ಚಿರು ಸರ್ಜಾ ನಿಧನ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

ನಟ ಚಿರಂಜೀವಿ ಸರ್ಜಾ ನಿಧನದ ಸುದ್ದಿ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವೊಂಟು ಮಾಡಿದೆ. 39ನೇ ವಯಸ್ಸಿನಲ್ಲಿಯೇ ಚಿರು ಜೀವನವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅರಗಿಸಿಕೊಳ್ಳಲಾಗದ ಚಿರು ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

Recommended Video

ಕಡೇ ಬಾರಿ ಚಿರು ಅವರನ್ನು ನೋಡಲು ಬಂದ ಉಪೇಂದ್ರ | Chiranjeevi Sarja | Upendra | FILMIBEAT KANNADA

ಇಂದು ಮದ್ಯಾಹ್ನ 2ಗಂಟೆ ಸುಮಾರಿಗೆ ಚಿರಂಜೀವಿ ಸರ್ಜಾಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿಯೆ ಚಿರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಚಿರು ಪಾರ್ಥೀವಶರೀರ ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿದ್ದು, ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಚಿರು ದಿಢೀರ್ ಸಾವಿನ ಸುದ್ದಿಯನ್ನು ಕೇಳಿ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್

"ಚಿರಂಜೀವಿ ಸರ್ಜಾ ಇನ್ನಿಲ್ಲ ಎನ್ನುವ ಸುದ್ದಿ ಆಘಾತವುಂಟು ಮಾಡಿದೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.

ನಟ ದರ್ಶನ್

ನಟ ದರ್ಶನ್

"ಚಿರು ಅಕಾಲಿಕ ಮರಣದಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ವಿಧಿ ನಿಜವಾಗಿಯೂ ತುಂಬಾ ಕ್ರೂರ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಮೇಘನ ಹಾಗು ಸರ್ಜಾ ಕುಟುಂಬದವರಿಗೆ ನೀಡಲಿ. ಅವರ ಆತ್ನಕ್ಕೆ ಶಾಂತಿ ಸಿಗಲಿ" ಎಂದಿದ್ದಾರೆ.

ಶಾನ್ವಿ ಶ್ರೀವಾತ್ಸವ

ಶಾನ್ವಿ ಶ್ರೀವಾತ್ಸವ

"ಈ ಸುದ್ದಿಯನ್ನು ಸ್ವೀಕರಿಸಲು ನನಗೆ 30 ನಿಮಿಷಗಳು ಬೇಕಾಯಿತು. ಅತ್ಯಂತ ದುಃಖವಾಗುತ್ತಿದೆ ಮತ್ತು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.

ನಟ ಗಣೇಶ್

ನಟ ಗಣೇಶ್

"ಚಿರು ಇನ್ನು ಇಲ್ಲ ಎನ್ನುವ ಸುದ್ದಿ ಕೇಳಿ ಮನಸಿಗೆ ಬಹಳ ಬೇಸರವಾಗಿದೆ, ಈ ನೋವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬದವರಿಗೆ ದೇವರು ನೀಡಲಿ, ನಿಜಕ್ಕು ಸುದ್ದಿ ಕೇಳಿ ಹೃದಯಚಿದ್ರವಾಗಿದೆ. ಇನ್ನೂ 39 ವರ್ಷ ಅಷ್ಟೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

"ಸುದ್ದಿ ಕೇಳಿ ಹೃದಯ ಚಿದ್ರವಾಗಿದೆ. ನಿಜಕ್ಕು ನನ್ನ ಹೃದಯ ಒಡೆದುಹೋಗುತ್ತಿದೆ. ಇಷ್ಟು ಬೇಗ. ಆತ್ಮಕ್ಕೆ ಶಾಂತಿ ಸಿಗಲಿ. ನನಗೆ ಯಾವುದೆ ಪದ ಸಿಗುತ್ತಿಲ್ಲ" ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

ಕಬೀರ್ ದುಹಾನ್ ಸಿಂಗ್ ಮತ್ತು ಧನಂಜಯ್

ಕಬೀರ್ ದುಹಾನ್ ಸಿಂಗ್ ಮತ್ತು ಧನಂಜಯ್

"ಇದು ನಿಜಕ್ಕು ಆಘಾತಕಾರಿ ಸುದ್ದಿ ಮತ್ತು ನನ್ನ ಹೃದಯಚಿದ್ರವಾಗಿದೆ" ಎಂದು ಕಬೀರ್ ದುಹಾನ್ ಸಿಂಗ್ ಟ್ವೀಟ್ ಮಾಡಿದ್ದಾರೆ. "ಭರಿಸಲಾಗದ ನೋವು, ನಮ್ಮ ನೆನಪುಗಳಲ್ಲಿ ನೀನು ಸದಾ ಜೀವಂತ" ಎಂದು ಧನಂಜಯ್ ಹೇಳಿದ್ದಾರೆ.

ನಟ ಉಪೇಂದ್ರ

ನಟ ಉಪೇಂದ್ರ

"ಓ ವಿಧಿಯೇ ನೀನು ಇಷ್ಟೊಂದು ಕ್ರೂರಿಯೇ? ಚಿರಂಜೀವಿ ಸರ್ಜಾರ ಅಕಾಲಿಕ ಅಗಲಿಕೆಯನ್ನು ನಂಬಲು ಒಪ್ಪಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮೇಫನಾ ರಾಜ್ ಮತ್ತು ಸರ್ಜಾರವರ ಕುಟುಂಬಕ್ಕೆ ಈ ಆಘಾತದ ನೋವನ್ನು ಭರಿಸುವ ಶಕ್ತಿ ಆ ಆಂಜನೇಯ ಸ್ವಾಮಿ ನೀಡಬೇಕು RIP" ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

More from Filmibeat

English summary
Actor chiranjeevi sarja dies of heart Attack at the age of 39. Sandalwood stars mourns to chiranjeevi death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X