ಇಂದು ಹೋರಾಟಕ್ಕೆ ಬಾರದ ಕನ್ನಡ 'ಸ್ಟಾರ್' ನಟರು 'ಇವರೇ'.!

By Harshitha

'ಕನ್ನಡ ಚಿತ್ರರಂಗ ಒಗ್ಗಟ್ಟಾಗಿದೆ' ಅಂತ ಸ್ವತಃ ಚಿತ್ರರಂಗದವರೇ ಬಾಯಿ ಬಿಟ್ಟು ಹೇಳಿದರೂ, ಜನರಿಗಾಗಿ ಕನ್ನಡ ತಾರೆಯರು ಒಟ್ಟಾಗಿ, ಒಗ್ಗಟ್ಟಿನಿಂದ ಮುಂದೆ ಬಂದು ಹೋರಾಡುವುದೇ ಕಷ್ಟಕರ ಎಂಬುದು ಮತ್ತೆ ಸಾಬೀತಾಗಿದೆ.

ಇವತ್ತು ನಡೆದ ಪ್ರತಿಭಟನಾ ಮೆರವಣಿಗೆಯನ್ನೇ ತೆಗೆದುಕೊಳ್ಳಿ. 'ಕರ್ನಾಟಕ ಬಂದ್'ಗೆ ನಮ್ಮ ಸ್ಯಾಂಡಲ್ ವುಡ್ ಸಂಪೂರ್ಣ ಬೆಂಬಲ ನೀಡಿತ್ತು. ಚಿತ್ರರಂಗದ ಎಲ್ಲಾ ಚಟುವಟಿಕೆಗಳನ್ನು ಇಂದು ಸ್ಥಗಿತಗೊಳಿಸಲಾಗಿತ್ತು. [ನೀರಿಗಾಗಿ ಎಂಥ ಹೋರಾಟಕ್ಕೂ ಸಿದ್ಧ ಎಂದ ಕನ್ನಡ ತಾರೆಯರು]

ಹೀಗಿದ್ದರೂ, ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ನಮ್ಮ 'ಸ್ಟಾರ್'ಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.! ಮುಂದೆ ಓದಿ...

ಯಾರ್ಯಾರು ಬಂದಿದ್ದರು.?

ಯಾರ್ಯಾರು ಬಂದಿದ್ದರು.?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಲವ್ಲಿ ಸ್ಟಾರ್ ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್, ನಟಿ ತಾರಾ, ಶ್ರುತಿ, ಜೈಜಗದೀಶ್, ಸಾರಾ ಗೋವಿಂದು, ಪ್ರಜ್ವಲ್ ದೇವರಾಜ್, ರಾಕ್ ಲೈನ್ ವೆಂಕಟೇಶ್, ರಂಗಾಯಣ ರಘು, ಮೇಘನಾ ರಾಜ್, ಮೈತ್ರಿಯಾ ಗೌಡ, ಮುನಿರತ್ನ, ಸಾಧು ಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ಕೆಲವೇ ಸ್ಟಾರ್ಸ್ ಮಾತ್ರ ಬೀದಿಗಳಿದು ಹೋರಾಟ ಮಾಡಿದರು. ['ನೋಡಿ ಮುಸಿಮುಸಿನಗಲು ನಾವೇನು ಜೋಕರ್ ಗಳಲ್ಲ']

ಯರ್ಯಾರು ಬರ್ಲಿಲ್ಲ.?

ಯರ್ಯಾರು ಬರ್ಲಿಲ್ಲ.?

ಇಂದಿನ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮಿಸ್ ಆದ ಸ್ಟಾರ್ ಗಳ ಲಿಸ್ಟ್ ಇಲ್ಲಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಅಂಬರೀಶ್

ಅಂಬರೀಶ್

ಜನರ ಪರ ರೆಬೆಲ್ ಸ್ಟಾರ್ ಅಂಬರೀಶ್ ರೆಬೆಲ್ ಆಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ ಹಾಗಾಗಲಿಲ್ಲ. [ಕರ್ನಾಟಕ ಬಂದ್: ಎಲ್ಲಾ ಚಿತ್ರಮಂದಿರಗಳಿಗೂ ಬಿದ್ದ ಬೀಗ.!]

ರಮ್ಯಾ

ರಮ್ಯಾ

ಟ್ವಿಟ್ಟರ್ ನಲ್ಲಿ ತತ್ವ-ಸಿದ್ಧಾಂತಗಳನ್ನು ಮಾತನಾಡುವ ರಮ್ಯಾ ಮೇಡಂ ಇಂದಿನ ಪ್ರತಿಭಟನೆಯಲ್ಲಿ ಮಿಸ್ ಆಗಿದ್ದರು. [ಪ್ರತಿಭಟನೆಯಲ್ಲಿ ಸುದೀಪ್ ಭಾಗವಹಿಸಿಲ್ಲ.! ನಿಜವಾದ ಕಾರಣವೇನು.?]

ದರ್ಶನ್

ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇಂದು ಹೋರಾಟದಲ್ಲಿ ಗೈರು ಹಾಜರಾಗಿದ್ದರು.

ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್

ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ ಕೂಡ ಇಂದು ಪತ್ತೆ ಆಗ್ಲಿಲ್ಲ.

ಉಪೇಂದ್ರ

ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಉಪೇಂದ್ರ ಇಂದಿನ ಹೋರಾಟದಲ್ಲಿ ಭಾಗವಹಿಸಿ ಕಿಚ್ಚು ಹತ್ತಿಸಲಿಲ್ಲ.

ದುನಿಯಾ ವಿಜಯ್

ದುನಿಯಾ ವಿಜಯ್

ಇಂದು ಪ್ರತಿಭಟನಾ ರ್ಯಾಲಿಯಲ್ಲಿ ಗೈರು ಹಾಜರ್ ಆದವರ ಪೈಕಿ ದುನಿಯಾ ವಿಜಯ್ ಕೂಡ ಒಬ್ಬರು.

ರವಿಚಂದ್ರನ್

ರವಿಚಂದ್ರನ್

ಚಿತ್ರರಂಗದ ಸಮಸ್ಯೆಗಳಿಗೆ ಸ್ಪಂದಿಸುವ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಇಂದು ಜನರ ಹೋರಾಟಕ್ಕೆ ಕೈ ಜೋಡಿಸಲಿಲ್ಲ.

ಸುದೀಪ್

ಸುದೀಪ್

ಇನ್ನು ತಂದೆಯ ಅನಾರೋಗ್ಯದ ಕಾರಣದಿಂದ ಸುದೀಪ್ ಕೂಡ ಹೋರಾಟದಲ್ಲಿ ಭಾಗವಹಿಸಲಿಲ್ಲ.

More from Filmibeat

English summary
Kannada Film Industry has supported Karnataka Bandh today (July 30th) to protest against the interim order passed by Mahadayi Tribunal. Actors like Sudeep, Ambareesh, Upendra, Puneeth Rajkumar did not take part in today's protest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X