ಸ್ಯಾಂಡಲ್‌ವುಡ್ ಯುವ ನಿರ್ದೇಶಕ ಕೊರೊನಾಕ್ಕೆ ಬಲಿ

ಕೊರೊನಾ ಎರಡನೇ ಅಲೆ ಸಾವಿರಾರು ಜೀವನಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಹಲವು ಮಂದಿ ಯುವಕರು ಸಹ ಎರಡನೇ ಅಲೆಯಲ್ಲಿ ಕೊರೊನಾಕ್ಕೆ ಬಲಿಯಾಗುತ್ತಿದ್ದಾರೆ.

ಹಲವು ಸ್ಯಾಂಡಲ್‌ವುಡ್‌ ಮಂದಿ ಸಹ ಕಳೆದ ಕೆಲವೇ ದಿನಗಳಲ್ಲಿ ಕೊರೊನಾಕ್ಕೆ ಬಲಿ ಆಗಿದ್ದು, ಇದೀಗ ಚಂದನವನದ ಯುವ ಸಿನಿಮಾ ನಿರ್ದೇಶಕ ಕೊರೊನಾದಿಂದಾಗಿ ನಿಧನ ಹೊಂದಿದ್ದಾರೆ.

36 ವರ್ಷದ ಯುವ ಸಿನಿಮಾ ನಿರ್ದೇಶಕ ನವೀನ್ ಅವರು ನಿನ್ನೆ ಕೊರೊನಾ ವೈರಸ್‌ನಿಂದಾಗಿ ನಿಧನ ಹೊಂದಿದ್ದಾರೆ. ಮಂಡ್ಯ ಜಿಲ್ಲೆಯವರಾದ ನವೀನ್ ಅವರನ್ನು ಅವರ ಸ್ವಗೃಹದಲ್ಲಿ ಕೊವಿಡ್ ನಿಯಮಗಳುನಸಾರ ಅಂತಿಮ ಸಂಸ್ಕಾರ ಮಾಡಲಾಗಿದೆ.

 Sandalwood Young Director Naveen Died Of COVID 19

ನವೀನ್ ಅವರು 'ಒನ್‌ಡೇ' ಹೆಸರಿನ ಸಿನಿಮಾವನ್ನು 2011 ರಲ್ಲಿ ನಿರ್ದೇಶನ ಮಾಡಿದ್ದರು. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ನವೀನ್ ಕೆಲಸ ಮಾಡಿದ್ದರು.

ಕೆಲವೇ ದಿನಗಳ ಅಂತರದಲ್ಲಿ ಸ್ಯಾಂಡಲ್‌ವುಂಡ್ ಒಂದರಲ್ಲೇ ಹಲವು ಸೆಲೆಬ್ರಿಟಿಗಳು ಕೋವಿಡ್‌ ನಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಚಂದನವನದ ಯುವ ನಿರ್ಮಾಪಕ ರಾಜಶೇಖರ್, ಖ್ಯಾತ ನಿರ್ಮಾಪಕ ರಾಮು, ನಿರ್ಮಾಪಕ ಚಂದ್ರಶೇಖರ್, ಮೇಕಪ್‌ಮ್ಯಾನ್ ಸೀನ, ಪುಟ್ಟಣ ಕಣಗಾಲ್ ಪುತ್ರ, ಡಿಸೈನರ್ ಮಸ್ತಾನ್ ಇವರೆಲ್ಲರುಗಳು ಕೆಲವೇ ದಿನಗಳ ಅಂತರದಲ್ಲಿ ಕೊರೊನಾಕ್ಕೆ ಬಲಿ ಆಗಿದ್ದಾರೆ.

Recommended Video

Prajwal ದಂಪತಿ ಲಾಕ್ ಡೌನ್ ಸಮಯವನ್ನು ಹೇಗೆ ಎಂಜಾಯ್ ಮಾಡ್ತಿದ್ದಾರೆ ನೋಡಿ | Filmibeat Kannada

ಬೆಂಗಳೂರಿನಲ್ಲಿ ಕೊರೊನಾ ಮಿತಿ ಮೀರುತ್ತಿದ್ದು, ರೋಗಿಗಳು ಆಸ್ಪತ್ರೆ ಬೆಡ್, ಆಮ್ಲಜನಕ ಇಲ್ಲದೆ ಒದ್ದಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಸರ್ಕಾರದ ಲೆಕ್ಕದ ಪ್ರಕಾರ ಪ್ರತಿ ದಿನಕ್ಕೆ ಸರಾಸರಿ 200 ಮಂದಿ ಕೊರೊನಾದಿಂದ ಮೃತರಾಗುತ್ತಿದ್ದಾರೆ.

More from Filmibeat

English summary
Sandalwood young director Naveen died of COVID 19. He directed 'One Day' movie in 2011. He associated for many movies in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X