ಹೊಸ ವರ್ಷಕ್ಕೆ ಶುಭಕೋರಿದ ಸಿನಿತಾರೆಯರು? ಯಾರಿಗೆ ಹೇಗಿತ್ತು 2018?
ವರ್ಷ ಮುಗಿತು ಅನ್ನೋ ದುಃಖಕ್ಕಿಂತ ಹೊಸ ವರ್ಷ ಬಂತು ಎಂಬ ಖುಷಿಯೇ ಹೆಚ್ಚು. 2019ನೇ ವರ್ಷವನ್ನ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ನಾಡಿನಲ್ಲೆಡೆ, ದೇಶದಲ್ಲೆಡೆ ಹೊಸ ವರ್ಷವನ್ನ ಬರಮಾಡಿಕೊಳ್ಳಲಾಗಿದೆ.
ಹೊಸ ವರ್ಷಕ್ಕೆ ಕಾಲಿಟ್ಟ ಸಂತೋಷವನ್ನ ಸ್ಯಾಂಡಲ್ ವುಡ್ ಸಿನಿ ತಾರೆಯರು ಕೂಡ ಸಂಭ್ರಮಿಸಿದ್ದಾರೆ. ಹಳೆಯ ನೆನಪುಗಳನ್ನ ಮರೆತು, ಹೊಸ ಅನುಭವಗಳನ್ನ ಪಡೆಯಬೇಕು ಎಂಬ ಆಶಯವನ್ನ ಅನೇಕರು ವ್ಯಕ್ತಪಡಿಸಿದ್ದಾರೆ.
ದರ್ಶನ್, ಸುದೀಪ್, ಜಗ್ಗೇಶ್, ಶ್ರೀಮುರಳಿ, ಚಿರಂಜೀವಿ ಸರ್ಜಾ, ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವು ನಟ-ನಟಿಯರು ಹೊಸ ವರ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ.....
ದಾಸ ದರ್ಶನ್ ಶುಭಾಶಯ
''ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು'' ಎಂದು ದರ್ಶನ್ ವಿಶ್ ಮಾಡಿದ್ದಾರೆ. ಕಳೆದ ವರ್ಷ ದರ್ಶನ್ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಆದ್ರೆ, ಈ ವರ್ಷ ಮೂರ್ನಾಲ್ಕು ಚಿತ್ರಗಳು ತೆರೆಗೆ ಬರೋ ಸಾಧ್ಯತೆ ಇದೆ.
ಕುಟುಂಬದ ಜೊತೆ ಜಗ್ಗೇಶ್ ವಿಶ್
''2018ರ ಕಹಿನೆನಪು ಮರೆತು 2019ರ ಹೊಸವರ್ಷದ ಹೊಸತನಕ್ಕೆ ಯತ್ನಿಸಿ..ಮನುಜನ್ಮ ಶ್ರೇಷ್ಟ ನಗುತ್ತಾ ನಗಿಸುತ್ತಾ ನೆನಪಲ್ಲಿ ಉಳಿಯುವಂತೆ ಬಾಳಿ'' ಎಂದು ನವರಸ ನಾಯಕ ಜಗ್ಗೇಶ್ ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ.
ಚಿರು-ಮೇಘನಾ ದಂಪತಿ
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿ ಜೊತೆ ಪ್ರಜ್ವಲ್ ದೇವರಾಜ್ ದಂಪತಿ ಸೇರಿ ಹೊಸ ವರ್ಷವನ್ನ ಸಂಭ್ರಮಿಸಿದ್ದಾರೆ.
ಸುಮಲತಾ ಅಂಬರೀಶ್
ನಟಿ ಸುಮಲತಾ ಅಂಬರೀಶ್ ಅವರು ತಮ್ಮ ಕುಟುಂಬದ ಫೋಟೋ ಹಂಚಿಕೊಂಡು, ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಶ್ರೀಮುರಳಿ ಸಂಭ್ರಮ
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ತಮ್ಮ ಕುಟುಂಬದ ಜೊತೆ ಹೊಸ ವರ್ಷದ ಸಂಭ್ರಮವನ್ನ ಆಚರಿಸಿಕೊಂಡಿದ್ದಾರೆ. ಮಕ್ಕಳು ಜೊತೆ ಶ್ರೀಮುರಳಿ ಸಂಭ್ರಮಿಸುತ್ತಿರುವ ಫೋಟೋ ಶೇರ್ ಮಾಡಿ ಹೊಸ ವರ್ಷಕ್ಕೆ ಸ್ವಾಗತ ಮಾಡಿದ್ದಾರೆ.
ಧನ್ಯವಾದ ತಿಳಿಸಿದ ಕಿಚ್ಚ
ನನ್ನ ಜೊತೆ ಇದ್ದು ನನ್ನ ಎಲ್ಲ ಯಶಸ್ಸಿಗೆ ಕಾರಣವಾದ ಸ್ನೇಹಿತರು, ಮಾಧ್ಯಮದವರು, ಕುಟುಂಬದರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಜನವರಿ 31ಕ್ಕೆ ನಾನು ಚಿತ್ರರಂಗಕ್ಕೆ ಬಂದು 23 ವರ್ಷ ಆಗುತ್ತೆ. ನೀವು ಕೊಟ್ಟ ಬೆಂಬಲದಿಂದಲೇ ಇದು ಸಾಧ್ಯವಾಗಿದೆ. ನನ್ನ ಪಯಣದಲ್ಲಿ ನಿಮ್ಮ ಹೆಜ್ಜೆಗೆ ಧನ್ಯವಾದಗಳು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











