ಮಂಡ್ಯ ಅಖಾಡದಲ್ಲಿ ಕಲಾವಿದರ ಜಾತ್ರೆ, ಯಾರ ಪರ ಯಾರಿದ್ದಾರೆ ಗೊತ್ತಾ?
Recommended Video

ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಲೋಕಸಭೆ ಕ್ಷೇತ್ರ ಮಂಡ್ಯ. ಉಳಿದೆಲ್ಲ ಕ್ಷೇತ್ರಗಳ ಚುನಾವಣಾ ಭರಾಟೆ ಒಂದೆಡೆಯಾದ್ರೆ ಮಂಡ್ಯದ ಚುನಾವಣೆ ಅಖಾಡ ಮತ್ತೊಂದೆಡೆ. ಮಂಡ್ಯ ರಾಜಕೀಯ ಅಖಾಡವನ್ನ ಮತ್ತಷ್ಟು ರಂಗೇರಿಸಿದ್ದು ಸ್ಯಾಂಡಲ್ ವುಡ್ ನಟರ ಅಬ್ಬರದ ಪ್ರಚಾರ.
ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರು ಮಂಡ್ಯದಲ್ಲಿ ಬೀಡು ಬಿಟ್ಟಿದ್ದಾರೆ. ದರ್ಶನ್, ಯಶ್ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವ ಮೂಲಕ ಮಂಡ್ಯ ಜನರಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷ, ಅಥವಾ ವ್ಯಕ್ತಿ ವಿರುದ್ಧ ಮಾತನಾಡದೆ, ವಿರೋಧಿಗಳಿಂದ ಎದುರಾಗುತ್ತಿರುವ ಟೀಕೆ ಟಿಪ್ಪಣಿಗಳನ್ನು ಸವಾಲಾಗಿ ಸ್ವೀಕರಿಸಿ ಮತ ಭೇಟೆಯಾಡುತ್ತಿದ್ದಾರೆ.
ದಿನದಿಂದ ದಿನಕ್ಕೆ ಮಂಡ್ಯದಲ್ಲಿ ಕಲಾವಿದರ ದಂಡು ಹೆಚ್ಚಾಗುತ್ತಿದೆ. ಈ ಮೊದಲು ದೊಡ್ಡಣ್ಣ ಮತ್ತು ರಾಕ್ ಲೈನ್ ವೆಂಕಟೇಶ್ ಜೊತೆಗೆ ಜೋಡೆತ್ತುಗಳಾಗಿ ದರ್ಶನ್ ಮತ್ತು ಯಶ್ ಮಂಡ್ಯ ಕಣಕ್ಕೆ ಇಳಿದ್ದಿದ್ದರು. ಇವರ ಜೊತೆಗೀಗ ಇನ್ನಷ್ಟು ನಟರು ಎಂಟ್ರಿ ಕೊಟ್ಟಿದ್ದಾರೆ. ಆ ನಟರು ಯಾರು? ಮುಂದೆ ಓದಿ..

ಮಂಡ್ಯದಲ್ಲೇ ಬೀಡುಬಿಟ್ಟ ದರ್ಶನ್
ಸುಮಲತಾ ಚುನಾವಣೆಗೆ ನಿಲ್ಲುವುದು ಬಹುತೇಕ ಖಚಿತ ಎಂದು ಗೊತ್ತಾಗುತ್ತಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದರು. ಅಂಬರೀಶ್ ದೊಡ್ಡ ಮಗನಾಗಿ ಚುನಾವಣೆ ಮುಗಿಯುವವರೆಗೂ ಸುಮಲತಾ ಪರವಾಗಿ ಪ್ರಚಾರ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರೀಕರಣದ ನಡುವೆಯೂ ದರ್ಶನ್ ಮಂಡ್ಯದಲ್ಲಿ ಸುಮಲತಾ ಪರ ಜೋರಾಗಿ ಪ್ರಚಾರ ಮಾಡುತ್ತಿದ್ದಾರೆ.

ಅಂಬರೀಶ್ ಮನೆ ಮಗನಾಗಿ ಯಶ್ ಪ್ರಚಾರ
ಸುಮಲತಾ ಅಂಬರೀಶ್ ಪರವಾಗಿ ನಟ ಯಶ್ ಇಂದಿನಿಂದ ಪ್ರಚಾರ ಪ್ರಾರಂಭಿಸಿದ್ದಾರೆ. ಮಂಡ್ಯದ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಸುಮಲತಾ ಪರ ಮತಯಾಚನೆ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಮತ್ತು ಯಶ್ ಇಬ್ಬರಿಗೆ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದ್ರೀಗ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಸುಮಲತಾ ಪರ ಪ್ರಚಾರ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸುಮಲತಾ ಅವರನ್ನು ಗೆಲ್ಲಿಸಲೇಬೇಕೆಂದು ಯಶ್ ಕೂಡ ಪಣತೊಟ್ಟು ನಿಂತಿದ್ದಾರೆ.

ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ
ಸುಮಲತಾ ಅವರ ಪ್ರತಿ ಹೆಜ್ಜೆಯಲ್ಲಿ ಜೊತೆಯಾಗಿ ನಿಂತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಾಥ್ ನೀಡುತ್ತಿದ್ದಾರೆ. ಸುಮಲತಾ ಪರ ಪ್ರಚಾರ ಮಾಡುವ ಜೊತೆಗೆ ಪ್ರತಿ ಸಮಾರಂಭ ಮತ್ತು ಸುಮಲತಾ ಅವರ ಟೆಂಪಲ್ ರನ್ ಗಳಲ್ಲಿಯೂ ಜೊತೆಗೆ ಇದ್ದು ಅವರನ್ನು ಗೆಲ್ಲಿಸಲೇ ಬೇಕೆಂದು ಹಠ ತೊಟ್ಟಿ ನಿಂತಿದ್ದಾರೆ. ಜೊತೆಗೆ ನಟ ದೊಡ್ಡಣ್ಣ ಕೂಡ ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.

ನಟ ಪ್ರೇಮ್ ಮತ್ತು ರವಿ ಚೇತನ್
ನಟ ನೆನಪಿರಲಿ ಪ್ರೇಮ್ ಮತ್ತು ರವಿಚೇತನ್ ಇಬ್ಬರು ಸುಮಲತಾ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ನಟ ದರ್ಶನ್ ಜೊತೆಯೇ ಇದ್ದು ಮಂಡ್ಯದ ಗ್ರಾಮಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಪಕ್ಷದ ಪರ ಗುರುತಿಸಿಕೊಳ್ಳದ ಪ್ರೇಮ್ ಆಪ್ತ ಪರ ಪ್ರಚಾರ ಮಾಡುವುದಾಗಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹೇಳಿದ್ದರು. ಅದರಂತೆ ಈ ಬಾರಿ ಸುಮಲತಾ ಪರವಾಗಿ ಪ್ರಚಾರ ಮಾಡಲು ಮಂಡ್ಯ ಕಣಕ್ಕೆ ಧುಮುಕಿದ್ದಾರೆ. ಇನ್ನು ರವಿಚೇತನ್ ಕೂಡ ದರ್ಶನ್ ಜೊತೆಯಲ್ಲಿಯೇ ಇದ್ದು ನಿನ್ನೆಯಿಂದನೇ ಪ್ರಚಾರ ಶುರು ಮಾಡಿಕೊಂಡಿದ್ದಾರೆ.

ಪ್ರಜಾಕೀಯ ಪ್ರಚಾರ ಮಾಡುತ್ತಿರುವ ಉಪೇಂದ್ರ
ಬಹುತೇಕ ಸ್ಟಾರ್ ನಟರು ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ ಇತ್ತ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕೀಯ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಿದ್ದಾರೆ. ಉತ್ತಮ ಪ್ರಜಾಕೀಯ ಪಾರ್ಟಿ ಘೋಷಣೆ ಮಾಡಿದಾಗಿನಿಂದಲೂ ಸಾಮಾಜಿಕ ಜಾಲತಾಣದ ಮೂಲಕ ಮಾತ್ರ ಪ್ರಚಾರ ಮಾಡುತ್ತಿದ್ದ ಉಪೇಂದ್ರ ಈಗ ಮಂಡ್ಯ, ಮೈಸೂರು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

'ಅಯೋಗ್ಯ' ಖ್ಯಾತಿಯ ಮಹೇಶ್
ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ಕೂಡ ಮಂಡ್ಯ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಮೂಲತಃ ಮಂಡ್ಯದವರೇ ಆದ ಮಹೇಶ್ ಸುಮಲತಾ ಅಂಬರೀಶ್ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ಮಹೇಶ್ ಸ್ನೇಹಿತರ ಜೊತೆ ಸೇರಿಕೊಂಡು ಮಂಡ್ಯದ ಕೆಲವು ಗ್ರಾಮಗಳಲ್ಲಿ ಸುಮಲತಾ ಅಂಬರೀಶ್ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ.


Click it and Unblock the Notifications











