ರಾಕಿ ಭಾಯ್ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್ ವುಡ್ ತಾರೆಯರು
Recommended Video

ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ರಾಕಿ ಭಾಯ್ ಅಭಿಮಾನಿಗಳಿಗೆ ಸಂಭ್ರಮದ ಹಬ್ಬ. ಆದ್ರೆ, ಇವತ್ತು ಸಡಗರ-ಸಂಭ್ರಮ ಪಡದಿರಲು ಯಶ್ ನಿರ್ಧರಿಸಿದ್ದಾರೆ.
ಹೌದು, ಯಶ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕಾರಣ, ರೆಬೆಲ್ ಸ್ಟಾರ್ ಅಂಬರೀಶ್ ಅಗಲಿಕೆ. ಅಂಬರೀಶ್ ರನ್ನ ಕಳೆದುಕೊಂಡ ನೋವಿನಲ್ಲಿ ಇರುವ ಯಶ್, ತಮ್ಮ ಜನ್ಮದಿನಾಚರಣೆಗೆ ಬ್ರೇಕ್ ಹಾಕಿದ್ದಾರೆ. ಆದರೂ, ಯಶ್ ಗೆ ಶುಭಾಶಯ ಕೋರುವವರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ.
ಸೋಷಿಯಲ್ ಮೀಡಿಯಾದಲ್ಲಂತೂ ಯಶ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ನಟ ಮನೋರಂಜನ್, ನಿರ್ದೇಶಕ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ಯಶ್ ಗೆ ಶುಭಾಶಯ ಸಂದೇಶ ಕಳುಹಿಸಿದ್ದಾರೆ. ಬೇಕಾದ್ರೆ ನೀವೇ ನೋಡಿರಿ...
ಶುಭಾಶಯ ಕೋರಿದ ಕನಸಿನ ರಾಣಿ
''ಹುಟ್ಟುಹಬ್ಬದ ಶುಭಾಶಯಗಳು ಯಶ್. ನಿಮಗೆ ಆರೋಗ್ಯ ಮತ್ತು ಸಂತಸವನ್ನ ಆ ದೇವರು ನೀಡಲಿ'' ಎಂದು ಕನಸಿನ ರಾಣಿ ಮಾಲಾಶ್ರೀ ರಾಮು ಟ್ವೀಟ್ ಮಾಡಿದ್ದಾರೆ.
ವಿಶ್ ಮಾಡಿದ ಶ್ರೀನಿಧಿ ಶೆಟ್ಟಿ
''ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮತ್ತೊಂದು ರಾಕಿಂಗ್ ವರ್ಷ ನಿಮ್ಮದಾಗಲಿ'' ಎಂದು 'ಕೆ.ಜಿ.ಎಫ್' ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಶುಭ ಹಾರೈಸಿದ ವಿಜಯ್ ಕಿರಗಂದೂರು
''ನಮ್ಮ 'ಕೆ.ಜಿ.ಎಫ್'ನ ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ಗೆ ಹಾರ್ದಿಕ ಶುಭಾಶಯಗಳು. ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಎಲ್ಲಾ ರಂಗಗಳಲ್ಲೂ, ನಿಮ್ಮ ಮುಂದಿನ ಕಾರ್ಯಗಳಲ್ಲೂ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇನೆ'' ಅಂತ ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿದ್ದಾರೆ.
ಶುಭಾಶಯ ತಿಳಿಸಿದ 'ರಾಮಾಚಾರಿ' ನಿರ್ದೇಶಕ
''ನಮ್ಮ ನೆಚ್ಚಿನ ರಾಕಿಂಗ್ ಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯಗಳು'' ಅಂತ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.
ವಿಶ್ ಮಾಡಿದ ಪವನ್ ಒಡೆಯರ್
''ಯಶ್ ಬಾಸ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಹೆಚ್ಚು ಹೆಚ್ಚು ಯಶಸ್ವಿ ವರ್ಷಗಳು ನಿಮ್ಮದಾಗಲಿ'' ಎಂದು ನಿರ್ದೇಶಕ ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ.
ಶುಭ ಕೋರಿದ ಮನೋರಂಜನ್
''ಹ್ಯಾಪಿ ಹ್ಯಾಪಿ ಬರ್ತಡೇ ಯಶ್. ಹತ್ತು ವರ್ಷಗಳಿಂದ ನಿಮ್ಮನ್ನ ನಾನು ಬಲ್ಲೆ. ಆಗ ಹೇಗಿದ್ರೋ, ಈಗಲೂ ಹಾಗೇ ಇದ್ದೀರಾ. ಒಂದು ಸ್ವಲ್ಪವೂ ಬದಲಾಗಿಲ್ಲ. ಯಶಸ್ಸು ಗಳಿಸಬೇಕು ಎಂಬ ಛಲ ನಿಮ್ಮನ್ನ ದೊಡ್ಡ ಸೂಪರ್ ಸ್ಟಾರ್ ಆಗಿ ಮಾಡಿದೆ'' ಎಂದು ಮನೋರಂಜನ್ ರವಿಚಂದ್ರನ್ ಟ್ವೀಟ್ ಮಾಡಿದ್ದಾರೆ.
ಮಾಸ್ಟರ್ ಪೀಸ್ ಗೆ ಶುಭಾಶಯ
'' ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್. ಒಂದು ಆನೆಯನ್ನು ಹೊಡೆಯುವ ಗಜಕೇಸರಿ. ಎದೆಯಲ್ಲಿ ಕಲ್ಲಿಟ್ಟುಕೊಂಡು ದುನಿಯಾ ಬೇಕು ಎನ್ನುತ್ತಿರುವ ರಾಕಿ ಭಾಯ್ ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಸದಾ ಯಶಸ್ವಿಯಾಗಿರಿ'' ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.
ಶುಭ ಹಾರೈಸಿದ ರಶ್ಮಿಕಾ ಮಂದಣ್ಣ
''ಹುಟ್ಟುಹಬ್ಬದ ಶುಭಾಶಯಗಳು ಯಶ್ ಸರ್'' ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.


Click it and Unblock the Notifications











