ಅಪ್ಪು 'ಗಂಧದಗುಡಿ' ಹಾದಿಯಲ್ಲಿ 'ನೀಲ್‌ಗಿರೀಸ್'; ಈ ವಾರ ತೆರೆಮೇಲೆ ಜೀವವೈವಿಧ್ಯ ದೃಶ್ಯವೈಭವ

ಡಾಕ್ಯುಮೆಂಟರಿ ಅಂದ್ರೆ ಟಿವಿ, ಯೂಟ್ಯೂಬ್‌ನಲ್ಲಿ ನೋಡುವುದು ಎನ್ನುವ ಕಾಲವೊಂದಿತ್ತು. ಆದರೆ ಈಗ ಥೇಟ್ ಸಿನಿಮಾ ಶೈಲಿಯಲ್ಲಿ ಅದ್ಭುತವಾಗಿ ಡಾಕ್ಯುಮೆಂಟರಿಗಳನ್ನು ನಿರ್ಮಿಸಿ ತೆರೆಗೆ ತರಲಾಗುತ್ತಿದೆ. ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದ 'ಗಂಧದಗುಡಿ' ಅದಕ್ಕೆ ಒಳ್ಳೆ ಉದಾಹರಣೆ. ಈ ವಾರ ಅಂಥದ್ದೇ ಡಾಕ್ಯು ಸಿನಿಮಾ 'ನೀಲ್‌ಗಿರೀಸ್' ತೆರೆಗೆ ಬರ್ತಿದೆ.

ಟೈಟಲ್ ಹೇಳುವಂತೆ ನೀಲ್‌ಗಿರೀಸ್ ಕುರಿತಾದ ಡಾಕ್ಯುಮೆಂಟರಿ ಇದು. ತಮಿಳುನಾಡು, ಕೇರಳ ಮತ್ತು ಕರ್ನಾಟಕ ಗಡಿಯ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ ನೀಲ್‌ಗಿರೀಸ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಈ ಡಾಕ್ಯುಮೆಂಟರಿಯಲ್ಲಿ ಕಟ್ಟಿಕೊಡಲಾಗಿದೆ. ಅಲ್ಲಿನ ಜೀವವೈವಿಧ್ಯ, ಸಸ್ಯ ಸಂಪತ್ತಿನ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಎಮ್ಮಿ-ನಾಮನಿರ್ದೇಶಿತ ಮತ್ತು BAFTA-ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಸಂದೇಶ್ ಕಡೂರ್ 'ನೀಲ್‌ಗಿರೀಸ್: ಎ ಶೇರ್ಡ್ ವೈಲ್ಡರ್ನೆಸ್' ಡಾಕ್ಯುಮೆಂಟರಿ ನಿರ್ದೇಶಿಸಿದ್ದು ಫೆಲಿಸ್ ಕ್ರಿಯೇಶನ್ಸ್ ಸಂಸ್ಥೆ ಅದ್ಧೂರಿಯಾಗಿ ನಿರ್ಮಾಣ ಮಾಡಿದೆ.

Sandesh Kadur s Nilgiris - A shared wilderness Documentary film coming to theatres on July 18th

ಏಳೆಂಟು ತಿಂಗಳ ಹಿಂದೆ 'ನೀಲ್‌ಗಿರೀಸ್: ಎ ಶೇರ್ಡ್ ವೈಲ್ಡರ್ನೆಸ್' ಡಾಕ್ಯುಮೆಂಟರಿ ಟ್ರೈಲರ್ ಸಹ ಬಿಡುಗಡೆಯಾಗಿತ್ತು. ಬ್ಲೂ-ಚಿಪ್ ಡಾಕ್ಯುಮೆಂಟರಿ ಇದಾಗಿದ್ದು ತೆರೆಮೇಲೆ ಬಹಳ ಅದ್ಭುತ ಅನುಭವ ನೀಡುವಂತಿದೆ. ಈ ಮೂಲಕ ಭಾರತದ ಮೊದಲ ಯುನೆಸ್ಕೋ ಜೀವಗೋಳ ಮೀಸಲು ಪ್ರದೇಶದ ಚರಿತ್ರೆಯನ್ನು ದೊಡ್ಡದಾಗಿ ಜಗತ್ತಿನ ಮುಂದಿಡಲಾಗುತ್ತಿದೆ. ನೀಲ್‌ಗಿರೀಸ್ ಭಾಗದಲ್ಲಿ ಪ್ರಕೃತಿಯ ವಿಸ್ಮಯ ಹಾಗೂ ಮಾನವ ಜೀವನದೊಂದಿಗೆ ಅದರ ಆಳವಾದ ಸಂಬಂಧವನ್ನು ಇದರಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.

'ನೀಲ್‌ಗಿರೀಸ್: ಎ ಶೇರ್ಡ್ ವೈಲ್ಡರ್ನೆಸ್' ಡಾಕ್ಯುಮೆಂಟರಿ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದೆ. ಅಂಕಾರಾ ಅಂತರರಾಷ್ಟ್ರೀಯ ವನ್ಯಜೀವಿ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ, ವರ್ಲ್ಡ್‌ಫೆಸ್ಟ್-ಹೂಸ್ಟನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವೈಶಿಷ್ಟ್ಯ ಸಾಕ್ಷ್ಯಚಿತ್ರದಲ್ಲಿ ಪ್ಲಾಟಿನಂ ಪ್ರಶಸ್ತಿ, ಕೇನ್ಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಕೃತಿ/ವನ್ಯಜೀವಿ ಚಲನಚಿತ್ರ ಮತ್ತು ಅತ್ಯುತ್ತಮ ಭಾರತೀಯ ಚಲನಚಿತ್ರ ಎಂಬ ಪ್ರಶಸ್ತಿಗಳಿಗೆ ಭಾಜನವಾಗಿತ್ತು.

ನೀಲ್‌ಗಿರೀಸ್ ಬೆಟ್ಟಗಳು ಪಶ್ಚಿಮ ಘಟ್ಟದ ಒಂದು ಭಾಗ. ಕನಿಷ್ಠ 24 ನೀಲಗಿರಿ ಪರ್ವತ ಶಿಖರಗಳು 2,000 ಮೀಟರ್‌ಗಳಷ್ಟು ಎತ್ತರವಾಗಿವೆ. ಇದೇ ಭಾಗದಲ್ಲಿ ಟೀ ಎಸ್ಟೇಟ್‌ಗಳಿದ್ದು ಕರಿ ಚಿರತೆ, ಗೌರ್ ಹಾಗೂ ಕರಡಿಗಳನ್ನು ಅಲ್ಲಿ ನೋಡಬಹುದು. ಇಂತಹ ದೃಶ್ಯ ಜಗತ್ತಿನ ಬೇರೆ ಭಾಗಗಳಲ್ಲಿ ನೋಡಲು ಸಿಗುವುದು ಕಷ್ಟ. ಇಂತಹ ವಿಚಾರಗಳನ್ನೆಲ್ಲಾ ಬಹಳ ಸೊಗಸಾಗಿ ಡಾಕ್ಯುಮೆಂಟರಿಯಲ್ಲಿ ಹೇಳಿದ್ದಾರೆ.

ಅತ್ಯಾಧುನಿಕ ಕ್ಯಾಮರಾಗಳನ್ನು ಬಳಸಿ ನೀಲ್‌ಗಿರೀಸ್ ಪರ್ವತಗಳನ್ನು ಬಹಳ ಸೊಗಸಾಗಿ ಚಿತ್ರಿಸಲಾಗಿದೆ. ಟ್ರೈಲರ್ ನೋಡಿದರೆ ಅದರ ಗುಣಮಟ್ಟ ಹೇಗಿದೆ ಎನ್ನುವುದು ಅರ್ಥವಾಗುತ್ತದೆ. ಮುಖ್ಯವಾಗಿ ಮಕ್ಕಳಿಗೆ ಈ ಡಾಕ್ಯುಮೆಂಟರಿಯನ್ನು ತೋರಿಸಬೇಕಿದೆ. ಚಿತ್ರತಂಡ ಕೂಡ ಮಕ್ಕಳಿಗೆ ಇದನ್ನು ತೋರಿಸಿ ಎಂದು ಮನವಿ ಮಾಡಿದೆ. ರೋಹಿಣಿ ನೀಲಕಣಿ 'ನೀಲ್‌ಗಿರೀಸ್: ಎ ಶೇರ್ಡ್ ವೈಲ್ಡರ್ನೆಸ್ ಡಾಕ್ಯುಮೆಂಟರಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆ, ತಮಿಳುನಾಡು ಅರಣ್ಯ ಇಲಾಖೆ ಹಾಗೂ ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅನುಮತಿ ಹಾಗೂ ಸಹಕಾರದಿಂದ ಈ ಡಾಕ್ಯುಮೆಂಟರಿ ಸೆರೆ ಹಿಡಿಯಲಾಗಿದೆ. ಸುಶೀಲಾ ರಾಮನ್, ಸ್ಯಾಮ್ ಮಿಲ್ಸ್, ನೀಲ್ ಅಧಿಕಾರಿ ಸಂಗೀತ, ವರುಣ್ ಮನವಾಝಿ ಮತ್ತು ಪ್ರಣವ್ ನಾರಂಗ್ ಸಂಕಲನ ಈ ಡಾಕ್ಯುಮೆಂಟರಿಗೆ ಇದೆ. ಛಾಯಾಗ್ರಾಹಕರಾದ ನಕುಲ್ ರಾಜ್, ರಾಬಿನ್ ಡೇರಿಯಸ್ ಕಾನ್ಜ್, ಸಂದೇಶ್ ಕಡೂರ್, ನಿಖಿಲ್ ವಿರ್ದಿ, ಸಮೀರ್ ಜೈನ್, ಪರಿಣಿತ್ ಗೌಡ ಬಹಳ ಸೊಗಸಾಗಿ ಸೆರೆ ಹಿಡಿದಿದ್ದಾರೆ.

ಸಂದೇಶ ಹಾಗೂ ತಂಡ 3 ವರ್ಷಗಳ ಕಾಲ ಈ ಡಾಕ್ಯುಮೆಂಟರಿಯನ್ನು ಕಟ್ಟಿಕೊಟ್ಟಿದೆ. ನಾಳೆ (ಜುಲೈ 18) ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ಹಲವು ಭಾಗಗಳಲ್ಲಿ 'ನೀಲ್‌ಗಿರೀಸ್: ಎ ಶೇರ್ಡ್ ವೈಲ್ಡರ್ನೆಸ್' ಡಾಕ್ಯುಮೆಂಟರಿ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ. ನೀವು ಕೂಡ ಮಿಸ್ ಮಾಡದೇ ನೋಡಿ. ಮತ್ತಷ್ಟು ಜನರನ್ನು ನೋಡುವಂತೆ ಪ್ರೇರೇಪಿಸಿ.

More from Filmibeat

English summary
Nilgiris: A Shared Wilderness documentary film on India's first UNESCO Biosphere Reserve. releasing in cinemas on July 18th 2025;
Read more about: documentary
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X