ಪಳ ಹೊಳಿಯೋ smile u ಸಖತ್. 24 hrs ವಿಭಿನ್ನ ತಳಮಳಗೊಳಿಸೊ style_u ಸಖತ್. ಪಟಪಟ-ಪಟಾಕಿನೆ ಫಟ-ಫಟಾ ಫಟಿಂಗನೆ ಇವ್ನು ಸುಮ್ನೆ ಕೊಡೋ ಚಮಕ್ ಸಖತ್ ಕೊಂಚ ದುಭಾರಿ ನಗು ಜಂಬುಸಾವಾರಿ. ಈಗ ನೀವು ನನ್ನ ಜೊತೆ ಹೇಳಿ" ಎಂದು ಚಿತ್ರದ ರ್ಯಾಪ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ವಿಶ್ ಮಾಡಿದ್ದಾರೆ.ಚಮಕ್, ಸಖತ್ ನಂತರ ಗಣೇಶ್ ಮತ್ತು ಸುನಿ ಮತ್ತೆ ಮೂರನೆ ಬಾರಿಗೆ ಒಂದಾಗುತ್ತಿದ್ದಾರೆ.


Click it and Unblock the Notifications











