ಈ ವರ್ಷ ಹಸೆಮಣೆ ಏರಿದ ಸ್ಯಾಂಡಲ್ ವುಡ್ ತಾರೆಯರು

By Bharath Kumar

Recommended Video

ಈ ವರ್ಷ ಹಸೆಮಣೆ ಏರಿದ ಸ್ಯಾಂಡಲ್ ವುಡ್ ತಾರೆಯರು | Filmibeat Kannada

ಈ ವರ್ಷ ಕನ್ನಡದಲ್ಲಿ ಎಷ್ಟು ಸಿನಿಮಾ ಬಂತು, ಎಷ್ಟು ಸಿನಿಮಾ ಹಿಟ್ ಆಯ್ತು. ಎಷ್ಟು ಸಿನಿಮಾ ಫ್ಲಾಫ್ ಆಯ್ತು ಎಂಬುದನ್ನ ಸ್ವಲ್ಪ ಪಕ್ಕಕ್ಕೆ ಇಡಿ. ಈ ವರ್ಷ ಎಷ್ಟು ಜನ ಸಿನಿಮಾ ತಾರೆಯರು ಮದುವೆ ಆದರು ಎಂಬುದನ್ನ ಸ್ವಲ್ಪ ನೆನಪಿಸಿಕೊಳ್ಳಿ.

ಯಾರು ಯಾರು ಮದುವೆ ಆದ್ರೂ ಅಂತ ನೆನಪಾಗಲಿಲ್ಲ ಅಂದ್ರೆ, ಜಾಸ್ತಿ ಯೋಚನೆ ಮಾಡ್ಬೇಡಿ. ಅದನ್ನ ನಾವೇ ಹೇಳ್ತಿವಿ. ಈ ವರ್ಷ ಬರೋಬ್ಬರಿ 15 ಜನ ಸಿನಿಮಾ ತಾರೆಯರು ಸಪ್ತಪದಿ ತುಳಿದಿದ್ದಾರೆ.

14 ಜನ ಸೆಲೆಬ್ರಿಟಿಗಳು ಮದುವೆ ಆದ್ರಾ? ಹಾಗಿದ್ರೆ, ಈ ವರ್ಷ ಯಾರೆಲ್ಲಾ ನೂತನ ಬಾಳಿಗೆ ಅಡಿಯಿಟ್ಟರು ಎಂಬುದರ ಬಗ್ಗೆ ಪೂರ್ತಿ ವಿವರ ನೀಡಿದ್ದೇವೆ. ಮುಂದೆ ಓದಿ...

'ಕಿರಿಕ್' ನಿರ್ದೇಶಕ ರಿಷಬ್ ಶೆಟ್ಟಿ

'ಕಿರಿಕ್' ನಿರ್ದೇಶಕ ರಿಷಬ್ ಶೆಟ್ಟಿ

'ಕಿರಿಕ್ ಪಾರ್ಟಿ' ನಿರ್ದೇಶಕ ರಿಶಬ್ ಶೆಟ್ಟಿ ಈ ವರ್ಷ ಮದುವೆಯಾದ ಮೊದಲ ಸೆಲೆಬ್ರಿಟಿ. ವೃತ್ತಿಪರ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಪ್ರಗತಿ ಶೆಟ್ಟಿ ಜೊತೆ ವೈವಾಹಿಕ ಜೀವನ ಆರಂಭಿಸಿದರು. ಫೆಬ್ರವರಿ 9ರ ಮಧ್ಯಾಹ್ನ 12.25ಕ್ಕೆ ಇದ್ದ ಶುಭ ಮುಹೂರ್ತದಲ್ಲಿ ರಿಶಬ್-ಪ್ರಗತಿ ಹಸೆಮಣೆ ಏರಿದರು. ಉಡುಪಿ ಜಿಲ್ಲೆಯ ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ರಿಶಬ್ ಶೆಟ್ಟಿ-ಪ್ರಗತಿ ಶೆಟ್ಟಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು.

ಸಿಂಪಲ್ ಸುನಿ-ಸೌಂದರ್ಯ

ಸಿಂಪಲ್ ಸುನಿ-ಸೌಂದರ್ಯ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಗೆಳತಿ ಸೌಂದರ್ಯ ಗೌಡ ಅವರನ್ನ ವಿವಾಹವಾಗುವ ಮೂಲಕ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಫೆಬ್ರವರಿ 17 ರಂದು ಚಿಕ್ಕಮಗಳೂರಿನಲ್ಲಿ ಎರಡು ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಜರುಗಿತು.

ಕೊಡಗಿನ ಕುವರಿ ನಿಧಿ ಸುಬ್ಬಯ್ಯ

ಕೊಡಗಿನ ಕುವರಿ ನಿಧಿ ಸುಬ್ಬಯ್ಯ

'ಪಂಚರಂಗಿ' ಬೆಡಗಿ ನಿಧಿ ಸುಬ್ಬಯ್ಯ ಅವರು ಮುಂಬೈ ಮೂಲದ ಉದ್ಯಮಿ ಲವೇಶ್ ಖೈರಜನಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಫೆಬ್ರವರಿ 10 ರಂದು ಕೊಡಗಿನಲ್ಲಿ ಇವರಿಬ್ಬರ ವಿವಾಹ ಮಹೋತ್ಸವ ಜರುಗಿತ್ತು.

ಹಸೆಮಣೆ ಏರಿದ ಚೇತನ್ ಚಂದ್ರ

ಹಸೆಮಣೆ ಏರಿದ ಚೇತನ್ ಚಂದ್ರ

'ಪ್ರೇಮಿಸಂ' ಖ್ಯಾತಿಯ ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ನಟ ಚೇತನ್ ಚಂದ್ರ ಇದೇ ವರ್ಷ ನವ ಬಾಳಿಗೆ ಕಾಲಿಟ್ಟರು. ಮಲೆನಾಡ ಹುಡುಗಿ ರಚನಾ ಹೆಗಡೆ ಜೊತೆ ಚೇತನ್ ಚಂದ್ರ ಸಪ್ತಪದಿ ತುಳಿದಿದ್ದಾರೆ. ಏಪ್ರಿಲ್ 18 ರಂದು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇರುವ ಭದ್ರಕಾಳಿ ಕಲ್ಯಾಣ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ಚೇತನ್ ಚಂದ್ರ ಮದುವೆ ನಡೆಯಿತು.

ಅಪೂರ್ವ ಕಾಸರವಳ್ಳಿ ಅವರ ವಿವಾಹ

ಅಪೂರ್ವ ಕಾಸರವಳ್ಳಿ ಅವರ ವಿವಾಹ

ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರ ಅಪೂರ್ವ ಕಾಸರವಳ್ಳಿ ಅವರ ವಿವಾಹ ಏಪ್ರಿಲ್ 17 ರಂದು ನಡೆದಿತ್ತು. ಬೆಂಗಳೂರು ಮೂಲದ ನೃತ್ಯಗಾರ್ತಿ ವಂದನಾ ಸುಪ್ರಿಯಾ ಅವರ ಜೊತೆ ಅಪೂರ್ವ ಕಾಸರವಳ್ಳಿ ಸಪ್ತಪದಿ ತುಳಿದಿದ್ದಾರೆ. ಯಲಹಂಕದ ಬಳಿಯಿರುವ ರಾಯಲ್ ಆರ್ಕಿಡ್ ರೆಸಾರ್ಟ್ ಹಾಗೂ ಕನ್ವೆಕ್ಷನ್ ಹಾಲ್ ನಲ್ಲಿ ಅಪೂರ್ವ ಮತ್ತು ವಂದನಾ ಅವರ ವಿವಾಹ ಮಹೋತ್ಸವ ನೆರವೇರಿತ್ತು.

ಅಮೂಲ್ಯ ವಿವಾಹ

ಅಮೂಲ್ಯ ವಿವಾಹ

ಸ್ಯಾಂಡಲ್ ವುಡ್ ನ 'ಬೇಬಿ ಡಾಲ್' ನಟಿ ಅಮೂಲ್ಯ ಮತ್ತು ಜಗದೀಶ್ ಅವರ ವಿವಾಹ ಮೇ 12 ರಂದು, ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ದಾಂಪತ್ಯಕ್ಕೆ ಕಾಲಿಟ್ಟ ನಿರಂಜನ್ ದೇಶಪಾಂಡೆ

ದಾಂಪತ್ಯಕ್ಕೆ ಕಾಲಿಟ್ಟ ನಿರಂಜನ್ ದೇಶಪಾಂಡೆ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಮೂಲಕ ಕರುನಾಡ ಮನೆಮನದಲ್ಲಿಯೂ ಜನಪ್ರಿಯತೆ ಗಳಿಸಿದ ಆರ್.ಜೆ ನಿರಂಜನ್ ದೇಶಪಾಂಡೆ ಮತ್ತು ಯಶಸ್ವಿನಿ ಅವರ ಮದುವೆ ಮೇ ತಿಂಗಳಲ್ಲಿ ನಡೆಯಿತು. ಕಲರ್ಸ್ ಸೂಪರ್ ಟಿವಿಯಲ್ಲಿ ಇವರಿಬ್ಬರ ಮದುವೆ ನಡೆದಿದ್ದು ಹೊಸ ಇತಿಹಾಸವಾಗಿತ್ತು.

ನಿರ್ದೇಶಕ ಪಿಸಿ ಶೇಖರ್ ಮದುವೆ

ನಿರ್ದೇಶಕ ಪಿಸಿ ಶೇಖರ್ ಮದುವೆ

ಸ್ಯಾಂಡಲ್ ವುಡ್ ನಿರ್ದೇಶಕ ಪಿ.ಸಿ.ಶೇಖರ್ ಜೂನ್ 28 ರಂದು ಚೆನ್ನೈನ ಕೃಷ್ಣಗಿರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೇಘನಾ ಎಂಬುವರ ಜೊತೆ ಸಂಪ್ರದಾಯವಾಗಿ ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಿದರು.

ರಮ್ಯಾ ಬಾರ್ನಾ

ರಮ್ಯಾ ಬಾರ್ನಾ

ನಟಿ ರಮ್ಯಾ ಬಾರ್ನಾ, ಫಹಾದ್ ಅಲಿ ಖಾನ್ ಎಂಬ ಯುವಕನ ಜೊತೆ ಮೇ 29 ರಿಜಿಸ್ಟರ್ ಮದುವೆ ಆಗಿದ್ದರು. ಆದ್ರೆ, ಅದು ಜೂನ್ ತಿಂಗಳಲ್ಲಿ ಬೆಳಕಿಗೆ ಬಂತು. ಸ್ವತಃ ನಟಿಯೇ ಶಿವಾಜಿನಗರದ ರಿಜಿಸ್ಟರ್ ಕಛೇರಿಯಲ್ಲಿ ಇಬ್ಬರು ರಿಜಿಸ್ಟರ್ ಮದುವೆ ಆಗಿರುವ ಬಗ್ಗೆ ಬಹಿರಂಗಪಡಿಸಿದರು.

ಪ್ರಿಯಾಮಣಿ ಸರಳ ವಿವಾಹ

ಪ್ರಿಯಾಮಣಿ ಸರಳ ವಿವಾಹ

ಪಂಚಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ವಿವಾಹ ಆಗಸ್ಟ್ 23 ರಂದು ಸರಳವಾಗಿ ನಡೆಯಿತು. ಬೆಂಗಳೂರಿನ ಜಯನಗರದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಿಂಧು ಲೋಕನಾಥ್ ಮದುವೆ

ಸಿಂಧು ಲೋಕನಾಥ್ ಮದುವೆ

ಕನ್ನಡದ ಯುವನಟಿ ಸಿಂಧು ಲೋಕನಾಥ್ ಕರಾವಳಿ ಹುಡುಗ ಶ್ರೇಯಸ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಗಸ್ಟ್ 27 ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಕುಟುಂಬ, ಬಂಧು-ಬಳಗ, ಸ್ನೇಹಿತರ ಸಮ್ಮುಖದಲ್ಲಿ ಸಿಂಧು ಲೋಕನಾಥ್-ಶ್ರೇಯಸ್ ಮದುವೆ ನಡೆದಿದೆ.

ಲೂಸ್ ಮಾದ ಯೋಗೇಶ್ ವಿವಾಹ

ಲೂಸ್ ಮಾದ ಯೋಗೇಶ್ ವಿವಾಹ

ಕನ್ನಡದ ನಟ ಲೂಸ್​ ಮಾದ ಯೋಗೀಶ್​ ಮತ್ತು ಸಾಹಿತ್ಯ ವಿವಾಹ ನವೆಂಬರ್ 2 ರಂದು ಕೋಣನ ಕುಂಟೆಯಲ್ಲಿರುವ ಶ್ರೀ ಕನ್ವೆಂಷನ್​ ಹಾಲ್​ನಲ್ಲಿ ನಡೆದಿದೆ. ಕಳೆದ 13 ವರ್ಷಗಳಿಂದ ಸ್ನೇಹಿತರಾಗಿದ್ದ ಇವರು ಮನೆಯವರ ಸಮ್ಮತಿಯ ಮೇರೆಗೆ ಮದುವೆ ಆಗಿದ್ದಾರೆ.

ತಿಥಿ ಅಭಿಷೇಕ್ ಮದುವೆ

ತಿಥಿ ಅಭಿಷೇಕ್ ಮದುವೆ

'ತಿಥಿ' ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಅಭಿ ಮತ್ತು ಕಾವ್ಯ ಮದುವೆ ನವೆಂಬರ್ 15ರಂದು ನಡೆದಿದೆ. ಮಂಡ್ಯದ ಹುಲಿಕೆರೆ ಕೊಪ್ಪಲು ಗ್ರಾಮದ ಅಭಿ, ಅದೇ ಗ್ರಾಮದ ಕಾವ್ಯ ಎಂಬ ಯುವತಿ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.

ದೀಪ್ತಿ ಕಾಮ್ಸೆ ವಿವಾಹ

ದೀಪ್ತಿ ಕಾಮ್ಸೆ ವಿವಾಹ

'ಕಿರೀಟ', 'ಜಲ್ವಂತಂ', 'ಮಾಲ್ಗುಡಿ ಸ್ಟೇಷನ್', 'ಹನಿ ಹನಿ ಇಬ್ಬನಿ', 'ಉಪೇಂದ್ರ ಮತ್ತೆ ಬಾ' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ದೀಪ್ತಿ ಕಾಪ್ಸೆ ಮದುವೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು (ಅಕ್ಟೋಬರ್ 15) ದೀಪ್ತಿ ತನ್ನ ಬಾಲ್ಯದ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಟ್ಟರು.

ಬಹುಭಾಷಾ ನಟಿ ನಮಿತಾ ಮದುವೆ

ಬಹುಭಾಷಾ ನಟಿ ನಮಿತಾ ಮದುವೆ

ಬಹುಭಾಷಾ ತಾರೆ ನಮಿತಾ ನವೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುಪತಿ ತಿಮ್ಮಪ್ಪನ ಆಶೀರ್ವಾದದೊಂದಿಗೆ ನಟಿ ನಮಿತಾ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದು, ತಮ್ಮ ಗೆಳೆಯ ವೀರೇಂದ್ರ ಜೊತೆ ಹಸೆಮಣೆ ಏರಿದ್ದಾರೆ.

More from Filmibeat

English summary
Kannada Actors and Actress Who tied the knot in 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X