For Quick Alerts
  ALLOW NOTIFICATIONS  
  For Daily Alerts

  ಇಂದ್ರಜಿತ್ ಹೇಳಿದ ಸಪ್ಲೈಯರ್ ಗಂಗಾಧರ್ ಪ್ರತ್ಯಕ್ಷ: ಸಂದೇಶ್ ಸುಳ್ಳು ಹೇಳಿದ್ರಾ?

  |

  ಹೋಟೆಲ್ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಆರೋಪ ಮಾಡಿದರು. ಇಂದ್ರಜಿತ್ ಆರೋಪ ತಳ್ಳಿ ಹಾಕಿದ್ದ ಹೋಟೆಲ್ ಮಾಲೀಕ ಸಂದೇಶ್ 'ಹಲ್ಲೆ ಆಗಿಲ್ಲ, ಬೈಯ್ದರು ಅಷ್ಟೇ, ಅವರು ಕನ್ನಡದವರಲ್ಲ ಬಿಹಾರದವರು, ಅವರ ಕಾಂಟ್ರಾಕ್ಟ್ ಮುಗಿತು, ಹೊರಟು ಹೋದರು' ಎಂದು ಸ್ಪಷ್ಟನೆ ಕೊಟ್ಟಿದ್ದರು.

  Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada

  ಸಂದೇಶ್ ಹೇಳಿದ್ದು ಸುಳ್ಳು, ಬಿಹಾರದವರು ಅಲ್ಲ, ಪಂಜಾಬಿಯವರು ಅಲ್ಲ. ಆತ ಕನ್ನಡದವನೇ, 50 ವರ್ಷ ವಯಸ್ಸು ಆಗಿತ್ತು. ಆತನ ಹೆಸರು ಗಂಗಾಧರ್ ಎಂದು 'ಲಂಕೇಶ್' ಪತ್ರಿಕೆಯ ಸಂಪಾದಕ ದೂರಿದರು. ಯಾರ ಮಾತು ನಿಜ, ಯಾರ ಮಾತು ಸುಳ್ಳು ಎಂಬ ಗೊಂದಲದ ನಡುವೆಯೇ ಗಂಗಾಧರ್ ಪ್ರತ್ಯಕ್ಷರಾಗಿದ್ದಾರೆ. ಮೈಸೂರು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಮುಂದೆ ಓದಿ...

  ಸಂದೇಶ್ ಪ್ರಿನ್ಸ್ ಹೋಟೆಲ್‌ಗೆ ಪೊಲೀಸರು ಭೇಟಿ

  ಸಂದೇಶ್ ಪ್ರಿನ್ಸ್ ಹೋಟೆಲ್‌ಗೆ ಪೊಲೀಸರು ಭೇಟಿ

  ಮೈಸೂರು ಎಸಿಪಿ ಶಶಿಧರ್, ನಜರ್‌ಬಾದ್ ಠಾಣೆ ಇನ್ಸ್‌ಪೆಕ್ಟರ್ ಶ್ರೀಕಾಂತ್ ನೇತೃತ್ವದ ಪೊಲೀಸರ ತಂಡ ಶುಕ್ರವಾರ ಬೆಳಗ್ಗೆ ಸಂದೇಶ್ ಪ್ರಿನ್ಸ್ ಹೋಟೆಲ್‌ಗೆ ಭೇಟಿ ನೀಡಿ ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಗಂಗಾಧರ್ ಅವರ ಬಳಿ ಪೊಲೀಸರು ಹೇಳಿಕೆ ಪಡೆದುಕೊಂಡಿರುವ ವಿಚಾರ ಹೊರಬಿದ್ದಿದೆ.

  'ದರ್ಶನ್ ಏಳಿಗೆ ಸಹಿಸದೆ ಇಂತಹ ಕೇಸ್ ಹಾಕಲಾಗುತ್ತಿದೆ': ಬಿಸಿ ಪಾಟೀಲ್'ದರ್ಶನ್ ಏಳಿಗೆ ಸಹಿಸದೆ ಇಂತಹ ಕೇಸ್ ಹಾಕಲಾಗುತ್ತಿದೆ': ಬಿಸಿ ಪಾಟೀಲ್

  ಇಂದ್ರಜಿತ್ ಹೇಳಿದ್ದು ನಿಜ ಆಯ್ತು

  ಇಂದ್ರಜಿತ್ ಹೇಳಿದ್ದು ನಿಜ ಆಯ್ತು

  ಹಲ್ಲೆಗೊಳಗಾದ ವ್ಯಕ್ತಿ ಕನ್ನಡಿಗನೇ. 50 ವರ್ಷ ವಯಸ್ಸು. ಆತ ಸುಮಾರು ವರ್ಷದಿಂದ ಪ್ರಿನ್ಸ್ ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ದರು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಒತ್ತಿ ಒತ್ತಿ ಹೇಳಿದರು. ಇಂದ್ರಜಿತ್ ಹೇಳಿದ್ದು ನಿಜ ಆಗಿದೆ. ಗಂಗಾಧರ್ ಎನ್ನುವ ವ್ಯಕ್ತಿ ಇದ್ದರು, ಗಲಾಟೆ ನಡೆದ ದಿನ ಅವರಿದ್ದರು. ಹಾಗಾಗಿಯೇ ಪೊಲೀಸರು ಗಂಗಾಧರ್ ಅವರ ಹೇಳಿಕೆ ಪಡೆದುಕೊಂಡಿದ್ದಾರೆ. ಹಾಗಾದ್ರೆ, ಸಂದೇಶ್ ಅವರು ಈ ವಿಚಾರದಲ್ಲಿ ಸುಳ್ಳು ಹೇಳಿದ್ದು ಏಕೆ ಎಂಬ ಅನುಮಾನವೂ ಇದೆ.

  ಗಂಗಾಧರ್ ಹೇಳಿಕೆ ಮೇಲೆ ಕೇಸ್ ನಿರ್ಧಾರ

  ಗಂಗಾಧರ್ ಹೇಳಿಕೆ ಮೇಲೆ ಕೇಸ್ ನಿರ್ಧಾರ

  ಗಂಗಾಧರ್ ಅವರು ಘಟನೆ ಬಗ್ಗೆ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಈಗ ಗಂಗಾಧರ್ ಹೇಳಿಕೆ ಮೇಲೆ ಈ ಪ್ರಕರಣದ ಭವಿಷ್ಯ ನಿಂತಿದೆ. ಒಂದು ವೇಳೆ ಗಂಗಾಧರ್ ಅವರು ಹಲ್ಲೆ ಆಗಿದ್ದು ನಿಜ ಎಂದು ಹೇಳಿಕೆ ಕೊಟ್ಟರೆ ದರ್ಶನ್ ಅವರಿಗೆ ಇದು ಕಂಟಕ ಆಗಬಹುದು. ಅಥವಾ ಗಂಗಾಧರ್ ಅವರು ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ಕೊಟ್ಟರೆ ಈ ಪ್ರಕರಣ ಇಲ್ಲಿಗೆ ಇತ್ಯರ್ಥವಾಗುವ ಸಾಧ್ಯತೆ ಇದೆ.

  ಇಂದ್ರಜಿತ್ ಲಂಕೇಶ್ ನಾಲ್ಕು ಆರೋಪ

  ಇಂದ್ರಜಿತ್ ಲಂಕೇಶ್ ನಾಲ್ಕು ಆರೋಪ

  ಲಾಕ್‌ಡೌನ್ ಸಮಯದಲ್ಲಿ ದರ್ಶನ್ ಮತ್ತು ಸ್ನೇಹಿತರು ಪಾರ್ಟಿ ಮಾಡಿದ್ದರು. ಆ ಸಂದರ್ಭದಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಗೋಪಾಲ್ ರಾಜ್ ಎನ್ನುವವರನ್ನು ಹೊಡೆದಿದ್ದರು. ತೋಟದಲ್ಲಿ ವ್ಯಕ್ತಿಯೊಬ್ಬರನ್ನು ಹೊಡೆದರು. ಅರುಣಾ ಕುಮಾರಿಯನ್ನು ಸ್ವಾರ್ಥಕ್ಕೆ ಬಳಕೆ ಮಾಡಲಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿ ಮಾಡಿದ್ದರು. ಈ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದು, ತನಿಖೆ ಮಾಡಿ ಸೆಲೆಬ್ರಿಟಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಮನವಿ ಮಾಡಿದ್ದರು.

  English summary
  Darshan Assault Allegations: Sandesh Prince Hotel staff Gangadhar records his statement in front of Mysuru police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X