»   » ವಿಷ್ಣು 'ನಾಗರಹಾವು' ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ಗಳ ಸಿಹಿ ಮಾತು

ವಿಷ್ಣು 'ನಾಗರಹಾವು' ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ಗಳ ಸಿಹಿ ಮಾತು

Posted By:
Subscribe to Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರನ್ನು ನೂತನ ಟೆಕ್ನಾಲಜಿ ಮೂಲಕ 'ನಾಗರಹಾವು' ಎಂಬ ಸಿನಿಮಾದ ಮೂಲಕ ಮತ್ತೆ ತೆರೆಯ ಮೇಲೆ ತರುವ ವಿಭಿನ್ನ ಪ್ರಯತ್ನ ಮಾಡುತ್ತಿರುವ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಇಂದು ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಬಹಳ ಗ್ರ್ಯಾಂಡ್ ಆಗಿ ಮಾಡುತ್ತಿದ್ದಾರೆ.

ಈಗಾಗಲೇ ಸೆಲ್ಫಿ ಸ್ಪರ್ಧೆಯ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ 'ನಾಗರಹಾವು' ಚಿತ್ರಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟ-ನಟಿಯರು ವಿಷ್ಣುದಾದಾ ಅವರ '3D ಸ್ಟ್ಯಾಂಡ್' ಮುಂದೆ ನಿಂತು ತಮ್ಮ ತಮ್ಮ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಪ್ರಚಾರ ನೀಡಿದ್ದಾರೆ.[ಇಂದು 'ನಾಗರಹಾವು' ಟೀಸರ್ ರಿಲೀಸ್ ವಿಶೇಷ ಏನು?]


Sandalwood Stars talking about Vishnuvardhan's 'Nagarahavu'

ಇದೀಗ ವಿಷ್ಣುವರ್ಧನ್ ಅವರನ್ನು ಮತ್ತೆ ತೆರೆಯ ಮೇಲೆ ತರುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿರುವ 'ನಾಗರಹಾವು' ಚಿತ್ರತಂಡದ ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ನಟರಾದ ದರ್ಶನ್, ಪುನೀತ್ ರಾಜ್ ಕುಮಾರ್, ಶ್ರೀಮುರಳಿ, ರಮೇಶ್ ಅರವಿಂದ್, ದುನಿಯಾ ವಿಜಯ್, ಲವ್ಲಿ ಸ್ಟಾರ್ ಪ್ರೇಮ್, ಶರಣ್, ಆದಿತ್ಯ, ಚಿರಂಜೀವಿ ಸರ್ಜಾ, ಚಿಕ್ಕಣ್ಣ ಅವರು ವಿಷ್ಣುದಾದಾ ಅವರ ಬಗ್ಗೆ ಮನದಾಳದ ಮಾತುಗಳನ್ನಾಡಿದ್ದಾರೆ.


ಮಾತ್ರವಲ್ಲದೇ ಶೋಭರಾಜ್, ಯಶ್, ಅನುಪ್ರಭಾಕರ್, ರಘು ಮುಖರ್ಜಿ, ನಟಿ ನಭಾ ನಟೇಶ್, ನಟಿ ಕಾರುಣ್ಯ ರಾಮ್ ಸೇರಿದಂತೆ ಹಲವು ಸ್ಟಾರ್ ಗಳು ವಿಷ್ಣು ಅವರನ್ನು ಮತ್ತೆ ತೆರೆಯ ಮೇಲೆ ನೋಡಲು ಕಾತುರತೆಯಿಂದ ಕಾಯುತ್ತಿರುವುದಾಗಿ ಹೇಳುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.[ಅಭಿಮಾನಿಗಳಿಗೆ ಅಚ್ಚರಿ: 'ನಾಗರಹಾವಿನ' ಹೆಡೆ ಮುಂದೆ ನಟಿ ರಮ್ಯಾ.!]


Sandalwood Stars talking about Vishnuvardhan's 'Nagarahavu'

ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು 'ನಾಗರಹಾವು' ಚಿತ್ರದ ಬಗ್ಗೆ ಚಿನ್ನದಂತಹ ಮಾತುಗಳನ್ನು ಆಡಿದ್ದು, ಅದನ್ನು ಅವರ ಬಾಯಲ್ಲೇ ಕೇಳಲು ಈ ವಿಡಿಯೋ ನೋಡಿ....English summary
Sandalwood Stars talking about Legend Vishnu Dada and wishes Kannada Movie 'Nagarahavu' team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada