For Quick Alerts
  ALLOW NOTIFICATIONS  
  For Daily Alerts

  ಹೊಸದಾಗಿ ಕೊಡಗು ಕಟ್ಟಲು ಒಂದಾಯ್ತು ಸ್ಯಾಂಡಲ್ ವುಡ್

  By Pavithra
  |
  KCC Cricket 2018: ಹೆಮ್ಮೆ ಅನ್ನಿಸುತ್ತೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಆಲೋಚನೆಗಳು..! | Filmibeat Kannada

  ಕರ್ನಾಟಕ ಚಲನಚಿತ್ರ ಕಪ್ ಎರಡನೇ ಅವತರಣಿಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಹದಿನೈದು ದಿನಗಳಿಂದ ಕನ್ನಡ ಸಿನಿಮಾ ಕಲಾವಿದರು ಮೈದಾನಕ್ಕಿಳಿದು ತರಬೇತಿ ಆರಂಭ ಮಾಡಿದ್ದಾರೆ. ಚಿತ್ರೀಕರಣದಲ್ಲಿ ಸದಾ ಬ್ಯುಸಿ ಆಗಿರುವ ಸ್ಟಾರ್ ಗಳು ಕರ್ನಾಟಕ ಚಲನಚಿತ್ರ ಕಪ್ ಗಾಗಿಯೇ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡಲು ಸಿದ್ದರಾಗಿದ್ದಾರೆ.

  ವಿಶೇಷ ಎಂದರೆ ಈ ಬಾರಿ ಕಲಾವಿದರೆಲ್ಲರೂ ಬಿಡುವು ಮಾಡಿಕೊಂಡಿರುವುದು ಒಂದು ಒಳ್ಳೆ ಕೆಲಸಕ್ಕಾಗಿ. ಹೌದು ಕರ್ನಾಟಕ ಚಲನಚಿತ್ರ ಕಪ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಪ್ಟೆಂಬರ್ 8-9 ರಂದು ನಡೆಯಲಿರುವ ಕ್ರಿಕೆಟ್ ಪಂದ್ಯವನ್ನು ಅಭಿಮಾನಿಗಳು ಸಾಮಾನ್ಯ ಜನರು ಯಾರು ಬೇಕಾದರೂ ವೀಕ್ಷಣೆ ಮಾಡಬಹುದು.

  ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್ ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್

  ಎರಡು ದಿನ ನಡೆಯಲಿರುವ ಕ್ರಿಕೆಟ್ ನೋಡಲು ಟಿಕೆಟ್ ಮಾಡಲಾಗಿದ್ದು 50 ರೂಪಾಯಿ ಶುಲ್ಕ ನಿಗದಿ ಆಗಿದೆ. 50 ರೂಪಾಯಿ ಕೊಟ್ಟು ಟಿಕೆಟ್ ಕೊಂಡರೆ ಎರಡು ದಿನಗಳು ಸ್ಟಾರ್ ಗಳ ಆಟವನ್ನು ನೋಡಬಹುದಾಗಿದೆ.

  Sandalwood stars stands up for a cause again

  ಇನ್ನು ಟಿಕೆಟ್ ನಿಂದ ಬಂದ ಹಣವನ್ನು ಕೊಡಗು ಪ್ರವಾಹ ಪರಿಹಾರಕ್ಕಾಗಿ ನೀಡಲು ಕನ್ನಡ ಕಲಾವಿದರೆಲ್ಲರೂ ಸೇರಿ ನಿರ್ಧರಿಸಿದ್ದಾರೆ. ಹೆಚ್ಚು ಹೆಚ್ಚು ಅಭಿಮಾನಿಗಳು ಕ್ರಿಕೆಟ್ ನೋಡಲು ಹೋದರೆ ಹೆಚ್ಚು ಹಣ ಸಂಗ್ರಹವಾಗಲಿದೆ.

  English summary
  Sandalwood stars stands up for a cause again. The amount collected from the sale of Karnataka Chalanachitra Cup tickets will b donated for Kodagu flood relief.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X