ಕಾಫಿ ಕಿಂಗ್ ಸಿದ್ಧಾರ್ಥ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್ ವುಡ್ ಸ್ಟಾರ್ಸ್

Recommended Video

V G Siddhartha : ಸಿದ್ದಾರ್ಥ ಸಾವಿಗೆ ಸಂತಾಪ ಸೂಚಿಸಿದ ಸ್ಯಾಂಡಲ್ ವುಡ್ ನಟರು | Oneindia Kannada

ಖ್ಯಾತ ಉದ್ಯಮಿ, ಮಲೆನಾಡಿನ ಹೆಮ್ಮೆಯ ಪುತ್ರ, ಕಾಫಿ ಕಿಂಗ್ ಹೀಗೆ ನಾನಾಹೆಸರುಗಳಿಂದ ಬಣ್ಣಿಸಲ್ಪಡುವ ಕಾಫಿ ದೊರೆ ಸಿದ್ಧಾರ್ಥ ಹೆಗ್ಡೆ ಇನ್ನು ನೆನಪು ಮಾತ್ರ. ಯಶಸ್ವಿ ಉದ್ಯಮಿಯೊಬ್ಬರ ದುರಂತ ಸಾವಿಗೆ ಇಡೀ ಕರುನಾಡೆ ದುಃಖತಪ್ತವಾಗಿದೆ. ಸಾವಿರಾರು ಮಂದಿಗೆ ಉದ್ಯೋಗ ನೀಡಿ ಅನೇಕ ಯುವಕರ ಪಾಲಿಗೆ ದಾರಿದೀಪವಾಗಿದ್ದ ಸಿದ್ಧಾರ್ಥ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ಸಿದ್ಧಾರ್ಥ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ರಾಜಕೀಯ ಗಣ್ಯರು, ಉದ್ಯಮಿಗಳ ಜೊತೆಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿದ್ದಾರೆ. ಚಿತ್ರರಂಗದ ಅನೇಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಸಿದ್ಧಾರ್ಥ ಎಲ್ಲಿಯು ಪ್ರಚಾರ ಬಯಸಿದವರಲ್ಲ.

ಸಿದ್ಧಾರ್ಥ ಅವರ ಕೆಫೆ ಕಾಫಿ ಡೇಗೂ ಚಿತ್ರರಂಗಕ್ಕೂ ಒಂದು ಸಂಬಂಧವಿದೆ. ಚಿತ್ರರಂಗದ ಅನೇಕ ಗಣ್ಯರು ಇಲ್ಲಿ ಕೇವಲ ಕಾಫಿ ಮಾತ್ರ ಸವಿಯುತ್ತಿರಲಿಲ್ಲ. ಅದೆಷ್ಟೊ ಸಿನಿಮಾಗಳು ಹುಟ್ಟಿಗೆ ಕಾರಣವಾಗಿ ಕಾಫಿ ಡೇ. ಅದೆಷ್ಟೊ ಸಿನಿಮಾ ಕಥೆಗಳ ಮಾತುಕಥೆಗೆ ಕೆಫೆ ಕಾಫಿ ಡೇ ಅಡ್ಡವಾಗಿತ್ತು ಎನ್ನುವುದು ನಿಜ. ಆದ್ರಿವತ್ತು ಕೆಫೆ ಕಾಫಿ ಡೇ ಮಾಲಿಕ ದುರಂತವಾಗಿ ಅಂತ್ಯ ಕಂಡಿದ್ದಾರೆ. ನಾಡಿನ ಹೆಮ್ಮೆಯ ಪುತ್ರನ ನಿಧನಕ್ಕೆ ಸ್ಯಾಂಡಲ್ ವುಡ್ ಕೂಡ ಕಂಬನಿ ಮಿಡಿದಿದೆ.

ತೀವ್ರ ದುಃಖಿತನಾಗಿದ್ದೀನಿ: ಪುನೀತ್ ರಾಜ್ ಕುಮಾರ್

ತೀವ್ರ ದುಃಖಿತನಾಗಿದ್ದೀನಿ: ಪುನೀತ್ ರಾಜ್ ಕುಮಾರ್

ಸಿದ್ಧಾರ್ಥ ನಿಧನಕ್ಕೆ ಪುನೀತ್ ರಾಜ್ ಕುಮಾರ್ ಸಂತಾಪ ಸೂಚಿಸಿದ್ದಾರೆ. "ವಿ ಜಿ ಸಿದ್ಧಾರ್ಥ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೀನಿ. ನಮ್ಮ ಕಾಲದ ಮಹಾನ್ ಕ್ರಿಯಾತ್ಮಕ ಉದ್ಯಮಿ. ಕಾಫಿಯಿಂದ ಅನೇಕರಿಗೆ ಹೇಗೆ ಉದ್ಯೋಗಾವಕಾಶ ನೀಡಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ಉದ್ಯಮಿಯಾಗಿ ಅವರ ಪಯಣ ಮತ್ತು ಚಾರಿಟಿಗಳಿಗಾಗಿ ಅವರು ಮಾಡಿದ ಕೆಲಸ ಯಾವಾಗಲು ನೆನಪಿನಲ್ಲಿ ಉಳಿಯುತ್ತೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.

ಚುನಾವಣೆಗೆ ನಿಂತಾಗ ಸಹಾಯ ಮಾಡಿದವರು: ಜಗ್ಗೇಶ್

ಚುನಾವಣೆಗೆ ನಿಂತಾಗ ಸಹಾಯ ಮಾಡಿದವರು: ಜಗ್ಗೇಶ್

"ನನ್ನ ಗುರುಗಳು ಎಸ್ ಎಂ ಕೃಷ್ಣ ರವರಿಂದ ಪರಿಚಯವಾದ ಮಹೋದಯ. ನಾನು 2004 ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಹುಡುಕಿ ಬಂದು ಚುನಾವಣೆಗೆ ಸಹಾಯ ಮಾಡಿ ಹೋದರು. ಅನೇಕಬಾರಿ ದೂರವಾಣಿ ಕರೆ ಮಾಡಿ ನನ್ನ ವಿನಂತಿಗೆ, ನನ್ನ ಅನೇಕ ಹಿಂಬಾಲಕರಿಗೆ #coffeeday ಲಿ ಕೆಲಸಕೂಟ್ಟವರು. ನನ್ನ ಗುರುಗಳು ಎಸ್ ಎಂ ಕೃಷ್ಣ ಮತ್ತು ಅವರ ಕುಟುಂಬಕ್ಕೆ ಈ ನೋವು ಅರಗಿಸುವ ಶಕ್ತಿ ರಾಯರು ನೀಡಲಿ.. ಓಂ ಶಾಂತಿ" ಎಂದು ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಈ ರೀತಿ ಮನಸ್ಸು ಮಾಡಬಾರದಿತ್ತು: ಉಪೇಂದ್ರ

ಈ ರೀತಿ ಮನಸ್ಸು ಮಾಡಬಾರದಿತ್ತು: ಉಪೇಂದ್ರ

"ನಿಮ್ಮ ಕನಸನ್ನು ನನಸು ಮಾಡಿ ಆ ಸುಂದರ ಸೂರಿನಡಿ ಲಕ್ಷಾಂತರ ಯುವಕ ಯುವತಿಯರು ಕನಸು ಕಾಣುವಂತೆ ಮಾಡಿದ ಶ್ರೇಷ್ಠ ಉದ್ಯಮಿ ಸಿದ್ದಾರ್ಥ. ಬುದ್ದನಾಗುವ ಮುಂಚೆ ಈ ರೀತಿ ಮನಸ್ಸು ಮಾಡಬಾರದಿತ್ತು. ನಮ್ಮ ಕರುನಾಡಿನ ಕಾಫಿಯನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಿದ ಒಡೆಯನ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೆ ಹುಟ್ಟಿ ಬನ್ನಿ #CCDFounder" ಎಂದು ಉಪೇಂದ್ರ ಸಿದ್ಧಾರ್ಥ್ ಅವರ ಬಗ್ಗೆ ಹೇಳಿದ್ದಾರೆ.

ಎಂದೆಂದಿಗೂ ಸಿದ್ಧಾರ್ಥ್ ಜೀವಂತ- ರಘುರಾಮ್

ಎಂದೆಂದಿಗೂ ಸಿದ್ಧಾರ್ಥ್ ಜೀವಂತ- ರಘುರಾಮ್

"ಸಾವಿರಾರು ಕುಟುಂಬಕ್ಕೆ ಜೀವನ ಕಟ್ಟಿ ಕೊಟ್ಟ ಧೀಮಂತ. ಅವರು ಅನ್ನ ಕೊಟ್ಟ ಪ್ರತಿ ಸಂಸಾರದಲ್ಲೂ ಎಂದೆಂದಿಗೂ ಸಿದ್ದಾರ್ಥ್ ಸರ್ ಜೀವಂತ. #MissuSidharathSir A Lot Can Happen Over A Coffe"

More from Filmibeat

English summary
Sandalwood stars condolence to cafe coffee day owner Siddharth death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X