Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಾಂಸ್ಕೃತಿಕ ನಗರಿ ಮೈಸೂರಿಗೆ ಬರ್ತಾವ್ರೆ ಸ್ಯಾಂಡಲ್ ವುಡ್ ದಿಗ್ಗಜರು: ಏನ್ ವಿಶೇಷ.?
ಮೈಸೂರು, ಜನವರಿ 19 : ಸಮಾಜ ಮತ್ತು ನಾಗರೀಕರ ರಕ್ಷಣೆ ಸೇವೆಯಲ್ಲಿ ತೊಡಗಿರುವ ಆರಕ್ಷಕರಿಗೆ ಗೌರವ ಸಮರ್ಪಿಸಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ಯಾಂಡಲ್ ವುಡ್ ನ ಖ್ಯಾತ ಚಿತ್ರ ತಾರೆಯರು ಆಗಮಿಸುತ್ತಿದ್ದಾರೆ.
ಸದಾ ಕಾರ್ಯಭಾರದ ಒತ್ತಡದಲ್ಲಿರುವ ಪೊಲೀಸರು ಗೌರವ ಮತ್ತು ಅಭಿನಂದನೆಗಳಿಂದ ವಂಚಿತರಾದವರು. ಬಹುಶಃ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆರಕ್ಷಕರಿಗೆ ರೋಟರಿ ಹೆರಿಟೇಜ್ ಮೈಸೂರು ವಿಶಿಷ್ಟ ಸಂಗೀತ ಕಾರ್ಯಕ್ರಮದ ಮೂಲಕ ಗೌರವ ಸಮರ್ಪಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಚಿತ್ರತಾರೆಯರು ಸ್ವಯಂಪ್ರೇರಿತರಾಗಿ ಅಭಿನಂದನೆ ಸಮರ್ಪಿಸಲು ಆಗಮಿಸುತ್ತಿರುವುದು ವಿಶೇಷ.
ರೋಟರಿ ಹೆರಿಟೇಜ್ ಮೈಸೂರು ಸ್ವರ ಸಾಗರ, ಮ್ಯೂಸಿಕ್ ಫೌಂಡೇಷನ್ ಸಹಯೋಗದಲ್ಲಿ ಜನವರಿ 20 ರಂದು ಸಂಜೆ 4.30ಕ್ಕೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ 'ಸ್ವರಾಮೃತ-3' ಆರಕ್ಷಕರಿಗೆ ಗೌರವ ನಮನ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮೈಸೂರು ನಗರದ ಪೊಲೀಸರ ಕರ್ತವ್ಯ ಪಾಲನೆಗೆ ಕೃತಜ್ಞತೆ ಮತ್ತು ಪ್ರಶಂಸೆ ವ್ಯಕ್ತಪಡಿಸುವ ಮನೋಜ್ಞ ಆಶಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಸೌಕರ್ಯವಿಲ್ಲದ ಯುವಜನರಿಗಾಗಿ ಡಿಜಿಟಲ್ ಗ್ರಂಥಾಲಯವುಳ್ಳ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸುವ ಸುದುದ್ದೇಶವನ್ನೂ ಈ ಕಾರ್ಯಕ್ರಮ ಒಳಗೊಂಡಿರುವುದು ಗಮನಾರ್ಹ.
ಖ್ಯಾತ ಚಿತ್ರತಾರೆಯರ ರಂಗು: ಕನ್ನಡದ ನಾಯಕ ನಟರಾದ ವಿ.ರವಿಚಂದ್ರನ್, ದರ್ಶನ್ ತೂಗುದೀಪ್, ಯಶ್, ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್ ಜನ್ಯ, ಅನೂಪ್ ಸಿಳೀನ್, ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪಕಾಶ್, ಸಿನಿಮಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಳಗೊಂಡಂತೆ ಇತರೆ ಸಿನಿಮಾ ತಾರೆಗಳು ಪೊಲೀಸರಿಗೆ ಗೌರವ ಸಮರ್ಪಿಸಲು ಆಗಮಿಸುತ್ತಿದ್ದಾರೆ.
ಇವರೊಟ್ಟಿಗೆ ಮೈಸೂರಿನ ಗಾಯಕರಾದ ಶುಭಾ ರಾಘವೇಂದ್ರ, ಶ್ರೀ ಹರ್ಷ, ಶ್ರೇಯ ಭಟ್, ರಕ್ಷಿತಾ ಸುರೇಶ್, ವಸುಧಾ ಶಾಸ್ತ್ರಿ, ಸರಿಗಮಪ ಖ್ಯಾತಿಯ ತನುಶ್ರೀ, ಬೆಂಗಳೂರಿನ ಅರವಿಂದ್ ಸುಮಧುರ ಹಾಡುಗಳ ಮೂಲಕ ಪೊಲೀಸರು ಮತ್ತು ಅವರ ಕುಟುಂಬದವರನ್ನು ರಂಜಿಸಲಿದ್ದಾರೆ.