ಸಾಹಸಸಿಂಹನ ನೆನೆದ ಸಿಎಂ ಮತ್ತು ಸ್ಯಾಂಡಲ್ ವುಡ್ ಸ್ಟಾರ್ಸ್

Recommended Video

ಸುದೀಪ್, ಪುನೀತ್, ಜಗ್ಗೇಶ್, ಗಣೇಶ್ ಎಲ್ಲರದ್ದು ಒಂದೇ ಮಾತು..?| Vishnuvardhan | Oneindia Kannada

ಸಾಹಸಸಿಂಹ ವಿಷ್ಣುವರ್ಧನ್ ಅವರ 70ನೇ ಜನ್ಮದಿನಾಚರಣೆಯನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಾಡಿನಾದ್ಯಂತ ವಿಷ್ಣುದಾದಾನ ಹುಟ್ಟುಹಬ್ಬದ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅಭಿಮಾನಿಗಳು ರಕ್ತ ದಾನ, ಅನ್ನ ದಾನ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿಷ್ಣುವರ್ಧನ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ. ನಾಯಕನಿಲ್ಲದ ಹಬ್ಬವನ್ನು ಅವರ ನೆನಪಿನಲ್ಲಿಯೆ ಆಚರಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ಸ್ಟಾರ್ ಸಹ ವಿಷ್ಣುದಾದಾನ ನೆನೆದು ಶುಭಕೋರುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ಟ್ವೀಟ್

ಸಿಎಂ ಯಡಿಯೂರಪ್ಪ ಟ್ವೀಟ್

"ಇಂದು ಕನ್ನಡ ‌ಚಿತ್ರರಂಗ ಕಂಡ ಮಹಾನ್ ನಟರಲ್ಲೊಬ್ಬರಾದ ಡಾ‌. ವಿಷ್ಣುವರ್ಧನ್ ಅವರ ಜನ್ಮದಿನ. ಮೇರು ನಟ ವಿಷ್ಣುವರ್ಧನ್ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ" ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ದಾದಾನ ನೆನಪಿಸಿಕೊಂಡ ಪುನೀತ್

ದಾದಾನ ನೆನಪಿಸಿಕೊಂಡ ಪುನೀತ್

ವಿಷ್ಣುವರ್ಧನ್ ಹಟ್ಟುಹಬ್ಬದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಷ್ಣುವರ್ಧನ್ ನೆನಪು ಮಾಡಿಕೊಂಡಿದ್ದಾರೆ. ಸಾಹಸಸಿಂಹನ ಬಗ್ಗೆ ಟ್ವೀಟ್ ಮಾಡಿರುವ ಅಪ್ಪು "ವಿಷ್ಣು ಸರ್ ಹುಟ್ಟುಹಬ್ಬದ ದಿನ ಅವರ ನೆನಪು" ಎಂದು ಹೇಳಿದ್ದಾರೆ.

ನಿಮ್ಮ ನೆನಪು ಸದಾ ಹಸಿರು

ನಿಮ್ಮ ನೆನಪು ಸದಾ ಹಸಿರು

ಗೋಲ್ಡನ್ ಸ್ಟಾರ್ ಗಣೇಶ್ ಸಹ ವಿಷ್ಣುವರ್ಧನ್ ನೆನಪು ಮಾಡಿಕೊಂಡಿದ್ದಾರೆ. "ಸಾಹಸಸಿಂಹ ಡಾ, ವಿಷ್ಣುವರ್ಧನ್ ಜನ್ಮದಿನದ ಸವಿನೆನಪು, ದಾದಾ ನಿಮ್ಮ ನೆನಪು ಸದಾ ಹಸಿರು" ಎಂದು ಬರೆದುಕೊಳ್ಳುವ ಜೊತೆಗೆ ವಿಷ್ಣುವರ್ಧನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಟ್ವಿಟ್ಟರ್ ಡಿಪಿಯಲ್ಲಿ ವಿಷ್ಣುವರ್ಧನ್ ಫೋಟೋ ಹಾಕಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಆತ್ಮೀಯ ಹೃದಯಗಳಲ್ಲಿ ನೀವು ಒಬ್ಬರು

ಆತ್ಮೀಯ ಹೃದಯಗಳಲ್ಲಿ ನೀವು ಒಬ್ಬರು

"ನೆನಪಿದೆ ಆ ದಿನ ನನ್ನ, ಹರಸಿದ ನಿಮ್ಮ ಮನ. ದೇಹತ್ಯಾಗ ನಶ್ವರ ಜಗದ ಸಹಜಕ್ರಿಯೆ. ಆದರೆ ಸವಿನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯಮಾತ್ರ. ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ ನೀವು ಒಬ್ಬರು. ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ. ಹು.ಹ. ಶುಭಾಷಯಗಳು ವಿಷ್ಣು ಸಾರ್" ಎಂದು ಜಗ್ಗೇಶ್ ಹೇಳಿದ್ದಾರೆ.

ಅನಾಥರಾಗಿದ್ದೀವಿ, ಬಹಳ ಬೇಗೆ ಹೋಗಿಬಿಟ್ಟಿರಿ

ಅನಾಥರಾಗಿದ್ದೀವಿ, ಬಹಳ ಬೇಗೆ ಹೋಗಿಬಿಟ್ಟಿರಿ

"ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಯೆಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ,ಪ್ರೀತಿಸುವ, ಅಭಿಮಾನಿಯಲೊಬ್ಬ. ಕಿಚ್ಚ" ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

More from Filmibeat

English summary
Sandalwood stars birthday wishes to Kannada senior actor Vishnuvardhan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X