ಶಿವರಾಜ್ ಕುಮಾರ್ ಜನ್ಮದಿನಕ್ಕೆ ಶುಭಕೋರಿದ ಸ್ಯಾಂಡಲ್ ವುಡ್ ಸ್ಟಾರ್ಸ್

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಅಭಿಮಾನಿಗಳು, ಸ್ನೇಹಿತರು ಕುಟುಂಬದವರ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಲಂಡನ್ ನಲ್ಲಿರುವ ಶಿವರಾಜ್ ಕುಮಾರ್ ಅವರಿಗೆ ಶುಭಹಾರೈಸಿದ್ದಾರೆ.

ಪ್ರತೀವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಶಿವಣ್ಣ ಈ ಬಾರಿ ಲಂಡನ್ ನಲ್ಲಿ ಇದ್ದಾರೆ. ಅಭಿಮಾನಿಗಳನ್ನು ಮಿಸ್ ಮಾಡಿಕೊಂಡಿರುವ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ ಶಿವಣ್ಣ. 57ನೇ ವಸಂತಕ್ಕೆ ಕಾಲಿಟ್ಟಿರುವ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ಹಾಡೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಜೊತೆಗೆ ಮಹಾನ್ ಕಲಾವಿದ ಎನ್ನುವ ಬಿರುದು ಕೂಡ ನೀಡಿದ್ದಾರೆ.

ಶಿವಣ್ಣ ಅಭಿಮಾನಿಗಳಿಂದ ದೂರ ಇದ್ದರು ಸಹ ಫೇಸ್ ಬುಕ್ ಲೈವ್ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅಭಿಮಾನಿಗಳ ಪ್ರೀತಿ, ವಿಶ್ವಾಸ ಕಂಡು ಗಳಗಳನೆ ಅತ್ತಿದ್ದಾರೆ. ಭುಜದ ಸರ್ಜರಿ ಮಾಡಿಸಿಕೊಂಡು ಲಂಡನ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹ್ಯಾಟ್ರಿಕ್ ಹೀರೋಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಶುಭ ಹಾರೈಸಿದ್ದಾರೆ. ಮುಂದೆ ಓದಿ..

ಶಿವಣ್ಣನಿಗೆ ವಿಶ್ ಮಾಡಿದ ಸುದೀಪ್

ಶಿವಣ್ಣನಿಗೆ ವಿಶ್ ಮಾಡಿದ ಸುದೀಪ್

"ಚಿರಯುವಕ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಯಾವಾಗಲು ಆರೋಗ್ಯ ಮತ್ತು ಸಂತೋಷದಿಂದ ಇರಿ. ದಶಕಳಿಂದ ನಮ್ಮನ್ನು ರಂಜಿಸುತ್ತಿರುವುದಕ್ಕೆ ಧನ್ಯವಾದಗಳು. ಅನೇಕ ಜನರಿಗೆ ನೀವು ಸ್ಫೂರ್ತಿಯಾಗಿದ್ದೀರಿ. ಯಾವಾಗಲು ನಗುತ್ತಿರಿ" ಎಂದು ಶಿವಣ್ಣ ಅವರಿಗೆ ಶುಭಹಾರೈಸಿದ್ದಾರೆ.

ಉಪೇಂದ್ರ ಅವರಿಂದ ವಿಶೇಷ ಶುಭಾಶಯ

ಉಪೇಂದ್ರ ಅವರಿಂದ ವಿಶೇಷ ಶುಭಾಶಯ

"ನಮ್ಮೆಲ್ಲರ ಪ್ರೀತಿಯ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನಗುತಾ ನಗುತಾ ಬಾಳು ನೀನು ನೂರು ವರುಷ" ಎಂದು ರಿಯಲ್ ಸ್ಟಾರ್ ಪ್ರೀತಿಯಂದ ಶುಭ ಹಾರೈಸಿದ್ದಾರೆ.

ಕರುನಾಡ ಕಣ್ಮಣಿಗೆ ಪವನ್ ಒಡೆಯರ್ ವಿಶ್

ಕರುನಾಡ ಕಣ್ಮಣಿಗೆ ಪವನ್ ಒಡೆಯರ್ ವಿಶ್

"ಭಾರತೀಯ ಚಿತ್ರರಂಗದ ಚಿರಯುವಕ. ಕರುನಾಡ ಕಣ್ಮಣಿ Dr ಶಿವಣ್ಣ ನೀವು ನೂರು ಕಾಲ ನಗು ನಗುತ ಬಾಳಿ. ಹುಟ್ಟು ಹಬ್ಬದ ಶುಭಾಶಯಗಳು" ಎಂದು ಹೇಳಿದ್ದಾರೆ.

ರಸಿಕರ ಯುವರಾಜನಿಗೆ ಸುನಿ ಶುಭಾಶಯ

ರಸಿಕರ ಯುವರಾಜನಿಗೆ ಸುನಿ ಶುಭಾಶಯ

"Young and Energetic. ಹ್ಯಾಟ್ರಿಕ್ ಹಿರೋ. ಕರುನಾಡ ಚಕ್ರವರ್ತಿ.

ರಸಿಕರ ಯುವರಾಜ.ಸದಾ ಚಿರಯುವಕ.ಡಾ! ಡಾ! ಡಾ! ಡಾ.ಶಿವರಾಜ್ ಕುಮಾರ್

ನಮ್ಮೆಲ್ಲರ ಪ್ರೀತಿಯ ಶಿವಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಯುವಕರಿಗೆ ಸ್ಪೂರ್ತಿಯ ಚಿಲುಮೆ. ನಿಮ್ಮ ಜೀವನ ಮನಮೋಹಕವಾಗಿರಲಿ"

ಕರುನಾಡ ಚಿರಯುವಕ ಶಿವಣ್ಣ

ಕರುನಾಡ ಚಿರಯುವಕ ಶಿವಣ್ಣ

"ಸಿನಿಮಾದಲ್ಲಿ ಹೀರೋಯಿನ್ಸ್ ಹಾಗು ನಿಜ ಜೀವನದಲ್ಲಿ ಗೀತಾ ma'am ರನ್ನು ಬಿಟ್ಟು, ಎಲ್ಲರಿಗೂ ಅಣ್ಣನಾದ ಕರುನಾಡ ಚಿರಯುವಕ ಡಾ||ಶಿವಣ್ಣ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು"

ಬೇಗ ಗುಣಮುಖರಾಗಿ-ನಿರೂಪ್ ಭಂಡಾರಿ

ಬೇಗ ಗುಣಮುಖರಾಗಿ-ನಿರೂಪ್ ಭಂಡಾರಿ

"ಹುಟ್ಟುಹಬ್ಬದ ಶುಭಾಶಯಗಳು ಶಿವಣ್ಣ. ಬೇಡ ಗುಣಮುಖರಾಗಿ ಮತ್ತು ಯಾವಾಗಲು ನಿಮ್ಮ ಆರೋಗ್ಯ ಚನ್ನಾಗಿರಲಿ ಎಂದು ಬೇಡಿಕೊಳ್ಳುತ್ತೇನೆ" ನಿರೂಪ್ ಭಂಡಾರಿ ಹುಟ್ಟುಹಬ್ಬಕ್ಕೆ ಶುಭ ಕೋರುವ ಜೊತೆಗೆ ಬೇಗ ಗುಣಮುಖರಾಗಿ ಎಂದು ಬೇಡಿಕೊಂಡಿದ್ದಾರೆ.

More from Filmibeat

English summary
Sandalwood stars wish to Hatrick Hero Shivarajkumar birthday. Shiva Rajkumar celebreted birthday In London.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X