For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧ್ರುವ ಸರ್ಜಾಗೆ ಶುಭ ಕೋರಿದ ಚಂದನವನದ ತಾರೆಯರು

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 32ನೇ ವಸಂತಕ್ಕೆ ಕಾಲಿಟ್ಟಿರುವ ಧ್ರುವ ಸರ್ಜಾ ಈ ಬಾರಿ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದಾರೆ. ಪ್ರತೀ ವರ್ಷ ಅದ್ದೂರಿಯಾಗಿ, ಅಭಿಮಾನಿ ಸಾಗರದ ಮಧ್ಯೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ.

  ಅಣ್ಣನ ಅಗಲಿಕೆಯ ನೋವಿನಿಂದ ಇನ್ನು ಹೊರಬರದ ಧ್ರುವ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ, ಮನೆಯ ಬಳಿ ಬರಬೇಡಿ ಎಂದು ಹೇಳಲು ಮನಸಿಲ್ಲ, ಆದರೆ ಇದ್ದಲ್ಲಿಯೇ ಶುಭಹಾರೈಸಿ ಎಂದು ಧ್ರುವ ಸರ್ಜಾ ಮನವಿ ಮಾಡಿಕೊಂಡಿದ್ದಾರೆ. ಧ್ರುವ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಿದ್ದರೂ ಅಭಿಮಾನಿಗಳು, ಸಿನಿಮಾರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸುತ್ತಿದ್ದಾರೆ. ಯಾರ್ಯಾರ ವಿಶ್ ಹೇಗಿದೆ? ಮುಂದೆ ಓದಿ...

  ಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್: ಮತ್ತೆ ಒಂದಾದ ಸೂಪರ್ ಹಿಟ್ ಜೋಡಿಧ್ರುವ ಸರ್ಜಾ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಅನೌನ್ಸ್: ಮತ್ತೆ ಒಂದಾದ ಸೂಪರ್ ಹಿಟ್ ಜೋಡಿ

  ನಿರ್ದೇಶಕ ಸಿಂಪಲ್ ಸುನಿ

  ನಿರ್ದೇಶಕ ಸಿಂಪಲ್ ಸುನಿ

  ನಿರ್ದೇಶಕ ಸಿಂಪಲ್ ಸುನಿ, ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡುವ ಸುನಿ ಧ್ರುವ ಸರ್ಜಾ ಜನ್ಮದಿನಾಚರಣೆಗೂ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ. "ಅದ್ದೂರಿ, ಪೊಗುರು ತೋರಿದ ಭರ್ಜರಿಯ ಬಹದ್ದೂರರಾದ ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಹೇಳಿದ್ದಾರೆ.

  ನಿರ್ದೇಶಕ ಎಪಿ ಅರ್ಜುನ್

  ನಿರ್ದೇಶಕ ಎಪಿ ಅರ್ಜುನ್

  ನನ್ನ ಪ್ರೀತಿಯ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬ ಶುಭಾಶಯಗಳು ಎಂದು ನಿರ್ದೇಶಕ ಎಪಿ ಅರ್ಜುನ್ ವಿಶ್ ಮಾಡಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಚಿನ್ನ. ನೂರ್ಕಾಲ ಸುಖವಾಗಿರು. ನಿನ್ನ ಇಷ್ಟಗಳೆಲ್ಲ ಪ್ರತಿನಿತ್ಯ ಈಡೇರಲಿ. ದೇವರ ಆಶೀರ್ವಾದ ಸದಾ ನಿನ್ನೊಂದಿಗಿರಲಿ" ಎಂದು ಎಪಿ ಅರ್ಜುನ್ ಶುಭ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯದ ಜೊತೆಗೆ ಹೊಸ ಸಿನಿಮಾ ಕೂಡ ಅನೌನ್ಸ್ ಮಾಡಿದ್ದಾರೆ.

  ಮೇಘನಾ ರಾಜ್ 'ಸೀಮಂತ' ಬೆನ್ನಲ್ಲೆ ಅಭಿಮಾನಿಗಳಲ್ಲಿ ವಿನಂತಿ ಮಾಡಿದ ಧ್ರುವ ಸರ್ಜಾಮೇಘನಾ ರಾಜ್ 'ಸೀಮಂತ' ಬೆನ್ನಲ್ಲೆ ಅಭಿಮಾನಿಗಳಲ್ಲಿ ವಿನಂತಿ ಮಾಡಿದ ಧ್ರುವ ಸರ್ಜಾ

  ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್

  ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್

  ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಸಹ ಧ್ರುವ ಸರ್ಜಾಗೆ ವಿಶ್ ಮಾಡಿದ್ದಾರೆ. ಸರ್ಜಾ ಕುಟುಂಬದ ಜೊತೆ ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಸಾಮಾಜಿ ಜಾಲತಾಣದ ಮೂಲಕ ರಾಘವೇಂದ್ರ ರಾಜ್ ಕುಮಾರ್ "ಹುಟ್ಟುಹಬ್ಬದ ಶುಭಾಶಯಗಳು ಧ್ರುವ. ಜೈ ಆಂಜನೇಯ, ಜೈ ಗುರುದೇವ್" ಎಂದು ಶುಭ ಹಾರೈಸಿದ್ದಾರೆ.

  ಅಭಿಮಾನಿಗಳು ಕಳುಹಿಸಿದ ಮೇಘನಾ ರಾಜ್ ಫೋಟೋಗೆ ಜೀವ ಕೊಟ್ಟ ಕರಣ್ | Filmibeat Kannada
  ನಿರ್ದೇಶಕ ಪವನ್ ಒಡೆಯರ್

  ನಿರ್ದೇಶಕ ಪವನ್ ಒಡೆಯರ್

  ನಿರ್ದೇಶಕ ಪವನ್ ಒಡೆಯರ್ ಸಹ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿರುವ ಧ್ರುವ "ಹುಟ್ಟುಹಬ್ಬದ ಶುಭಾಶಯಗಳು ಧ್ರುವ ಸರ್ಜಾ ಸಹೋದರ. ಒಳ್ಳೆಯದಾಗಲಿ" ಎಂದು ಶುಭ ಹಾರೈಸಿ ಧ್ರುವ ಜೊತೆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

  English summary
  Sandalwood stars like Raghavendra Rajkumar, Pavan Wadeyar, Simple Suni and other stars wish Dhruva Sarja on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X