For Quick Alerts
  ALLOW NOTIFICATIONS  
  For Daily Alerts

  Lohitashwa Passed Away : ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ

  |

  ಚಂದನವನದ ಹಿರಿಯ ನಟ ಲೋಹಿತಾಶ್ವ ಇಂದು ( ನವೆಂಬರ್ 8 ) ಇಹಲೋಕ ತ್ಯಜಿಸಿದ್ದಾರೆ. 1942ರ ಆಗಸ್ಟ್ 5ರಂದು ತುಮಕೂರಿನ ತೊಂಡಗೆರೆಯಲ್ಲಿ ಜನಿಸಿದ್ದ ಲೋಹಿತಾಶ್ವ ಅವರಿಗೆ 80 ವರ್ಷ ವಯಸ್ಸಾಗಿತ್ತು. ಹೃದಯಾಘಾತ ಹಿನ್ನೆಲೆ ಹಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಲೋಹಿತಾಶ್ವ ಮಧ್ಯಾಹ್ನ 2.45ಕ್ಕೆ ಕೊನೆಯುಸಿರೆಳೆದಿದ್ದಾರೆ.

  ಐನೂರಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಲೋಹಿತಾಶ್ವ ಹಲವಾರು ನಾಟಕಗಳು ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಲೋಹಿತಾಶ್ವ ಅವರು ಕೇವಲ ನಟನಾಗಿ ಮಾತ್ರವಲ್ಲದೇ ನಾಟಕ ರಚನಕಾರ ಹಾಗೂ ಆಂಗ್ಲ ಪ್ರಾಧ್ಯಾಪಕರೂ ಸಹ ಆಗಿದ್ದರು.

  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಸಾಹಿತ್ಯದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಲೋಹಿತಾಶ್ವ 1971ರಲ್ಲಿ ವತ್ಸಲ ಎಂಬುವವರನ್ನು ವಿವಾಹವಾದರು ಹಾಗೂ ಲೋಹಿತಾಶ್ವ ಅವರಿಗೆ ಒಟ್ಟು ಮೂವರು ಮಕ್ಕಳಿದ್ದು ಈ ಪೈಕಿ ಪುತ್ರ ಶರತ್ ಲೋಹಿತಾಶ್ವ ಕನ್ನಡ ಚಿತ್ರರಂಗದ ಹೆಸರಾಂತ ಖಳ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

  ಲೋಹಿತಾಶ್ವ ಅಭಿನಯದ ಧಾರಾವಾಹಿಗಳು: ಕನ್ನಡ ಧಾರಾವಾಹಿಗಳಲ್ಲಿ ಇತಿಹಾಸ ಸೃಷ್ಟಿಸಿದ್ದ ನಟ ಶಂಕರ್‌ ನಾಗ್‌ ಅಭಿನಯದ 'ಮಾಲ್ಗುಡಿ ಡೇಸ್‌' ಧಾರಾವಾಹಿಯಲ್ಲಿ ಲೋಹಿತಾಶ್ವ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಗಿರೀಶ್‌ ಕಾಸರವಳ್ಳಿಯವರ 'ಗೃಹಭಂಗ', ಜಿ.ವಿ ಅಯ್ಯರ್‌ ನಿರ್ದೇಶನದ 'ನಾಟ್ಯರಾಣಿ ಶಕುಂತಲಾ', ಕೆ.ಎಂ ಚೈತನ್ಯಾ ನಿರ್ದೇಶನದ 'ಓಂ ನಮೋ' ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಲೋಹಿತಾಶ್ವ ಅವರು ಕರ್ನಾಟಕದ ಮನೆ ಮಾತಾಗಿದ್ದರು.

  ಲೋಹಿತಾಶ್ವ ಅಭಿನಯಿಸಿದ್ದ ಪ್ರಮುಖ ಚಿತ್ರಗಳು: 1981ರ 'ಮುನಿಯನ ಮಾದರಿ', 'ಸಾಂಗ್ಲಿಯಾನ', 'ಅಭಿಮನ್ಯು', 'ದಾದಾ', 'ಎ.ಕೆ 47', 'ಗೀತಾ', 'ಇಂದ್ರಜಿತ್‌', 'ಜಯಸಿಂಹ', 'ಕಾಡಿನ ರಾಜ', 'ಲಾಕಪ್ ಡೆತ್‌', 'ಕಲಾವಿದ', 'ಚಿನ್ನಾ', 'ಮಿಡಿದ ಹೃದಯಗಳು', 'ಮೈಸೂರು ಜಾಣ', 'ರೆಡಿಮೇಡ್‌ ಗಂಡ', 'ಎಸ್‌.ಪಿ ಸಾಂಗ್ಲಿಯಾನ ಭಾಗ-2', 'ಸ್ನೇಹಲೋಕ', 'ಸುಂದರ ಕಾಂಡ', 'ತುಂಬಿದ ಮನೆ', 'ಸವ್ಯ ಸಾಚಿ', 'ಶಾಂತಿ ನಿವಾಸ', 'ಸಮಯದ ಗೊಂಬೆ', 'ನೀ ಬರೆದ ಕಾದಂಬರಿ', 'ಹಲೋ ಡ್ಯಾಡಿ', 'ಏಕಲವ್ಯ', 'ಆಪತ್ಭಾಂಧವ', 'ಚಾಣಕ್ಯ', ಸೇರಿದಂತೆ ಅನೇಕ ಚಿತ್ರಗಳಲ್ಲಿ ಲೋಹಿತಾಶ್ವ ನಟಿಸಿದ್ದರು.

  ಲೋಹಿತಾಶ್ವ ನಟಿಸಿದ್ದ ನಾಟಕಗಳು: 47 ಮಾರವಳ್ಳಿ ಸರ್ಕಲ್‌, ಭರತ ದರ್ಶನ, ಚಸ್ನಾಳ ದುರಂತ, ದಂಗೆ ಮುಂಚಿನ ದಿನಗಳು, ಹುಲಿಯ ನೆರಳು, ಹುಟ್ಟಾವ ಬಡಿದರೇ, ಕತ್ತಲೆ ದಾರಿ ದೂರ, ಹುಲಿಯ ನೆರಳು, ಮೆರವಣಿಗೆ ಸೇರಿದಂತೆ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ.

  Read more about: actor sandalwood
  English summary
  Sandalwood Veteran Actor Lohitashwa Passed Away
  Tuesday, November 8, 2022, 17:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X