For Quick Alerts
  ALLOW NOTIFICATIONS  
  For Daily Alerts

  ದೀಪಾವಳಿಗೆ ಹೊಸ ಪೋಸ್ಟರ್‌ಗಳನ್ನು ಬಿಟ್ಟು ಕುತೂಹಲ ಹೆಚ್ಚಿಸಿದ ಚಿತ್ರಗಳು

  |

  ಎಲ್ಲವೂ ಸಹಜವಾಗಿ ಇದ್ದಿದ್ದರೆ ದೀಪಾವಳಿ ಹಬ್ಬದ ಪ್ರಯುಕ್ತ ಯಾವುದಾರೂ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿತ್ತು. ಆದ್ರೆ, ಕೊರೊನಾ ಎಂಬ ವೈರಸ್‌ನಿಂದ ಪರಿಸ್ಥಿತಿ ಬದಲಾಯ್ತು. ಆದರೂ ಅಭಿಮಾನಿಗಳನ್ನು ನಿರಾಸೆ ಮಾಡದ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ದೀಪಾವಳಿಗೆ ಶುಭಕೋರಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ರಾಬರ್ಟ್ ಚಿತ್ರತಂಡ ಕೇವಲ ಶುಭಾಶಯ ಮಾತ್ರ ಕೋರಿದೆ. ಸತೀಶ್ ನೀನಾಸಂ ನಟನೆಯ ದಸರಾ ಚಿತ್ರತಂಡವೂ ವಿಶ್ ಮಾಡಿದೆ. ಆದ್ರೆ, ಜೋಗಿ ಪ್ರೇಮ್, ರಕ್ಷಿತ್ ಶೆಟ್ಟಿ, ಉಪೇಂದ್ರ, ದುನಿಯಾ ವಿಜಯ್ ತಮ್ಮ ಚಿತ್ರಗಳ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಮುಂದೆ ಓದಿ...

  ದೀಪಾವಳಿ ಹಬ್ಬಕ್ಕೆ ತಾರೆಯರ ಶುಭಾಶಯ: ದರ್ಶನ್, ಸುದೀಪ್, ಜಗ್ಗೇಶ್ ಹೇಳಿದ್ದೇನು?ದೀಪಾವಳಿ ಹಬ್ಬಕ್ಕೆ ತಾರೆಯರ ಶುಭಾಶಯ: ದರ್ಶನ್, ಸುದೀಪ್, ಜಗ್ಗೇಶ್ ಹೇಳಿದ್ದೇನು?

  ಏಕ್ ಲವ್ ಯಾ

  ಏಕ್ ಲವ್ ಯಾ

  ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ನಿರೀಕ್ಷೆಯ ಸಿನಿಮಾ ಏಕ್ ಲವ್ ಯಾ. ರಕ್ಷಿತಾ ಅವರ ಸಹೋದರ ರಾಣಾ ನಟಿಸುತ್ತಿರುವ ಚೊಚ್ಚಲ ಚಿತ್ರ. ದೀಪಾವಳಿ ಹಬ್ಬದ ಪ್ರಯುಕ್ತ ಏಕ್ ಲವ್ ಯಾ ಚಿತ್ರದ ವಿಶೇಷವಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ ನಿರ್ದೇಶಕ ಪ್ರೇಮ್.

  ಶಶಾಂಕ್-ಉಪ್ಪಿ 54

  ಶಶಾಂಕ್-ಉಪ್ಪಿ 54

  ಶಶಾಂಕ್ ಮತ್ತು ಉಪೇಂದ್ರ ನಿರ್ದೇಶನದಲ್ಲಿ ಹೊಸ ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ ಟೈಟಲ್ ಅಂತಿಮವಾಗಿಲ್ಲ. ಉಪ್ಪಿ ಅಭಿನಯದ 54ನೇ ಸಿನಿಮಾ ಇದಾಗಿದೆ. ನೈಜ ಘಟನೆಗಳನ್ನು ಆಧರಿಸಿ ತಯಾರಾಗಲಿರುವ ಈ ಚಿತ್ರ 2021ಕ್ಕೆ ಶುರುವಾಗಲಿದೆ.

  ಚಾರ್ಲಿ 777

  ಚಾರ್ಲಿ 777

  ರಕ್ಷಿತ್ ಶೆಟ್ಟಿ ನಟಿಸಿರುವ ಚಾರ್ಲಿ 777 ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಿರುವ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ರಿಲೀಸ್ ಆಗಬಹುದು.

  ದುನಿಯಾ 'ಸಲಗ'

  ದುನಿಯಾ 'ಸಲಗ'

  ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾ ಸಲಗ. ಚೊಚ್ಚಲ ಬಾರಿ ವಿಜಿ ಆಕ್ಷನ್ ಕಟ್ ಹೇಳಿದ್ದಾರೆ. ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಸಲಗ ಚಿತ್ರತಂಡವೂ ಶುಭಕೋರಿದೆ.

  ಸಿಹಿ ಸುದ್ದಿ ಕೊಟ್ಟ ಕೃಷ್ಣಲೀಲ ಸುಂದರಿ ಮಯೂರಿ | Filmibeat Kannada
  ರಾಜಾಮಾರ್ತಂಡ

  ರಾಜಾಮಾರ್ತಂಡ

  ದಿವಂಗತ ನಟ ಚಿರಂಜೀವಿ ಸರ್ಜಾ ನಟನೆಯಲ್ಲಿ ತಯಾರಾಗಿದ್ದ ಚಿತ್ರ ರಾಜಾಮಾರ್ತಂಡ. ಲಾಕ್‌ಡೌನ್‌ಗೂ ಮೊದಲೇ ರಿಲೀಸ್ ಗೆ ಸಿದ್ಧವಾಗಿತ್ತು. ಆದ್ರೆ, ಬಿಡುಗಡೆಯಾಗಿರಲಿಲ್ಲ. ಈಗ ತೆರೆಗೆ ಬರಲು ಸಜ್ಜಾಗಿರುವ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ಶುಭಕೋರಿದೆ.

  English summary
  Sandalwood various movies Wishing Everyone A Very Happy Deepavali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X