For Quick Alerts
  ALLOW NOTIFICATIONS  
  For Daily Alerts

  ನಿಮ್ಮನ್ನೆಲ್ಲ ನಿಬ್ಬೆರಗಾಗಿಸುವ ನ್ಯೂಸ್ ಇದು.! ಅದು ದರ್ಶನ್ ಕುರಿತು.!

  By Harshitha
  |

  ಕಳೆದ ಕೆಲ ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದ್ದಾರೆ. ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಅಭಿನಯದ ಸಿನಿಮಾಗಳು ಕೂಡ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿವೆ. ಆ ಎಲ್ಲ ಸುದ್ದಿಗಳನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೆಲ್ಲ ಓದಿದ್ದೀರಾ.

  ಈಗ ಅದೇ ದರ್ಶನ್ ಕುರಿತು ಹೊಸ ಸುದ್ದಿಯೊಂದು ಬ್ರೇಕ್ ಆಗಿದೆ. ಆ ಸುದ್ದಿ ಗೊತ್ತಾದರೆ, ನೀವು ಖಂಡಿತ ನಿಮ್ಮ ಬಾಯಿ ಮೇಲೆ ಬೆರಳಿಟ್ಟು ನಿಬ್ಬೆರಗಾಗುತ್ತೀರಾ... ಅಸಲಿಗೆ, ಆ ಸುದ್ದಿ ಏನು ಅಂತೀರಾ.? ಫೋಟೋ ಸಮೇತ ಸಂಪೂರ್ಣ ಮಾಹಿತಿ ಓದಿರಿ...

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಕ್ಕಿದೆ ಅತ್ಯಂತ ದುಬಾರಿ ಉಡುಗೊರೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಿಕ್ಕಿದೆ ಅತ್ಯಂತ ದುಬಾರಿ ಉಡುಗೊರೆ

  ಇತ್ತೀಚೆಗಷ್ಟೇ (ಫೆಬ್ರವರಿ 16) ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅವರ ಹುಟ್ಟುಹಬ್ಬಕ್ಕೆ ಸಿಕ್ಕಿರುವ ದುಬಾರಿ ಉಡುಗೊರೆ ಈಗ ಸ್ಯಾಂಡಲ್ ವುಡ್ಡಿನಾದ್ಯಂತ ಸದ್ದು ಮಾಡುತ್ತಿದೆ.

  ದರ್ಶನ್ ಗೆ ಸಿಕ್ಕಿರುವ ಉಡುಗೊರೆ ಏನು.?

  ದರ್ಶನ್ ಗೆ ಸಿಕ್ಕಿರುವ ಉಡುಗೊರೆ ಏನು.?

  ದರ್ಶನ್ ರವರಿಗೆ ಬರ್ತಡೇ ಗಿಫ್ಟ್ ಆಗಿ ಅತ್ಯಂತ ದುಬಾರಿ ಅಗಿರುವ Porsche ಕಾರ್ ಲಭಿಸಿದೆ.

  ಉಡುಗೊರೆ ಕೊಟ್ಟವರು ಯಾರು.?

  ಉಡುಗೊರೆ ಕೊಟ್ಟವರು ಯಾರು.?

  ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ರವರು ದರ್ಶನ್ ರವರ 40ನೇ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ Porsche ಕಾರ್ ಕೊಟ್ಟಿದ್ದಾರೆ.

  Porsche ಕಾರ್ ಬೆಲೆ ಎಷ್ಟು ಗೊತ್ತಾ.?

  Porsche ಕಾರ್ ಬೆಲೆ ಎಷ್ಟು ಗೊತ್ತಾ.?

  ದರ್ಶನ್ ರವರಿಗೆ ಸಿಕ್ಕಿರುವ Porsche ಕಾರ್ ಬೆಲೆ ಸುಮಾರು ಒಂದುವರೆ ಕೋಟಿ ರೂಪಾಯಿ ಮೌಲ್ಯದ್ದು.

  ಐದು ವರ್ಷಗಳ ಹಿಂದೆ 'ಜಾಗ್ವಾರ್' ಗಿಫ್ಟ್

  ಐದು ವರ್ಷಗಳ ಹಿಂದೆ 'ಜಾಗ್ವಾರ್' ಗಿಫ್ಟ್

  2012 ರ ದರ್ಶನ್ ಹುಟ್ಟುಹಬ್ಬದಂದು ಪತ್ನಿ ವಿಜಯಲಕ್ಷ್ಮಿ ನೀಲಿ ಬಣ್ಣದ 'ಜಾಗ್ವಾರ್' ಕಾರ್ ನ ಉಡುಗೊರೆ ಆಗಿ ನೀಡಿದ್ದರು.[ದರ್ಶನ್ ಜಾಗ್ವಾರ್ ಕಾರಿನಲ್ಲಿ ಏನುಂಟು, ಏನಿಲ್ಲ]

  ದರ್ಶನ್ ಬಳಿ ಇರುವ ಕಾರುಗಳು...

  ದರ್ಶನ್ ಬಳಿ ಇರುವ ಕಾರುಗಳು...

  ಈಗಾಗಲೇ ದರ್ಶನ್ ರವರ ಬಳಿ ದುಬೈನಿಂದ ಆಮದಾಗಿರುವ ಹಮ್ಮರ್ ಎಚ್ 3, ಆಡಿ ಎ6, ಆಡಿ-8, ಜಾಗ್ವಾರ್, ಟೊಯೊಟಾ ಫಾರ್ಚೂನರ್ ಕಾರುಗಳಿವೆ. ಈಗ ಇವೆಲ್ಲದರ ಜೊತೆ Porsche ಕಾರ್ ಸೇರಿಕೊಂಡಿದೆ.[ದರ್ಶನ್ 'ಗಲಾಟೆ ಸಂಸಾರ'ಕ್ಕೆ ಕಾರಣವಾಗಿರುವ Audi ಕಾರ್ ಕುರಿತು..]

  ಸಂದೇಶ್ ನಾಗರಾಜ್ - ದರ್ಶನ್ ಸ್ನೇಹ

  ಸಂದೇಶ್ ನಾಗರಾಜ್ - ದರ್ಶನ್ ಸ್ನೇಹ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ನಿರ್ಮಾಪಕ ಸಂದೇಶ್ ನಾಗರಾಜ್ ಅತ್ಯಾಪ್ತ. ಅವರ ಸ್ನೇಹ ಇಂದು ನಿನ್ನೆಯದ್ದಲ್ಲ. ದರ್ಶನ್ ಗಾಗಿ 'ಪ್ರಿನ್ಸ್' ಮತ್ತು 'ಐರಾವತ' ಚಿತ್ರಗಳನ್ನ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ.

  English summary
  Producer Sandesh Nagaraj gifts Costly Porsche Car for Darshan's 40th Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X