»   » 2015ರಲ್ಲಿ ಸ್ವಮೇಕ್ ಸಿನಿಮಾಗಳದ್ದೇ ಚಕ್ರಾಧಿಪತ್ಯ

2015ರಲ್ಲಿ ಸ್ವಮೇಕ್ ಸಿನಿಮಾಗಳದ್ದೇ ಚಕ್ರಾಧಿಪತ್ಯ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 2014 ರೀಮೇಕ್ ಸಿನಿಮಾಗಳ ವರ್ಷ ಅನ್ನೋ ಕೂಗು ಜೋರಾಗಿ ಕೇಳಿ ಬಂದಿತ್ತು. ತೆರೆಕಂಡ ಸಿನಿಮಾಗಳಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳು ರೀಮೇಕ್ ಇದ್ರೆ ಗೆದ್ದ ಸಿನಿಮಾಗಳಲ್ಲಿ ಸಿಂಹಪಾಲು ರೀಮೇಕ್ ಗಳದ್ದೆ ಎಂಬುದು ಗಮನಾರ್ಹ ಸಂಗತಿ.

'ಉಗ್ರಂ', 'ಗಜಕೇಸರಿ' ಸೇರಿದಂತೆ ಗೆದ್ದ ಸಿನಿಮಾಗಳಲ್ಲಿ ಸ್ವಮೇಕ್ ತೀರಾ ಕಡಿಮೆ. ಆದ್ರೆ ಮಾಣಿಕ್ಯ, ದೃಶ್ಯ, ಒಗ್ಗರಣೆ, ಚಂದ್ರಲೇಖ ಹೀಗೆ ರೀಮೇಕ್ ಸಾಲು ಮಾತ್ರ ಹನುಮನ ಬಾಲ. ಆದ್ರೆ 2015ರ ವರ್ಷ ಹಾಗಲ್ಲ ಇದು ಸ್ವಮೇಕ್ ಜಮಾನಾ ಅನ್ನೋದ್ರಲ್ಲಿ ಅನುಮಾನ ಬೇಡ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಸ್ಯಾಂಡಲ್ ವುಡ್ ನ ಅಷ್ಟೂ ಸ್ಟಾರ್ ಗಳು ಒಂದಲ್ಲ ಎರಡೆರೆಡು ಸ್ವಮೇಕ್ ಸಿನಿಮಾಗಳ ಮೂಲಕ 2015ರ ವರ್ಷ ತೆರೆಗೆ ಬರ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಕಥೆಗಳೂ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಿಗೆ ರೀಮೇಕಾಗ್ತಿದ್ದು ಕನ್ನಡ ಸಿನಿಕರ್ಮಿಗಳು ಮೈ ಕೊಡವಿ ನಿಂತಿದ್ದಾರೆ. ಸೋ ಮುಂದಿನ ವರ್ಷ ಬರಲಿರೋ ಸ್ವಮೇಕ್ ಸಿನಿಮಾ ಸಂತೆಯ ಡೀಟೇಲ್ಸ್ ನೋಡ್ತಾ ಹೋಗಿ. [2014ರ ವಾದ ವಿವಾದ, ಜಗಳ ಒಳಜಗಳ ರೌಂಡಪ್]

ರಿಯಲ್ ಸ್ಟಾರ್ ಧಮಾಕಾ

ರಿಯಲ್ ಸ್ಟಾರ್ ಉಪ್ಪಿ ವರ್ಷಾರಂಭದಲ್ಲಿ ಸ್ವಮೇಕ್ ಧಮಾಕಾ 'ಶಿವಂ' ಜೊತೆ ಎಂಟ್ರಿ ಪಡ್ಕೋತಾ ಇದ್ರೆ ಅದ್ರ ನಂತರ ಮೋಸ್ಟ್ ಎಕ್ಸ್ ಪೆಕ್ಟೆಡ್ ಉಪ್ಪಿ-2 ಚಿತ್ರ ತೆರೆಕಾಣಲಿದೆ.

ಯಶ್ ಈಗ ಮಾಸ್ಟರ್ ಪೀಸ್

ಯಂಗ್ ರಾಮಾಚಾರಿ ಯಶ್ ಹೊಸ ವರ್ಷದಲ್ಲಿ ಸ್ವಮೇಕ್ ರಾಮಾಚಾರಿ ಮೂಲಕ ಈಯರ್ ಎಂಡ್ ಜೊತೆ ನ್ಯೂ ಈಯರ್ ಆರಂಭಿಸ್ತಾ ಇದ್ದು ಇನ್ನೂ ನಾಲ್ಕು ಸ್ವಮೇಕ್ ಸಿನಿಮಾ ಮಾಡೋ ಜೋಷ್ ನಲ್ಲಿದ್ದು ಯಶ್ ನಂತಹಾ ಮಾಸ್ಟರ್ ಪೀಸ್ ಗೆ ರೀಮೇಕ್ ಅವಶ್ಯಕಥೇನೇ ಇಲ್ಲ ಅಂತಿದೆ ಗಾಂಧಿನಗರ.

ಪವರ್ ಸ್ಟಾರ್ ರಣವಿಕ್ರಮ

ಪವರ್ ಸ್ಟಾರ್ ಪುನೀತ್ ರಣವಿಕ್ರಮ ಚಿತ್ರದ ಟೀಸರ್ ಹೊರಬಂದಿದ್ದು ಚಿತ್ರವನ್ನ ಹೊಸವರ್ಷಕ್ಕೆ ತೆರೆಗೆ ತರೋ ಪ್ಲಾನ್ ನಲ್ಲಿದ್ದು ಚಿತ್ರದ ಟೀಸರ್ ಈಗಾಗ್ಲೇ ಹೊರಬಂದಿದೆ. ಇನ್ನು ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ಪುನೀತ್ ಅಭಿನಯದ ಸ್ವಮೇಕ್ ಚಿತ್ರ ಮೈತ್ರಿ ಕೂಡ ರಣವಿಕ್ರಮ ನಂತರ ತೆರೆಗೆ ಬರುತ್ತೆ.

ದರ್ಶನ್ ಐರಾವತ

ದರ್ಶನ್ ಐರಾವತನಾಗಿ ಎಂಟ್ರಿಕೊಡೋಕೆ ಅಬ್ಬರದ ಶೂಟಿಂಗ್ ಸಾಗಿದ್ದು, ಮುಂದಿನ ಚಿತ್ರ ಚಕ್ರವರ್ತಿ ಅಥವಾ ಜಗ್ಗೂದಾದ ಆದ್ರೆ ಅವು ಕೂಡ ಸ್ವಮೇಕ್ ಅನ್ನೋದ್ರಲ್ಲಿ ಅನುಮಾನವಿಲ್ಲ.

ಹೆಬ್ಬುಲಿಯಾಗಿ ಕಿಚ್ಚ

ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ಈ ವರ್ಷ ಆರ್ಮಿ ಆಫೀಸರ್ ಆಗಿ ಹೆಬ್ಬುಲಿಯಾಗಿ ಬರಲಿದ್ದಾರೆ. ರೀಮೇಕ್ ಹಣೆಪಟ್ಟಿಯಿಂದ ಬೇಸತ್ತಿರೋ ಕಿಚ್ಚ ಸ್ವಮೇಕ್ ಚಿತ್ರವೊಂದನ್ನ ತಾನೇ ನಿರ್ದೇಶನ ಮಾಡ್ತಿದ್ದು ಅದೂ ಕೂಡ ಈ 2015ರ ವರ್ಷದಲ್ಲೇ ಸೆಟ್ಟೇರಲಿದೆ.

ಗಣೇಶ್ ಬುಗುರಿ, ಸ್ಟೈಲ್ ಕಿಂಗ್

ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಮುಂದಿನ ವರ್ಷ ಸ್ವಮೇಕ್ ಸಿನಿಮಾಗಳ ಮಿಂಚು ಹರಿಸಲಿದ್ದಾರೆ. ಎಂಡಿ ಶ್ರೀಧರ್ ನಿರ್ದೇಶನದ ಬುಗುರಿ ಮತ್ತು ರೋಮಿಯೋ ಶೇಖರ್ ನಿರ್ದೇಶನದ ಸ್ಟೈಲ್ ಕಿಂಗ್ ಚಿತ್ರಗಳು ಸ್ವಮೇಕ್ ಧಮಾಕಾಗಳಾಗಿ ಹೊರಹೊಮ್ಮಲಿವೆ.

ದುನಿಯಾದಿಂದ ಕೋಬ್ರಾ

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಿ ಅಭಿನಯದ 'ಕೋಬ್ರಾ' ಚಿತ್ರ ವಿಜಿ ಅಭಿನಯದ ಮತ್ತೊಂದು ಹಬ್ಬ. ವಿಜಿ ಅಭಿನಯದ ಮತ್ತೊಂದು ಚಿತ್ರ 'ಆರ್ ಎಕ್ಸ್ ಸೂರಿ' ಕೂಡ ಮುಂದಿನ ವರ್ಷದ ಸ್ವಮೇಕ್ ಪಟ್ಟಿಗೆ ಸೇರಿದೆ.

ದಳಪತಿ, ಮಳೆ ಮಸ್ತ್ ಸಿನಿಮಾಗಳು ನೆನಪಿರಲಿ

ನೆನಪಿರಲಿ ಪ್ರೇಮ್ ಕೂಡ ಮುಂದಿನ ವರ್ಷ ಮೂರು ಮಸ್ತ್ ಸಿನಿಮಾಗಳ ಜೊತೆ ಬರ್ತಿದ್ದಾರೆ. ದಳಪತಿ, ಮಳೆ ಮತ್ತು ಮಸ್ತ್ ಮೊಹಬ್ಬತ್. ಹೀಗೆ ಈ ವರ್ಷ ರೀಮೇಕ್ ವರ್ಷವಾದ್ರೆ ಮುಂದಿನ ವರ್ಷ ಸ್ವಮೇಕ್ ವರ್ಷವಾಗೋದ್ರಲ್ಲಿ ಅನುಮಾನವಿಲ್ಲ.

English summary
Sandalwood film industry all set to receive more Swamake (original) movies in the year 2015. Real Star Upendra (Uppi 2, Shivam), Yash (Masterpiece), Puneeth Rajkumar (Ranavikrama), Sudeep (Hebbuli)...many more are in the list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada