Don't Miss!
- News
Vande Bharat Express ರೈಲಿನಲ್ಲಿ ಕಂಡುಬಂದ ಕಸದ ರಾಶಿ: ಫೋಟೊ ವೈರಲ್, ಕರ್ತವ್ಯ ಮರೆತ ಜನ ಎಂದ ನೆಟ್ಟಿಗರು
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವಾರದ ಟಾಪ್ ಸುದ್ದಿಗಳು: ಚೈತ್ರಾ ಮದ್ವೆ, ಜಗ್ಗೇಶ್ ಹೇಳಿಕೆ, ಯುವರತ್ನ ಪ್ರತಿಭಟನೆ
ಈ ವಾರ ಸ್ಯಾಂಡಲ್‌ವುಡ್ ಹಲವು ವಿಚಾರಕ್ಕೆ ಸುದ್ದಿಯಲ್ಲಿತ್ತು. ಚೈತ್ರಾ ಕೊಟೂರು ವಿವಾದಾತ್ಮಕ ಮದುವೆ, ನಟ ಜಗ್ಗೇಶ್ ಅವರು ಹೇಳಿಕೆಗೆ ಪರ-ವಿರೋಧದ ಚರ್ಚೆ, ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಆದೇಶ, ಯುವರತ್ನ ಪ್ರತಿಭಟನೆ, ಚಿತ್ರೀಕರಣದಲ್ಲಿ ಉಪೇಂದ್ರಗೆ ಪೆಟ್ಟು ಸೇರಿದಂತೆ ಹಲವು ಪ್ರಮುಖ ವಿಷಯಗಳು ಈ ವಾರ ವರದಿಯಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟವಾಯಿತು. ಅದಕ್ಕೆ ಪರ-ವಿರೋಧವೂ ವ್ಯಕ್ತವಾಯಿತು. ಸರ್ಪ್ರೈಸ್ ಎಂಬಂತೆ ಬಿಗ್ ಬಾಸ್ ಖ್ಯಾತಿಯ ಆಶಿತಾ ಚಂದ್ರಪ್ಪ ವೈವಾಹಿಕ ಜೀವನ ಆರಂಭಿಸಿದರು. ಚಂದನ್ ಕುಮಾರ್ ಮತ್ತು ಕವಿತಾ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾದರು. ಈ ವಾರದ ಟಾಪ್ ಸುದ್ದಿಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ...

ಚೈತ್ರಾ ಕೊಟೂರು ಮದುವೆ ವಿವಾದ
ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟೂರು ಮಂಡ್ಯ ಮೂಲದ ನಾಗಾರ್ಜುನ ಎನ್ನುವವರನ್ನು ಬಲವಂತವಾಗಿ ಮದುವೆಯಾದರು ಎಂಬ ಆರೋಪ ಕೇಳಿ ಬಂತು. ಈ ಸಂಬಂಧ ಕೋಲಾರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಯಿತು. ಮಾರ್ಚ್ 28 ರಂದು ಬೆಳಗ್ಗೆ ಕೆಲವು ಸಂಘಟನೆಗಳ ಸಮ್ಮುಖದಲ್ಲಿ ಚೈತ್ರಾ-ನಾಗಾರ್ಜುನ ಮದುವೆ ಆದರು. ಸಂಜೆ ವೇಳೆಗೆ ನಾಗಾರ್ಜುನ ಮನೆಯವರು ಚೈತ್ರಾ ವಿರುದ್ಧ ತಿರುಗಿಬಿದ್ದರು. ದೂರು ಸ್ವೀಕರಿಸಿದ ಪೊಲೀಸರು ಎರಡು ಕುಟುಂಬದವರಿಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಮಯಾವಕಾಶ ನೀಡಿ ಕಳುಹಿಸಿದ್ದರು.
Exclusive:
ನಡತೆಗೆಟ್ಟವಳು
ಎಂದಿದ್ದಾರೆ,
ಕೊಲೆ
ಬೆದರಿಕೆ
ಹಾಕಿದ್ದಾರೆ:
ವಿವಾದದ
ಬಗ್ಗೆ
ಚೈತ್ರಾ
ಪ್ರತಿಕ್ರಿಯೆ

ಜಗ್ಗೇಶ್ ಹೇಳಿಕೆಗೆ ಅಸಮಾಧಾನ
ಬಿಜೆಪಿ ಆಯೋಜಿಸಿದ್ದ 'ಮಾಧ್ಯಮ-ಮಂಥನ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಜಗ್ಗೇಶ್ ''ಯಾರ್ ಯಾರೋ ಹೀರೋಗಳು ಆಗ್ತಿದ್ದಾರೆ. ಹೆಚ್ಚು ಸಿನಿಮಾ ನೋಡಬೇಡಿ'' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಕೃಷಿ ಸಚಿವ ಬಿಸಿ ಪಾಟೀಲ್ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬಿಸಿ ಪಾಟೀಲ್ ಅವರಿಗೆ ಸ್ಪಷ್ಟನೆ ನೀಡಿದ ಜಗ್ಗೇಶ್ ''ನನ್ನ ಮಾತು ಸರಿಯಾಗಿ ಅರ್ಥೈಸಿಲ್ಲಾ. ನಾನು ಹೇಳಿದ್ದು ನಮ್ಮ ಕಲೆ ನಿಮ್ಮ 2 ಗಂಟೆ ಸಂತೋಷಕ್ಕೆ ಮಾತ್ರ ಬಳಸಿಕೊಳ್ಳಿ. ಮಿಕ್ಕಂತೆ ನೀವು ನಿಮ್ಮ ತಂದೆ ತಾಯಿ ಸಮಾಜಕ್ಕೆ ನಾಯಕರಾಗಿ. ನಿಮ್ಮ ರಸ್ತೆ, ನಿಮ್ಮ ಸಮಾಜ, ನಿಮ್ಮ ದೇಶಕ್ಕೆ ಹೀರೋ ಆಗಿರಿ. ಸಿನಿಮಾ ನಾಯಕರು ನನ್ನು ಸೇರಿ ನಿಮ್ಮ ರಂಜಿಸುವವರು ಮಾತ್ರ'' ಎಂದು ಜಗ್ಗೇಶ್ ಮತ್ತೆ ಸ್ಪಷ್ಟನೆ ನೀಡಿದರು.

ಪ್ರಜ್ವಲ್ ದಂಪತಿಗೆ ಕೊರೊನಾ
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಅವರಿಗೆ ಕೊರೊನಾ ಸೋಂಕು ತಗುಲಿತು. ಈ ಕುರಿತು ಏಪ್ರಿಲ್ 1 ರಂದು ಟ್ವೀಟ್ ಮಾಡಿ ಮಾಹಿತಿ ನೀಡಿದರು. ''ನನಗೆ ಮತ್ತು ರಾಗಿಣಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರೂ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇವೆ. ನಿಮ್ಮವರಿಗೆ ಆತಂಕ ಉಂಟು ಮಾಡಬೇಡಿ. ಸುರಕ್ಷಿತವಾಗಿರಿ, ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು'' ಎಂದು ಪ್ರಜ್ವಲ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ನೀವು
ಅರ್ಧಂಬರ್ಧ
ತಿಳಿದುಬಿಟ್ಟಿರಾ?
ಬಿಸಿ
ಪಾಟೀಲ್
ಟ್ವೀಟ್ಗೆ
ಸ್ಪಷ್ಟನೆ
ನೀಡಿದ
ಜಗ್ಗೇಶ್

ರಜನಿಕಾಂತ್‌ಗೆ ದಾದಾ ಸಾಹೇಬ್ ಫಾಲ್ಕೆ
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕೇಂದ್ರ ಸರ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟಿಸಿತು. ಪ್ರಧಾನಿ ಮೋದಿ, ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕರು ಶುಭಕೋರಿದರು. ತಮಿಳುನಾಡು ಚುನಾವಣೆ ಸಮಯದಲ್ಲಿ ರಜನಿಗೆ ಫಾಲ್ಕೆ ಪ್ರಶಸ್ತಿ ಘೋಷಿಸಿದ್ದಕ್ಕೆ ಕೆಲವರು ಟೀಕೆ ಸಹ ವ್ಯಕ್ತಪಡಿಸಿದರು.

ಆಶಿತಾ ಚಂದ್ರಪ್ಪ ಮದುವೆ
ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ ಆಶಿತಾ ಚಂದ್ರಪ್ಪ ವೈವಾಹಿಕ ಬದುಕಿಗೆ ಕಾಲಿಟ್ಟರು. ನೀಲಿ, ಜೊತೆ ಜೊತೆಯಲಿ, ರಾಧ ರಮಣ ಅಂತಹ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಆಶಿತಾ, ರೋಹನ್ ರಾಘವೇಂದ್ರ ಜೊತೆ ಮಾರ್ಚ್ 31 ಸಪ್ತಪದಿ ತುಳಿದರು.
ಒಂದು
ಸಣ್ಣ
ಘಟನೆ,
ನಾನು
ಆರಾಮಾಗಿ
ಇದ್ದೀನಿ;
ನಟ
ಉಪೇಂದ್ರ
ಪ್ರತಿಕ್ರಿಯೆ

ಚಂದನ್-ಕವಿತಾ ನಿಶ್ಚಿತಾರ್ಥ
'ಲಕ್ಷ್ಮಿ ಬಾರಮ್ಮ' ಖ್ಯಾತಿಯ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಪರಸ್ಪರ ಉಂಗುರ ಬದಲಿಸಿಕೊಂಡರು. ಮೇ ತಿಂಗಳಲ್ಲಿ ವಿವಾಹವಾಗುವುದಾಗಿ ತಿಳಿಸಿದ್ದಾರೆ.

ಯುವರತ್ನ ರಿಲೀಸ್
ಏಪ್ರಿಲ್ 1 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ತೆರೆಕಂಡಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬಂದಿದೆ. ಎಲ್ಲೆಡೆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

50 ಪರ್ಸೆಂಟ್ ಆದೇಶದ 'ಕಿಡಿ'
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಶುಕ್ರವಾರ ಸಂಜೆ ವೇಳೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳ ಚಿತ್ರಮಂದಿರಕ್ಕೆ 50 ಪರ್ಸೆಂಟ್ ಆದೇಶ ಮಾಡಿತು. ಯಾವುದೇ ಸುಳಿವು ನೀಡದ ಸರ್ಕಾರ ತೆಗೆದುಕೊಂಡ ನಿರ್ಧಾರದ ವಿರುದ್ಧ ಚಿತ್ರರಂಗ ತಿರುಗಿಬಿತ್ತು. ಫಿಲಂ ಚೇಂಬರ್ ಎದುರು ಪ್ರತಿಭಟನೆ ಮಾಡಿದರು. ಫಿಲಂ ಚೇಂಬರ್ ಅಧ್ಯಕ್ಷ, ಯುವರತ್ನ ಚಿತ್ರತಂಗಳು ಸಿಎಂ ಭೇಟಿ ನೀಡಿ ಮನವಿ ಮಾಡಿದರು. ಚಿತ್ರರಂಗದ ಒತ್ತಾಯ ಮಣಿದ ಸರ್ಕಾರ ಹೊಸ ಆದೇಶವನ್ನು ಮೂರು ದಿನಗಳ ಕಾಲ ಮುಂದೂಡಿದೆ. ಏಪ್ರಿಲ್ 7 ರಿಂದ ಹೊಸ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಮರುಪ್ರಕಟಣೆ ಮಾಡಿದೆ.
Recommended Video

ಉಪೇಂದ್ರಗೆ ಪೆಟ್ಟು
'ಕಬ್ಜ' ಸಿನಿಮಾದ ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಅಚಾನಕ್ ಆಗಿ ಕಬ್ಬಿಣದ ರಾಡ್ ಉಪೇಂದ್ರ ತೆಲೆಗೆ ತಾಗಿ, ಪೆಟ್ಟಾಗಿತ್ತು. ಫೈಟರ್ ಹೊಡೆದ ಏಟಿನಿಂದ ಉಪೇಂದ್ರ ಅಲ್ಲೇ ಕುಸಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಉಪೇಂದ್ರ ಅವರಿಗೆ ಏಟಾಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕಗೊಂಡಿದ್ದರು. ನಂತರ ''ತೊಂದರೆ ಇಲ್ಲ ನಾನು ಆರಾಮವಾಗಿದ್ದೇನೆ'' ಎಂದು ಉಪೇಂದ್ರ ಸ್ಪಷ್ಟನೆ ನೀಡಿದ್ದರು.